×
Ad

ಹೊಸಪೇಟೆ:‌ ಪಹಲ್ಗಾಮ್‌‌ನಲ್ಲಿ ಭಯೋತ್ಪಾದಕ ದಾಳಿ ಖಂಡಿಸಿ ಪ್ರತಿಭಟನೆ

Update: 2025-04-26 23:55 IST

ಹೊಸಪೇಟೆ: ನಗರದ ಜೈಭೀಮ್ ವೃತ್ತದಲ್ಲಿ ಹೊಸಪೇಟೆಯ ಅಂಜುಮನ್ ಖಿದ್ಮತೆ ಇಸ್ಲಾಂ (ರಿ) ವತಿಯಿಂದ ಕಾಶ್ಮೀರದ ಪಹಲ್ಗಾಮ್‌‌ನಲ್ಲಿ ಉಗ್ರರು ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ನಡೆದ ಭೀಕರ ಭಯೋತ್ಪಾದಕ ದಾಳಿಯನ್ನು ಖಂಡಿಸಿ ಹಾಗೂ ದಾಳಿಯಿಂದಾಗಿ ಮೃತಪಟ್ಟವರಿಗೆ ಮೇಣದ ಬತ್ತಿ ಹಚ್ಚುವ ಮೂಲಕ ಶದ್ರಾಂಜಲಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹೊಸಪೇಟೆ ಅಂಜುಮನ್ ಕಿದ್ಮತೆ ಇಸ್ಲಾಂ ಸಮಿತಿಯ ಅಧ್ಯಕ್ಷರಾದ ಎಚ್.ಎನ್ ಮೊಹಮ್ಮದ್ ಇಮಾಮ ನಿಯಾಝಿ, ಪಹಲ್ಗಾಮ್ ನಲ್ಲಿ ಅಮಾಯಕ ಪ್ರವಾಸಿಗರ ಮೇಲೆ ನಡೆದ ಉಗ್ರಗಾಮಿಗಳ ಕೃತ್ಯವನ್ನು ಖಂಡಿಸುತ್ತೇವೆ. ಕೆಲವೊಂದು ಎಲೆಕ್ಟ್ರಾನಿಕ್ ಮೀಡಿಯಾ ಗಳು ಹಾಗೂ ಕೆಲ ರಾಜಕಾರಣಿಗಳು ಜಾತಿ ಧರ್ಮ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಹಿಂದೂ ಮುಸ್ಲಿಮರ ಸಾಮರಸ್ಯವನ್ನು ಹಾಳು ಮಾಡುತ್ತಿದ್ದಾರೆ ಎಂದರು.

ಶಾಂತಿಯನ್ನು ಕದಡುವ ಉಗ್ರಗಾಮಿಗಳಿಗೆ ತಕ್ಕ ಶಿಕ್ಷೆಯಾಗಲೇಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು , ನಂತರ ಮೃತಪಟ್ಟ ಎಲ್ಲರಿಗೂ ಆತ್ಮಕ್ಕೆ ಶಾಂತಿ ಸಿಗಲೆಂದು ಹಾಗೂ ಎಲ್ಲಾ ಕುಟುಂಬದವರಿಗೂ ದುಃಖವನ್ನು ಭರಿಸಲು ಶಕ್ತಿಯನ್ನು ನೀಡಲು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇವೆ ಎಂದರು.

ಈ ಸಂದರ್ಭ ನಾಜಿಮ್, ಫಜಲುಲ್ಲಾ, ರೆಹಮತ, ವಕ್ಫ್ ಬೋರ್ಡ್ ನ ಜಿಲ್ಲಾಧ್ಯಕ್ಷರಾದ ದಾದಾಪೀರ್ ಭಾವ್, ಅಂಜುಮನ್ ಕಮಿಟಿಯ ಉಪಾಧ್ಯಕ್ಷ ಎಮ್.ಎಮ್, ಫೈರೋಝ್ ಖಾನ್, ಕಾರ್ಯದರ್ಶಿಯಾದ ಅಬೂಬಕ್ಕರ್ ಅಶ್ರಫಿ, ಜಂಟಿಕಾರ್ಯದರ್ಶಿಯಾದ ಡಾ. ದರ್ವೇಶ್ ಮೈನುದ್ದಿನ್. ಸದ್ಯಸರಾದ ಗುಲಾಮ್ ರಸೂಲ್, ಖಾದರ್ ರಫಾಯಿ, ಹಾಗೂ ಮಸೀದಿಗಳ ಅಫೀಸಾಬ್ ಗಳು ಸಮಾಜದ ಹಿರಿಯ ಮುಖಂಡರು ಯುವಕರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News