ದಸರಾ ಉದ್ಘಾಟನೆಗೆ ಮುಸ್ಲಿಮರು ಬಿಟ್ಟು ಬೇರೆಯವರು ಇರಲಿಲ್ವಾ: ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್
Update: 2025-08-25 22:12 IST
ವಿಜಯನಗರ, ಆ.25: ಮೈಸೂರು ದಸರಾ ಉದ್ಘಾಟನೆಗೆ ಮುಸ್ಲಿಮರು ಬಿಟ್ಟು ಬೇರೆ ಯಾರೂ ಇರಲಿಲ್ವಾ ಎಂದು ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವುದಕ್ಕೆ ರಾಜ್ಯ ಸರಕಾರದ ವಿರುದ್ಧ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹೊಸಪೇಟೆ ನಗರದ ಟಿ.ಬಿ.ಡ್ಯಾಮ್ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಕ್ರಸ್ಟ್ ಗೇಟ್ ಗಳನ್ನು ವೀಕ್ಷಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಸರಾ ಉದ್ಘಾಟನೆಗೆ ಮುಸ್ಲಿಮರು ಬಿಟ್ಟು ಬೇರೆಯಾರು ಸಿಗೋದಿಲ್ವಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.
ಮುಸ್ಲಿಮ್ ಧರ್ಮದವರಿಗೆ ಹಿಂದೂ ಪದ್ಧತಿಯ ಬಗ್ಗೆ ನಂಬಿಕೆ ಇರುವುದಿಲ್ಲ. ದಸರಾ ಉದ್ಘಾಟನೆಯಲ್ಲಿ ಚಾಮುಂಡೇಶ್ವರಿಗೆ ಪೂಜೆ ಮಾಡಬೇಕು. ಅದನ್ನು ಬಾನು ಮುಷ್ತಾಕ್ ಅವರು ಮಾಡುತ್ತಾರೆಯೇ, ಹಿಂದೂ ಧರ್ಮದ ಸಂಸ್ಕೃತಿ ಒಪ್ಪಿಕೊಂಡು ಪೂಜೆ ಮಾಡುತ್ತೇನೆ ಎಂದು ಬಾನು ಮುಷ್ತಾಕ್ ಅವರು ಹೇಳಲಿ. ಆಗ ನೋಡೋಣ ಎಂದರು.