ವಿಜಯನಗರ | 104 ವರ್ಷದ ಸೂಲಗಿತ್ತಿ ಈರಮ್ಮಗೆ ʼʼಕನ್ನಡ ರಾಜ್ಯೋತ್ಸವ ಪ್ರಶಸ್ತಿʼ
ಈರಮ್ಮ
ವಿಜಯನಗರ : ರಾಜ್ಯ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಡಮಾಡುವ 2025-26ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದ್ದು, ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಸೂಲಗಿತ್ತಿ ಈರಮ್ಮ ಅವರು "ಸಮಾಜಸೇವೆ" ವಿಭಾಗದಲ್ಲಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಂಡುಮುಣುಗು ಗ್ರಾ.ಪಂ ವ್ಯಾಪ್ತಿಯ ಓಬಳಶೆಟ್ಟಿಹಳ್ಳಿ ಗ್ರಾಮದ ಈರಮ್ಮ ಕಳೆದ ಆರು ದಶಕಗಳಿಂದ ಸೂಲಗಿತ್ತಿಯಾಗಿ ಸುಮಾರು ಹದಿನಾಲ್ಕು ಸಾವಿರಕ್ಕೂ ಹೆಚ್ಚು ಹೆರಿಗೆ ಮಾಡಿಸಿದ್ದಾರೆ.
ಯಾವುದೇ ತರಬೇತಿ ಪಡೆಯದೆ ಈರಮ್ಮ ಒಂದೇ ಒಂದು ಮಗು ಹಾಗೂ ತಾಯಿಯ ಪ್ರಾಣಕ್ಕೆ ಹಾನಿಯಾಗದೆ ಹೆರಿಗೆ ಮಾಡಿಸಿದ್ದಾರೆ. ಇದಲ್ಲವೆ, ಕಣ್ಣುಗಳಲ್ಲಿ ಬಿದ್ದ ಕಸ, ಧೂಳು ಮತ್ತು ಸಣ್ಣ ಹರಳನ್ನು ಕೊಳವೆಯ ಮೂಲಕ ತೆಗೆಯುವುದು, ಬುಟ್ಟಿ ನೇಯುವುದು ಅವರ ನಿತ್ಯದ ಕಾಯಕ, ಅವರಿಗೆ ಒರ್ವ ಪುತ್ರ. ಇಬ್ಬರು ಹೆಣ್ಣುಮಕ್ಕಳಿದ್ದಾರೆ.
ಸೂಲಗಿತ್ತಿ ಈರಮ್ಮರವರಿಗೆ 104 ವರ್ಷ ವಯಸ್ಸಾಗಿದ್ದು, ಸೂಲಗಿತ್ತಿ ಕಾಯಕವನ್ನು ವಯಸ್ಸಾದ ಕಾರಣದಿಂದ ಮೂರು ವರ್ಷದಿಂದ ನಿಲ್ಲಿಸಿದ್ದಾರೆ.