ವಿಜಯನಗರ | ವಿಕಲಚೇತನರ ಆರೈಕೆದಾರರಿಂದ ಪ್ರೋತ್ಸಾಹಧನಕ್ಕೆ ಅರ್ಜಿ ಅಹ್ವಾನ
ವಿಜಯನಗರ(ಹೊಸಪೇಟೆ) : 2025-26ನೇ ಸಾಲಿನಲ್ಲಿ ವಿಕಲಚೇತನರ ಹಾಗೂ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಮೆದುಳಿನ ದುರ್ಬಲತೆ, ಆಟಿಸಂ, ಬೌದ್ಧಿಕ ವಿಕಲತೆ ಮತ್ತು ಬಹುವಿಧದ ಅಂಗವಿಕಲತೆ (ಶ್ರವಣ ಮತ್ತು ದೃಷ್ಟಿ ನ್ಯೂನತೆ) ಇರುವ ಶೇ.75 ಕ್ಕಿಂತ ಹೆಚ್ಚು ಅಂಗವಿಕಲತೆಯುಳ್ಳ ವ್ಯಕ್ತಿಗಳ ಆರೈಕೆ ಮಾಡುವವರಿಗೆ ಮಾಹೆಯಾನ 1000 ರೂ. ಗಳ ಪ್ರೋತ್ಸಾಹಧನ ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ರಾಮಾಂಜನೇಯ ತಿಳಿಸಿದ್ದಾರೆ.
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಜಿಲ್ಲಾ ಅಂಗವಿಕರ ಕಲ್ಯಾಣಾಧಿಕಾರಿಗಳ ಕಚೇರಿ ಅಥವಾ ಆಯಾ ಗ್ರಾಪಂ ವಿಆರ್‌ಡಬ್ಲೂ, ನಗರಸಭೆಯ ಯುಆರ್‌ಡಬ್ಲೂ ಹಾಗೂ ತಾಪಂಯ ಎಂಆರ್‌ಡಬ್ಲೂ ಕೇಂದ್ರಗಳಲ್ಲಿ ಅರ್ಜಿಗಳನ್ನು ಪಡೆಯಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ಜಿಲ್ಲಾ ಅಂಗವಿಕರ ಕಲ್ಯಾಣಾಧಿಕಾರಿಗಳ ಕಚೇರಿಗೆ ಜೂ.3 ರಿಂದ 30ರೊಳಗೆ ಸಲ್ಲಿಸಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಹೊಸಪೇಟೆಯ ಎಂಆರ್‌ಡಬ್ಲೂ ಜೆ.ರವಿಕುಮಾರ ನಾಯಕ ಮೊ.994525991, ಹರಪನಹಳ್ಳಿಯ ಎಂಆರ್‌ಡಬ್ಲೂ ಆರ್. ಧನರಾಜ್ ಮೊ.9901182525, ಹಗರಿಬೊಮ್ಮನಹಳ್ಳಿ ಎಂಆರ್‌ಡಬ್ಲೂ ಲಕ್ಷ್ಮಣ ಮೊ.9741185924, ಕೂಡ್ಲಿಗಿ ಎಂಆರ್‌ಡಬ್ಲೂ ಬಿ.ಹೆಚ್.ಚೌಡೇಶ ಮೊ.8217626361, ಹಡಗಲಿ ಎಂಆರ್‌ಡಬ್ಲೂ ಮಂಜುನಾಥ ಮೊ.9900890403 ಮತ್ತು ಕೊಟ್ಟೂರು ಎಂಆರ್‌ಡಬ್ಲೂ ಕೆ.ಲಕ್ಷ್ಮೀ ಮೊ.8296859012 ಸಂಖ್ಯೆಗೆ ಹಾಗೂ ಜಿಲ್ಲಾ ಅಂಗವಿಕರ ಕಲ್ಯಾಣಾಧಿಕಾರಿಗಳ ಕಾರ್ಯಲಯವನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.