ವಿಜಯನಗರ | ವೃದ್ಧಾಶ್ರಮ ಆರಂಭಿಸಲು ಅರ್ಹ ಸ್ವಯಂಸೇವಾ ಸಂಸ್ಥೆಗಳಿಗೆ ಅರ್ಜಿ ಅಹ್ವಾನ
Update: 2025-06-04 21:18 IST
ವಿಜಯನಗರ(ಹೊಸಪೇಟೆ) : ಹೊಸಪೇಟೆ ಕಂದಾಯ ಉಪವಿಭಾಗದ ವ್ಯಾಪ್ತಿಯಲ್ಲಿ ಹಿರಿಯ ನಾಗರಿಕರ ವೃದ್ಧಾಶ್ರಮವನ್ನು ಪ್ರಾರಂಭಿಸಲು ಅರ್ಹ ಸ್ವಯಂಸೇವಾ ಸಂಸ್ಥೆಗಳ ಅರ್ಜಿ ಅಹ್ವಾನಿಸಲಾಗಿದೆ.
ಅರ್ಹ ಆಸಕ್ತಿಯುಳ್ಳ ಸಂಸ್ಥೆಯವರು ಜೂ.5 ರಿಂದ 30 ರೊಳಗಾಗಿ ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಾರ್ಯಾಲಯ, ಆಗಾಫೆ ಎಜಿ ಪ್ರಾರ್ಥನಾಲಯ ರಸ್ತೆ, ಡಿಸಿ ಸಿವಿಲ್ ಇಂಜಿನಿಯರ್ ಕಟ್ಟಡ, ಅಮರಾವತಿ, ಹೊಸಪೇಟೆ ಕಚೇರಿಯ ಅವಧಿಯಲ್ಲಿ ಸಂಪರ್ಕಿಸಲು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ರಾಮಾಂಜಿನೇಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.