×
Ad

ವಿಜಯನಗರ | ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯಿಂದ ಬಾಲಕಾರ್ಮಿಕ ಪದ್ಧತಿ ಕುರಿತು ಜಾಗೃತಿ

Update: 2025-11-21 19:17 IST

ಹೊಸಪೇಟೆ : ಕಮಲಾಪುರು ಪಟ್ಟಣ ವ್ಯಾಪ್ತಿಯಲ್ಲಿ ಅಂಗಡಿಗಳಿಗೆ ಭೇಟಿ ನೀಡಿ ಬಾಲಕಾರ್ಮಿರನ್ನು ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ ಎನ್ನುವುದನ್ನು ಮಾಲಕರಿಗೆ ಪೋಸ್ಟರ್‌ಗಳನ್ನು ನೀಡಿ ಜಾಗೃತಿ ಮೂಡಿಸಲಾಯಿತು.

ಶಿಕ್ಷಣ ಕಲಿಯುವ ವಯಸ್ಸಿನಲ್ಲಿ ಮಕ್ಕಳು ಶಿಕ್ಷಣದಿಂದ ದೂರ ಉಳಿದು ದುಡಿಮೆಯಲ್ಲಿ ತೊಡಗಿಸಿಕೊಳ್ಳುವುದು ತಪ್ಪು. 6 ರಿಂದ 14 ವರ್ಷ ಕಡಿಮೆ ವಯಸ್ಸಿನ ಮಕ್ಕಳನ್ನು ಯಾವುದೇ ಉದ್ಯೋಗ ಅಥವಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವುದು ಸರಿಯಲ್ಲ. 18 ವರ್ಷದೊಳಗಿನ ಕಿಶೋರ ಬಾಲಕಾರ್ಮಿಕರು ಅಪಾಯಕಾರಿ ಉದ್ಯಮಗಳಲ್ಲಿ ದುಡಿಯುವುದು ಕಂಡುಬಂದಲ್ಲಿ ಇಲಾಖೆಯನ್ನು ಸಂಪರ್ಕಿಸಿ ದೂರು ನೀಡಬಹುದು ಎಂದು ಹೇಳಿದರು.  

ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಡಿ ಬಿ ಈರಣ್ಣ, ಯೋಜನಾ ನಿರ್ದೇಶಕ ಮೌನೇಶ್, ಕಾರ್ಮಿಕ ನಿರ್ದೇಶಕ ಶಿವಶಂಕರ ಬಿ ತಳವಾರ, ರೆವಿನ್ಯೂ ಇಲಾಖೆ ಗಂಗಾಧರ, ಆರೋಗ್ಯ ಇಲಾಖೆ ಎಸ್ ಮಂಜುನಾಥ, ಸಿಡಿಪಿಓ ಇಲಾಖೆ ರೇಣುಕಾ ಯಲ್ಲಮ್ಮ, ಡಿಸಿಪಿಯು,ಸಿ ಎಚ್ ಎಲ್ ನೇತ್ರಾ, ಡಿಸಿಪಿಯು ಆಪ್ತ ಸಮಾಲೋಚಕಿ ಲಲಿತಾ ಬಾರಿಕರ, ಪೊಲೀಸ್ ಎಎಸ್ಐ ತಿಪ್ಪೇಸ್ವಾಮಿ, ಸಮಾಜ ಕಲ್ಯಾಣ ಇಲಾಖೆ, ಭಿಮದಾಸ್ ಡಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಖಾದರ್ ಭಾಷಾ ಹೆಚ್, ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕಿ ಟಿ ಎನ್ ಲತಾ, ಪುರಸಭೆ ಹರೀಶ ಸೇರಿದಂತೆ ಇತರರು ಉಪಸ್ಥಿತರಿದ್ದರು.  

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News