×
Ad

ವಿಜಯನಗರ | ಆರ್‌ಬಿಐಓಎಸ್ 2021ರ ಯೋಜನೆಯ ಅರಿವು, ಜಾಗೃತಿ ಕಾರ್ಯಕ್ರಮ

Update: 2025-07-25 20:06 IST

ವಿಜಯನಗರ (ಹೊಸಪೇಟೆ) : ರಿಸರ್ವ್ ಬ್ಯಾಂಕ್ ನ ಒಮ್ಬುಡ್ಸ್ ಮ್ಯಾನ್ ಕಾರ್ಯಾಲಯವು ಗ್ರಾಹಕರ ಹಕ್ಕುಗಳ ಸಂರಕ್ಷಣೆ ಮಾಡುತ್ತದೆ ಎಂದು ಆರ್ ಬಿ ಐ ಬೆಂಗಳೂರಿನ ಸಹಾಯಕ ಮಹಾ ಪ್ರಬಂಧಕರಾದ ರಾಧಾ ಪ್ರಭಾಕರ್ ಹೇಳಿದರು.

ಅವರು ಭಾರತೀಯ ರಿಸರ್ವ್ ಬ್ಯಾಂಕ್ ಒಮ್ಬುಡ್ಸ್ ಮ್ಯಾನ್ ಕಾರ್ಯಾಲಯ ಬೆಂಗಳೂರು ಮತ್ತು ವಿಜಯನಗರ ಜಿಲ್ಲೆಯ ಮಾರ್ಗದರ್ಶಿ ಬ್ಯಾಂಕುಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಆರ್‌ಬಿಐಓಎಸ್ 2021ರ ಯೋಜನೆಯ ಅರಿವು ಮತ್ತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಹಕರಿಗೆ ಸೇವೆಯಲ್ಲಿ ಉಂಟಾಗುವ ತೊಂದರೆಯನ್ನು ಗಮನಿಸಿ ಆರ್‌ಬಿಐಓಎಸ್ 2021ರ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ಈ ಯೋಜನೆಯನ್ವಯ ಗ್ರಾಹಕರು ಭಾರತದ ಯಾವುದೇ ಪ್ರದೇಶದಲ್ಲಿ ಯಾವುದೇ ಬ್ಯಾಂಕಿನ ಸೇವೆಯಲ್ಲಿ ತೊಂದರೆಯನ್ನು ಅನುಭವಿಸಿದ್ದರೆ ಉಚಿತವಾಗಿ ಅವರು ಪರಿಹಾರ ಪಡೆಯಬಹುದು ಎಂದರು.

ಕಾರ್ಯಕ್ರಮದಲ್ಲಿ ಆರ್ ಬಿ ಐ ಬೆಂಗಳೂರಿನ ಸೀಮಾ ಯಾದವ್, ಜಾನ್ಹವಿ, ವಿನೋದ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಪ್ರಾದೇಶಿಕ ವ್ಯವಸ್ಥಾಪಕ ಕೃಷ್ಣ ಜಿ. ಮತ್ತು ವಿಜಯನಗರ ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನ ವ್ಯವಸ್ಥಾಪಕರಾದ ವೀರೇಂದ್ರ ಕುಮಾರ್ ಕೆಎಂ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News