×
Ad

ವಿಜಯನಗರ | ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ : ಪ್ರಕರಣ ದಾಖಲು

Update: 2025-11-27 18:42 IST

ಸಾಂದರ್ಭಿಕ ಚಿತ್ರ

ವಿಜಯನಗರ(ಹೊಸಪೇಟೆ) : ಕಮಲಾಪುರದ ಹೆಚ್‌ಪಿಸಿ ಬಳಿ ಇರುವ ಪೋರ್‌ವೇ ಕಾಲುವೆ ನೀರಿನಲ್ಲಿ ಸುಮಾರು 40 ರಿಂದ 45 ವರ್ಷದ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ.

ಈ ಕುರಿತು ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತ ವ್ಯಕ್ತಿಯು ಸುಮಾರು 5.6 ಅಡಿ ಎತ್ತರ, ದೃಡವಾದ ಮೈಕಟ್ಟು ಹೊಂದಿದ್ದಾರೆ. ಕಾಫಿ ಬಣ್ಣದ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುವುದು ಕಂಡು ಬಂದಿದೆ.  

ಈ ಬಗ್ಗೆ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ ಮೊಬೈಲ್‌ ಸಂಖ್ಯೆ 9480805700, ಜಿಲ್ಲಾ ಎಸ್.ಪಿ ಮೊಬೈಲ್‌ ಸಂಖ್ಯೆ 948805701, ಕಮಲಾಪುರ ಠಾಣೆ ಪಿಎಸ್‌ಐ ಮೊಬೈಲ್‌ ಸಂಖ್ಯೆ 9480805762 ಗೆ ಸಂಪರ್ಕಿಸುವಂತೆ ಮನವಿ ಮಾಡಲಾಗಿದೆ.  

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News