ವಿಜಯನಗರ | ರೈಲು ಹಳಿ ಮೇಲೆ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ : ಪ್ರಕರಣ ದಾಖಲು
ಸಾಂದರ್ಭಿಕ ಚಿತ್ರ
ವಿಜಯನಗರ(ಹೊಸಪೇಟೆ) : ಬಳ್ಳಾರಿ ಮತ್ತು ಕಂಟೋನ್ ಮೆಂಟ್ ರೈಲು ನಿಲ್ದಾಣಗಳ ಮದ್ಯಭಾಗದಲ್ಲಿ ಜೂ.13 ರಂದು ರೈಲು ಹಳಿಯ ಮೇಲೆ ಸುಮಾರು 30 ವರ್ಷದ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು, ಬಳ್ಳಾರಿ ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ವ್ಯಕ್ತಿ ಚಹರೆ : 5.6 ಅಡಿ ಎತ್ತರ, ತೆಳ್ಳನೆ ಮೈಕಟ್ಟು, ಕೋಲು ಮುಖ, ಗೋಧಿ ಮೈಬಣ್ಣ, ತಲೆಯಲ್ಲಿ ಎರಡು ಇಂಚು ಕಪ್ಪು ಕೂದಲು ಹಾಗೂ ಒಂದು ಇಂಚು ಗಡ್ಡ ಮತ್ತು ಮೀಸೆ ಬಿಟ್ಟಿರುತ್ತಾನೆ. ಹಾಗೂ ಬಲಗೈ ಮೊಣಕೈ ಮುಂದೆ ಆಂಗ್ಲ ಭಾಷೆಯಲ್ಲಿ GOUTAM ಮತ್ತು ಓಂ ಇರುವ ಹಚ್ಚಿ ಹಾಕಿಸಿಕೊಂಡಿರುತ್ತಾನೆ. ಕಪ್ಪು ಬಣ್ಣದ ತುಂಬ ತೋಳಿನ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಹಾಗೂ ಮ್ಯಾಚೋ ಕಂಪನಿಯ ನಶಿ ಬಣ್ಣದ ಅಂಡರವೇರ್ ಅನ್ನು ಧರಿಸಿರುತ್ತಾನೆ.
ಮೃತವ್ಯಕ್ತಿಯ ವಾರಸುದಾರರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬಳ್ಳಾರಿ ರೈಲ್ವೆ ಪೊಲೀಸ್ ಠಾಣೆ, ದೂ.08392-276063 ಇಮೇಲ್ : bellaryrly@ksp.gov.in ಅಥವಾ ರೈಲ್ವೇ ಪೊಲೀಸ್ ಕಂಟ್ರೋಲ್ ರೂಂ 080-22871291 ಬೆಂಗಳೂರು ರೈಲ್ವೇ ಕಂಟ್ರೋಲ್ ರೂಂ ಇಮೇಲ್ : dcrly@ksp.gov.in ಗೆ ಮಾಹಿತಿ ನೀಡಲು ಬಳ್ಳಾರಿ ರೈಲ್ವೇ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕ ಜಿ.ನಾಗರಾಜ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.