ವಿಜಯನಗರ | ರೈಲು ಹಳಿ ಮೇಲೆ ಅಪರಿಚಿತ ಮಹಿಳೆಯ ಮೃತದೇಹ ಪತ್ತೆ : ಪ್ರಕರಣ ದಾಖಲು
ಸಾಂದರ್ಭಿಕ ಚಿತ್ರ
ವಿಜಯನಗರ(ಹೊಸಪೇಟೆ) : ಜೂ.2 ರಂದು ವ್ಯಾಸನಕೇರಿ ಮತ್ತು ಹೊಸಪೇಟೆ ರೈಲು ನಿಲ್ದಾಣಗಳ ಮಧ್ಯಭಾಗದ ರೈಲು ಹಳಿಯಲ್ಲಿ ಸುಮಾರು 60 ವರ್ಷದ ಅಪರಿಚಿತ ಮಹಿಳೆಯ ಮೃತದೇಹ ಪತ್ತೆಯಾಗಿದ್ದು, ಬಳ್ಳಾರಿ ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತಳ ಚಹರೆ : 5.5 ಅಡಿ ಎತ್ತರ, ತೆಳ್ಳನೆ ಮೈಕಟ್ಟು, ಕೋಲು ಮುಖ, ಅಗಲವಾದ ಹಣೆ, ಗೋದಿ ಮೈ ಬಣ್ಣ, ತಲೆಯಲ್ಲಿ ಸುಮಾರು 15 ಇಂಚು ಬಿಳಿ ಮತ್ತು ಕಪ್ಪು ಮಿಶ್ರಿತ ಕೂದಲು ನೆಟ್ಟನೆ ಮೂಗು ಹೊಂದಿರುತ್ತಾರೆ. ಒಂದು ನೆರಳೆ ಬಣ್ಣದ ಕುಪ್ಪಸ, ಗುಲಾಬಿ ಬಣ್ಣದ ಸೀರೆ, ಹಸಿರು ಬಣ್ಣದ ಲಂಗ, ಕೊರಳಲ್ಲಿ ಹಸಿರು ಮತ್ತು ಕೆಂಪ್ಪು ಬಣ್ಣದ ದಾರ ಸ್ಟೀಲ್ ತಾಯತ ಮತ್ತ ಒಂದು ಕರಿಮನಿ ತಾಳಿಯ ಸರ ಅದರಲ್ಲಿ ಬಂಗಾರದಂತೆ ಕಾಣುವ ಒಂದು ಪದಕ ಇರುತ್ತದೆ. ಮೃತಳ ವಾರಸುದಾರರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬಳ್ಳಾರಿ ರೈಲ್ವೆ ಪೊಲೀಸ್ ಠಾಣೆ, ದೂ.08392-276063 ಇಮೇಲ್ : bellaryrly@ksp.gov.in ಅಥವಾ ರೈಲ್ವೇ ಪೊಲೀಸ್ ಕಂಟ್ರೋಲ್ ರೂಂ 080-22871291 ಬೆಂಗಳೂರು ರೈಲ್ವೇ ಕಂಟ್ರೋಲ್ ರೂಂ ಇಮೇಲ್ : dcrly@ksp.gov.in ಗೆ ಮಾಹಿತಿ ನೀಡಲು ಬಳ್ಳಾರಿ ರೈಲ್ವೇ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.