×
Ad

ವಿಜಯನಗರ | ರೈಲು ಹಳಿ ಮೇಲೆ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ : ಪ್ರಕರಣ ದಾಖಲು

Update: 2025-07-29 19:20 IST

ಸಾಂದರ್ಭಿಕ ಚಿತ್ರ

ವಿಜಯನಗರ(ಹೊಸಪೇಟೆ) : ಬಳ್ಳಾರಿ ರೈಲ್ವೇ ನಿಲ್ದಾಣದ ಗುಂತಕಲ್ ಯಾರ್ಡ್ ಹತ್ತಿರದ ಅಪ್‌ಲೈನ್ ಹಳಿಯ ಮೇಲೆ ಜು.28 ರಂದು ಸುಮಾರು 45-50 ವರ್ಷದ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು, ಬಳ್ಳಾರಿ ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತ ವ್ಯಕ್ತಿ ಚಹರೆ : 5.8 ಅಡಿ ಎತ್ತರ, ತೆಳ್ಳನೆ ಮೈಕಟ್ಟು, ಕೋಲು ಮುಖ, ಗೋಧಿ ಮೈಬಣ್ಣ, ಅಗಲವಾದ ಹಣೆ, ತಲೆಯಲ್ಲಿ ಒಂದು ಇಂಚು ಕಪ್ಪು ಮತ್ತು ಬಿಳಿಯ ಮಿಶ್ರಿತ ಕೂದಲು ಹಾಗೂ ಒಂದು ಇಂಚು ಕಪ್ಪು ಮಿಶ್ರಿತ ಬಿಳಿ ಗಡ್ಡ ಮತ್ತು ಮೀಸೆ ಬಿಟ್ಟಿರುತ್ತಾನೆ. ತಿಳಿ ಗುಲಾಬಿ ಬಣ್ಣದ ರೇಡಿಮೇಡ್ ಆಫ್ ಟೀ ಶರ್ಟ್, ಸೊಂಟದಲ್ಲಿ ಕೆಂಪು ಉಡುದಾರ, ಕಂದು ಬಣ್ಣದ ಸ್ಟೆöÊಲಿ ಹೆಸರುವುಳ್ಳ ಚಪ್ಪಲಿ, ನೀಲಿ ಬಣ್ಣ ಹೂವಿನ ಚಿತ್ರದ ಲುಂಗಿ ಧರಿಸಿರುತ್ತಾನೆ.

ಮೃತವ್ಯಕ್ತಿಯ ವಾರಸುದಾರರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬಳ್ಳಾರಿ ರೈಲ್ವೇ ಪೊಲೀಸ್ ಠಾಣೆ, ದೂ.08392-276063 ಇಮೇಲ್ : bellaryrly@ksp.gov.in ಅಥವಾ ರೈಲ್ವೇ ಪೊಲೀಸ್ ಕಂಟ್ರೋಲ್ ರೂಂ 080-22871291, ಬೆಂಗಳೂರು ರೈಲ್ವೇ ಕಂಟ್ರೋಲ್ ರೂಂ ಇಮೇಲ್ : dcrly@ksp.gov.in ಗೆ ಮಾಹಿತಿ ನೀಡಲು ಬಳ್ಳಾರಿ ರೈಲ್ವೇ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News