ವಿಜಯನಗರ | ಶೇಂಗಾ, ಹುಣಸೆ ಹಣ್ಣಿನ ಸಂಸ್ಕರಣಾ ಘಟಕಕ್ಕೆ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಭೇಟಿ
Update: 2025-08-25 22:40 IST
ವಿಜಯನಗರ (ಹೊಸಪೇಟೆ), ಆ.25 ತಾಲೂಕಿನ ಗುಡೇಕೋಟೆ ಗ್ರಾಪಂ ವ್ಯಾಪ್ತಿಯ ಕಸಾಪುರದಲ್ಲಿನ ಶೇಂಗಾ, ಹುಣಸೆ ಹಣ್ಣಿನ ಸಂಸ್ಕರಣಾ ಘಟಕಕ್ಕೆ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಅವರು ಸೋಮವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ನಬಾರ್ಡ್ ಯೋಜನೆಯ ಸಹಯೋಗದೊಂದಿಗೆ ಶೇಂಗಾ ಮತ್ತು ಹುಣಿಸೆ ಹಣ್ಣಿನ ಸಂಸ್ಕರಣಾ ಘಟಕವನ್ನು ಅಂದಾಜು 4.50 ಕೋಟಿ ರೂ. ವೆಚ್ಚದಲ್ಲಿ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಭಾಗದ ರೈತರಿಗೆ ಇಲ್ಲಿಯೇ ತರಬೇತಿ ನೀಡಲು ಕ್ರಮ ವಹಿಸಲಾಗುವುದು. ರೈತರು ಇದರ ಸದುಪಯೋಗ ಪಡಿಸಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದರು.
ಈ ವೇಳೆ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಡಿ.ಎಂ.ವಿಜಯಕುಮಾರ್, ತಾಪಂ ಇಒ ನರಸಪ್ಪ ಸೇರಿದಂತೆ ಗ್ರಾಪಂ ಪಿಡಿಒ ಹಾಗೂ ರೈತ ಉತ್ಪಾದಕ ಸಂಘದ ಸದಸ್ಯರು ಹಾಜರಿದ್ದರು.