ವಿಜಯನಗರ | ಮೇ 20 ರಂದು ಹೊಸಪೇಟೆ ವಿಭಾಗದ ಕೆಕೆಎಆರ್‌ಟಿಸಿ ಬಸ್ ಸೇವೆಗಳಲ್ಲಿ ವ್ಯತ್ಯಯ
Update: 2025-05-19 18:46 IST
ಸಾಂದರ್ಭಿಕ ಚಿತ್ರ
ವಿಜಯನಗರ(ಹೊಸಪೇಟೆ) : ಮೇ 20 ರಂದು ಹೊಸಪೇಟೆಯ ನಗರದಲ್ಲಿ ಮುಖ್ಯಮಂತ್ರಿಗಳ ಉಪಸ್ಥಿತಿಯಲ್ಲಿ ನಡೆಯಲಿರುವ ಹಕ್ಕು ಪತ್ರಗಳ ವಿತರಣೆ ಹಾಗೂ ಪ್ರಗತಿಯತ್ತ ಕರ್ನಾಟಕ ಸಮರ್ಪಣಾ ಸಂಕಲ್ಪ ಕಾರ್ಯಕ್ರಮದ ನಿಮಿತ್ತ ಸಾಂಧರ್ಬಿಕ ಒಪ್ಪಂದದ ಮೇಲೆ ಹೊಸಪೇಟೆ ವಿಭಾಗದ ಬಸ್‌ಗಳನ್ನು ಜಿಲ್ಲಾಡಳಿತಕ್ಕೆ ಒದಗಿಸಬೇಕಾಗಿದ್ದು, ಮೇ.20ರಂದು ಹೊಸಪೇಟೆ ವಿಭಾಗದ ನಾನಾ ಘಟಕಗಳ ವ್ಯಾಪ್ತಿಯಲ್ಲಿನ ವಿವಿಧ ಮಾರ್ಗಗಳ ವಾಹನಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಪ್ರಯಾಣಿಕರು ಸಹಕರಿಸಬೇಕೆಂದು ವಿಭಾಗೀಯ ನಿಯಂತ್ರಣಾಧಿಕಾರಿ ತಿಮ್ಮಾರೆಡ್ಡಿ ಹೀರಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.