×
Ad

ವಿಜಯನಗರ | ಜಿಲ್ಲಾ ಕಾಂಗ್ರೆಸ್ ವತಿಯಿಂದ ಇಂದಿರಾ ಗಾಂಧಿಯವರ 41ನೇ ವರ್ಷದ ಪುಣ್ಯ ಸ್ಮರಣೆ

Update: 2025-10-31 19:35 IST

ವಿಜಯನಗರ : ಜಿಲ್ಲಾ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಭಾರತ ದೇಶದ ಉಕ್ಕಿನ ಮಹಿಳೆ, ಮಾಜಿ ಪ್ರಧಾನಮಂತ್ರಿ ಹಾಗೂ ಭಾರತ ರತ್ನ ಇಂದಿರಾ ಗಾಂಧಿ ಅವರ ಪುಣ್ಯಸ್ಮರಣೆಯ ಅಂಗವಾಗಿ ಜಿಲ್ಲಾ ಕ್ರೀಡಾಂಗಣದಲ್ಲಿ ಭಾವಪೂರ್ಣವಾಗಿ ಕಾರ್ಯಕ್ರಮ ಆಯೋಜಿಸಲಾಯಿತು. ಈ ವೇಳೆ ಇಂದಿರಾ ಗಾಂಧಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಲಾಯಿತು.

ಜಿಲ್ಲಾ ಉಪಾಧ್ಯಕ್ಷ ಕೆ.ಎಂ. ಹಾಲಪ್ಪ ಮಾತನಾಡಿ, ಇಂದಿರಾ ಗಾಂಧಿಯವರು ಪ್ರಧಾನಿಯಾಗಿ ಬಡವರ ಜೀವನಮಟ್ಟ ಎತ್ತುವ ನಿಟ್ಟಿನಲ್ಲಿ 20 ಅಂಶಗಳ ಕಾರ್ಯಕ್ರಮಗಳನ್ನು ಜಾರಿಗೆ ತಂದರು. ‘ಉಳುವವನೇ ಒಡೆಯ’ ಎಂಬ ಘೋಷಣೆಯಡಿ ಭೂ ಹಂಚಿಕೆ, ಬ್ಯಾಂಕ್‌ಗಳ ರಾಷ್ಟ್ರೀಕರಣ, ‘ಗರೀಬಿ ಹಠಾವೋ’ ಅಭಿಯಾನ ಮುಂತಾದ ಯೋಜನೆಗಳ ಮೂಲಕ ಕೋಟ್ಯಂತರ ಬಡವರ ಜೀವನದಲ್ಲಿ ಕ್ರಾಂತಿ ತಂದರು. ಅವರು ನಿಜವಾದ ಜನನಾಯಕಿ, ದೇಶದ ಉಕ್ಕಿನ ಮಹಿಳೆ ಎಂದು ಸ್ಮರಿಸಿದರು.

ಕೆಪಿಸಿಸಿ ಮಹಿಳಾ ವಿಭಾಗದ ರಾಜ್ಯ ಕಾರ್ಯದರ್ಶಿ ಕವಿತಾ ಈಶ್ವರ್ ಸಿಂಗ್ ಅವರು, ಇಂದಿರಾ ಗಾಂಧಿಯವರು ದೇಶದ ಐಕ್ಯತೆ, ಸಮಗ್ರತೆ ಮತ್ತು ಮಹಿಳಾ ಸ್ವಾಭಿಮಾನಕ್ಕಾಗಿ ಅಪ್ರತಿಮ ಕೊಡುಗೆ ನೀಡಿದವರು ಎಂದು ಹೇಳಿದರು.

ಇದೇ ವೇಳೆ ವಿಜಯನಗರ ಜಿಲ್ಲಾ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಬಣ್ಣದ ಮನೆ ಸೋಮಶೇಖರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂಬಗಲ್ ರಾಮಕೃಷ್ಣ, ಸೇವಾದಳ ಜಿಲ್ಲಾ ಸಂಘಟಕ ಬಿ.ಮಾರೆಣ್ಣ ಹಾಗೂ ಇತರ ಮುಖಂಡರು ಭಾಗವಹಿಸಿ, ಇಂದಿರಾ ಗಾಂಧಿಯವರ ಜನಪರ ಯೋಜನೆಗಳನ್ನು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಪಾಧ್ಯಕ್ಷ ಕೆ. ರಮೇಶ್, ನಗರಸಭೆ ಸದಸ್ಯ ಗುಜ್ಜಲ ರಾಘವೇಂದ್ರ, ಕೆಪಿಸಿಸಿ ಶಿಕ್ಷಕರ ವಿಭಾಗದ ಅಧ್ಯಕ್ಷ ಸಣ್ಣ ಈರಪ್ಪ, ಪದವಿದರರ ವಿಭಾಗದ ಅಧ್ಯಕ್ಷ ವಿಜಯಕುಮಾರ್, ಯುವ ಕಾಂಗ್ರೆಸ್ ಉಪಾಧ್ಯಕ್ಷ ಜಿ. ಶಿವಕುಮಾರ, ಕಾರ್ಮಿಕ ವಿಭಾಗದ ಎಂ.ಡಿ. ರಫೀಕ್ ಹಾಗೂ ಮಹಿಳಾ ನಾಯಕರಾದ ಭಾಗ್ಯಲಕ್ಷ್ಮಿ ಬರಾಡೆ, ಲಲಿತಾ ಪರಗಂಟಿ, ಶೋಭಾ, ಸುವರ್ಣಮ್ಮ, ಚೆನ್ನಮ್ಮಾ ಪರಿಮಳ ಸೇರಿದಂತೆ ಅನೇಕರು ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News