ವಿಜಯನಗರ | ಹೊಸಪೇಟೆಯಲ್ಲಿ ಹೋಟೆಲ್ ಉದ್ಯಮಿಯ ಮನೆ ಮೇಲೆ ಈಡಿ ದಾಳಿ
Update: 2025-10-16 12:25 IST
ವಿಜಯನಗರ: ಹೊಸಪೇಟೆಯಲ್ಲಿ ಹೋಟೆಲ್ ಉದ್ಯಮಿಯೊಬ್ಬರ ಮನೇ ಮೇಲೆ ಈ.ಡಿ. ದಾಳಿ ಮಾಡಿದೆ.
ಶ್ರೀನಿವಾಸ್ ರಾವ್( ಸೀನಾ ಬಾಬು ) ಅವರ ಪ್ರಿಯದರ್ಶನಿ ಹೋಟೆಲ್ ಮಾಲಕನ ನಿವಾಸ ಹಾಗೂ ಕಚೇರಿಯ ಮೇಲೆ ಇಂದು ಬೆಳಗ್ಗೆ ಈ.ಡಿ. ದಾಳಿ ನಡೆದಿದೆ.
ಗಣಿ ಗುತ್ತಿಗೆ ಹಾಗೂ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದ ಸೀನಬಾಬು ನಗರದ ವಿನಾಯಕ ನಗರ ಮತ್ತು ಬಸವೇಶ್ವರ ಬಡಾವಣೆಯಲ್ಲಿ ಇರುವ ನಿವಾಸ ಹಾಗೂ ಕಚೇರಿಯ ಮೇಲೆ ಶೋಧ ಕಾರ್ಯಾಚರಣೆ ನಡೆಯುತ್ತಿದೆ.