ವಿಜಯನಗರ | ಈದ್ ಮಿಲಾದ್ ಹಬ್ಬದ ಪ್ರಯುಕ್ತ ಪ್ರಬಂಧ ಸ್ಪರ್ಧೆ, ಬಹುಮಾನ ವಿತರಣೆ
ಜಾತಿ ಗಣತಿಯಲ್ಲಿ ಪ್ರತಿಯೊಬ್ಬರು ನಿಖರ ಹಾಗೂ ಮುಕ್ತವಾಗಿ ಮಾಹಿತಿಯನ್ನು ನೀಡಬೇಕು : ಹೆಚ್.ಎನ್.ಮುಹಮ್ಮದ್ ಇಮಾಮ್ ನಿಯಾಜಿ
ವಿಜಯನಗರ : ಹೊಸಪೇಟೆಯ ಜಾಮೀಯ ಮಸ್ಜಿದ್ ಚಿತ್ತವಾಡ್ಗಿ ಇವರ ನೇತೃತ್ವದಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಪ್ರವಾದಿ ಮುಹಮ್ಮದ್ ಅವರ ಜೀವನ ಚರಿತ್ರೆ ಕುರಿತ ಪ್ರಬಂಧ ಸ್ಪರ್ಧೆ ಆಯೋಜಿಸಲಾಯಿತು.
ಸ್ಪರ್ಧೆಯಲ್ಲಿ ಹೆಚ್ಚು ಅಂಕಗಳಿಸಿದವರು ಸೇರಿದಂತೆ ಭಾಗವಹಿಸಿದ ಯುವಕರು, ಮಕ್ಕಳು, ಮಹಿಳೆಯರು ಹಾಗೂ ಹಿರಿಯರಿಗೆ ಬಹುಮಾನ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಜಾತಿ ಗಣತಿ ಜಾಗೃತಿ ಕಾರ್ಯಕ್ರಮವೂ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಜಾಮೀಯ ಮಸ್ಜಿದ್ ಆಡಳಿತ ಮಂಡಳಿಯ ಅಧ್ಯಕ್ಷ ಹೆಚ್.ಎನ್.ಮುಹಮ್ಮದ್ ಇಮಾಮ್ ನಿಯಾಜಿ ಅವರು, “ಪ್ರವಾದಿ ಮುಹಮ್ಮದ್ ಅವರು ಕೇವಲ ಇಸ್ಲಾಂ ಧರ್ಮಕ್ಕೆ ಸೀಮಿತವಲ್ಲದೆ, ಸರ್ವಧರ್ಮೀಯರಿಗೆ ಮಾನವೀಯ ಮೌಲ್ಯಗಳನ್ನು ಸಾರಿದವರು. ಗಂಡು-ಹೆಣ್ಣು, ಬಡ-ಶ್ರೀಮಂತ, ಜಾತಿ-ಪಂಥ, ಬಣ್ಣ ಎಂಬ ಭೇದವಿಲ್ಲದೆ ಎಲ್ಲರನ್ನೂ ಸಮಾನವಾಗಿ ನೋಡುತ್ತಿದ್ದರು. ಶಿಕ್ಷಣ, ಸರಳತೆ, ವಿನಮ್ರತೆ ಹಾಗೂ ಕರುಣೆ ಎಂಬ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು” ಎಂದು ಕರೆ ನೀಡಿದರು.
ಜಾತಿ ಗಣತಿಯಲ್ಲಿ ಪ್ರತಿಯೊಬ್ಬರು ನಿಖರ ಹಾಗೂ ಮುಕ್ತವಾಗಿ ಮಾಹಿತಿಯನ್ನು ನೀಡಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಅಂಜುಮನ್ ಕಮಿಟಿಯ ಅಬುಬಕರ್ ಸಿದ್ದಿಕ್, ಮಸ್ಜಿದ್ ಇಮಾಮ್ ಅಫೀಸಾಬ್, ಕರೆಂಗ್ಲಿ ನಜೀರ್, ಕೊಲ್ಮಿ ಜಾಕೀರ್, ಮಳ್ಗಿ ಆಜಾಮ್, ಚಾಂದ್ ಬಾಷ, ಇಂತಿಯಾಜ್, ಅಕ್ಬರ್ ಅಲಿ, ಮೆಹಬೂಬ್ ಸಾಬ್, ಮುಕ್ತಿಯಾರ್, ಮನ್ಸುರ್ ಹಾಗೂ ಮುಖಂಡರು, ಪೋಷಕರು, ಮಹಿಳೆಯರು, ಯುವಕರು, ಮಕ್ಕಳು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.