×
Ad

ವಿಜಯನಗರ | ನೀರು ಸರಬರಾಜು ಸುಸ್ಥಿರ ನಿರ್ವಹಣೆಗೆ ಪ್ರತಿಯೊಬ್ಬರೂ ಕೈ ಜೋಡಿಸಿ : ಮುಹಮ್ಮದ್ ಅಲಿ ಅಕ್ರಮ್ ಶಾ

ಕಂದಗಲ್ಲು, ಕಲ್ಲಹಳ್ಳಿ ಗ್ರಾಮಗಳಲ್ಲಿ 24*7 ನೀರು ಸರಬರಾಜು ಘೋಷಣೆ ಕಾರ್ಯಕ್ರಮ ಉದ್ಘಾಟನೆ

Update: 2025-08-16 21:30 IST

ವಿಜಯನಗರ(ಹೊಸಪೇಟೆ) ಆ.16 : ನೀರು ಅತ್ಯಮೂಲ್ಯವಾದದ್ದು, ಅದರ ಮೌಲ್ಯ ಪ್ರತಿಯೊಬ್ಬರೂ ತಿಳಿಯಬೇಕು. ಜೆಜೆಎಂ ಯೋಜನೆಯಡಿ ದಿನದ 24 ಗಂಟೆ ನಿರಂತರ ನೀರು ಸರಬರಾಜು ಸುಸ್ಥಿರ ನಿರ್ವಹಣೆಗೆ, ಇಲಾಖೆಯೊಡನೆ ಗ್ರಾಪಂ ಹಾಗೂ ಸಾರ್ವಜನಿಕರು ಕೈಜೋಡಿಸಬೇಕು ಎಂದು ಜಿ.ಪಂ ಸಿಇಒ ನೋಂಗ್ಜಾಯ್ ಮುಹಮ್ಮದ್ ಅಲಿ ಅಕ್ರಮ್ ಶಾ ಹೇಳಿದರು.

ಜಿಲ್ಲಾ ಪಂಚಾಯತ್, ಗ್ರಾಮ ಪಂಚಾಯತ್ ಕಾರ್ಯಾಲಯ ಕಂದಗಲ್ಲು ಮತ್ತು ಹನಸಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಜಲ ಜೀವನ್ ಮಿಷನ್ ಯೋಜನೆಯಡಿ ಗ್ರಾಮೀಣ ಸುಸ್ಥಿರ ಕುಡಿಯುವ ನೀರು ಸರಬರಾಜು ಯೋಜನೆ ಹಾಗೂ ಕಾರ್ಯಾಚರಣೆ ಮತ್ತು ನಿರ್ವಹಣೆ ಸಾಂಸ್ಥೀಕರಣದ ಬಲವರ್ಧನೆಯ ಅಂಗವಾಗಿ ಕೊಟ್ಟೂರು ತಾಲ್ಲೂಕಿನ ಕಂದಗಲ್ಲು ಹಾಗೂ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಕಲ್ಲಹಳ್ಳಿ ಗ್ರಾಮಗಳನ್ನು 24*7 ನೀರು ಸರಬರಾಜು ಗ್ರಾಮಗಳ ಘೋಷಣೆ ಕಾರ್ಯಕ್ರಮದಲ್ಲಿ ಉದ್ಘಾಟಿಸಿ ಗುರುವಾರ ಅವರು ಮಾತನಾಡಿದರು.

ಜೆಜೆಎಂ ನ 24*7 ನೀರು ಸರಬರಾಜು ಯೋಜನೆಯಡಿ ಗ್ರಾಮದ ಶೇ.100 ಪ್ರತಿಶತ ಕುಟುಂಬಗಳಿಗೆ ಕಾರ್ಯಾತ್ಮಕ ನಳ ಸಂಪರ್ಕ ಅಳವಡಿಸಲಾಗಿದ್ದು, ಪ್ರತಿ ವ್ಯಕ್ತಿಗೆ ಒಂದು ದಿನಕ್ಕೆ 55 ಲೀಟರ್ ನೀರನ್ನು ಒದಗಿಸುವ ಗುರಿ ಹೊಂದಿದೆ. ಯೋಜನೆಗಾಗಿ ಸ್ವಸಹಾಯ ಸಂಘಗಳ ಸೇವೆಗಳನ್ನು ಬಳಸಿಕೊಳ್ಳುವುದು ಹಾಗೂ ಪ್ರತಿ ದಿವಸ ನೀರನ್ನು ಶುದ್ಧೀಕರಿಸಿ ನೀರನ್ನು ಪೂರೈಸಲಾಗುತ್ತದೆ ಮತ್ತು ಪ್ರತಿ ನಳದಲ್ಲಿ ನೀರಿನ ಸೋರಿಕೆಯನ್ನು ತಡೆಗಟ್ಟಲು ಕ್ರಮವಹಿಸಬೇಕು ಎಂದು ಹೇಳಿದರು.

ಗ್ರಾಪಂ ಅಧಿಕಾರಿಗಳು ಹಾಗೂ ಇಲಾಖಾ ಅಧಿಕಾರಿಗಳು ನೀರಿನ ಮೂಲವನ್ನು ಸಕಾಲಕ್ಕೆ ಪರೀಕ್ಷಿಸಬೇಕು. ಕಂದಗಲ್ಲು ಗ್ರಾಮದಲ್ಲಿ ಉಜ್ಜಿನಿ ಎಂವಿಸಿ ಯೋಜನೆ ಮೂಲಕ ಶುದ್ಧ ನೀರು ಒದಗಿಸಲಾಗುತ್ತಿದೆ ಎಂದು ತಿಳಿಸಿದರು. ಸಮುದಾಯದ ಪ್ರತಿಯೊಬ್ಬರೂ ಕುಡಿಯುವ ನೀರಿನ ಮಹತ್ವ ಅರಿಯಬೇಕು. ನೀರನ್ನು ಮಿತವಾಗಿ ಬಳಸಿ ಎಂದರು.

ಗ್ರಾಮ ಪಂಚಾಯತ್‌ ಅಧ್ಯಕ್ಷರು, ಪಂಚಾಯತಿ ಅಧಿಕಾರಿಗಳು ಇದನ್ನು ನಿರಂತರವಾಗಿ ನಡೆಸಿಕೊಂಡು ಹೋಗುವ ಜವಾಬ್ದಾರಿ ಮತ್ತು ನಿರ್ವಹಣೆ ಹೊಣೆಯಾಗಿದೆ. ಜನರಿಗೆ ನಿತ್ಯ ನಿರಂತರ ನೀರು ಸರಬರಾಜಾಗುವಂತೆ ಖಾತ್ರಿಪಡಿಸಿಕೊಳ್ಳಬೇಕೆಂದು ತಿಳಿಸಿದರು.

ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಿಕಾಂತ್ ಅವರು ಮಾತನಾಡಿದರು.

ಇದೇ ವೇಳೆ 24*7 ನೀರು ಸರಬರಾಜಿನ ಸಮರ್ಪಕ ಬಳಕೆ ಕುರಿತು ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಇದಕ್ಕೂ ಮುನ್ನಾ ಜೆಜೆಎಂ ನಳಕ್ಕೆ ಗಂಗೆ ಪೂಜೆ ಸಲ್ಲಿಸಿದ ಬಳಿಕ 24*7 ನೀರು ಸರಬರಾಜು ಯೋಜನೆಗೆ ಸಾಂಕೇತಿಕವಾಗಿ ಚಾಲನೆ ನೀಡಲಾಯಿತು. ಇದೇ ವೇಳೆ ಒಹೆಚ್ ಟಿ ಹತ್ತಿರ ರಿಬ್ಬನ್ ಕಟ್ ಮಾಡಿ ವಾಲ್ ತಿರಿಸುವುದರ ಮೂಲಕ ಅಧೀಕೃತವಾಗಿ ಚಾಲನೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ದೀಪಾ.ಎಸ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ, ಕೂಡ್ಲಿಗಿಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಪ್ರಸನ್ನ.ಬಿ.ಆರ್, ಕಂದಗಲ್ಲು ಗ್ರಾ.ಪಂ ಅಧ್ಯಕ್ಷರಾದ ಜಯಮ್ಮ, ಎ.ಎಂ.ಗಂಗಾಧರಯ್ಯ, ಪಿಡಿಒಗಳಾದ ಮಾರುತೇಶ್, ಉಮೇಶ್, ಡಿಟಿಎಸ್ ಯು ಸಿಬ್ಬಂದಿ ಮಂಜುನಾಥ .ಎಸ್, ಬಸವರಾಜ, ಸಿದ್ದಲಿಂಗಪ್ಪ, ಫೀಡ್ ಬ್ಯಾಂಕ್ ಫೌಂಡೇಶನ್ ನ ಜಿಲ್ಲಾ ಸಂಯೋಜಕ ಅಭಿಷೇಕ್, ಕಂದಗಲ್ಲು ಹಾಗೂ ಹನಸಿ ಗ್ರಾಪಂ ಸದಸ್ಯರು, ಗ್ರಾಮದ ಮುಖಂಡರು, ಸಾರ್ವಜನಿಕರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News