×
Ad

ವಿಜಯನಗರ | ದೀಕ್ಷಾ ಭೂಮಿ ಯಾತ್ರಾರ್ಥಿಗಳಿಗೆ ಸಾರಿಗೆ ಸೌಲಭ್ಯದ ಅವಧಿ ವಿಸ್ತರಣೆ

Update: 2025-09-11 21:02 IST

ವಿಜಯನಗರ(ಹೊಸಪೇಟೆ), ಸೆ.11(ಕರ್ನಾಟಕ ವಾರ್ತೆ) : 2025-26 ನೇ ಸಾಲಿನ ಡಾ.ಬಿ.ಆರ್.ಅಂಬೇಡ್ಕರ್ ರವರ ಅನುಯಾಯಿಗಳು ಮಹಾರಾಷ್ಟ್ರದ ನಾಗಪುರದಲ್ಲಿನ ದೀಕ್ಷಾಭೂಮಿ ಯಾತ್ರೆಗೆ ತೆರಳುವ ಸೆ.30 ರಿಂದ ಅ.4 ರವರೆಗೆ ವಿಜಯನಗರ ಜಿಲ್ಲೆಯಿಂದ ಪ್ರಯಾಣಿಸಲು ಮತ್ತು ಹಿಂದಿರುಗಿ ಬರಲು ಬಸ್ಸು ಮತ್ತು ರೈಲಿನ ವ್ಯವಸ್ಥೆ ಕಲ್ಪಿಸಲಾಗಿದೆ.

ಯಾತ್ರಾರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಸೆ.15 ರ ವರಗೆ ಅವಧಿ ವಿಸ್ತರಣೆ ಮಾಡಲಾಗಿದ್ದು. ವೆಬ್‌ಸೈಟ್ http://swd.Karnataka.gov.in/ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News