×
Ad

ವಿಜಯನಗರ | ಸಾಲ ಮರು ಪಾವತಿಸುವಂತೆ ಕಿರುಕುಳ ಆರೋಪ : ರೈತ ಆತ್ಮಹತ್ಯೆ

Update: 2025-06-01 17:17 IST

ಹರಪನಹಳ್ಳಿ : ವಿಜಯನಗರ ಜಿಲ್ಲೆಯ ಹರಪನಹಳ್ಳಿಯಲ್ಲಿ ಸಾಲ ಮರುಪಾವತಿ ಮಾಡುವಂತೆ  ಖಾಸಗಿ ಫೈನಾನ್ಸ್ ಮತ್ತು  ರಾಷ್ಟ್ರೀಕೃತ ಬ್ಯಾಂಕ್‌ ಕಿರುಕುಳ ನೀಡಿದ್ದರಿಂದ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಆರೋಪ ಕೇಳಿ ಬಂದಿದೆ. 

ಟಿ.ತುಂಬಿಗೇರಿ ಗ್ರಾಮದ ರೈತ ಟಿ.ರಾಜಪ್ಪ (48)ಆತ್ಮಹತ್ಯೆ ಮಾಡಿಕೊಂಡವರು. ಟಿ.ರಾಜಪ್ಪ ಕೃಷಿ ಚಟುವಟಿಕೆಗಾಗಿ ರಾಷ್ಟ್ರೀಕೃತ ಬ್ಯಾಂಕ್‌ವೊಂದರಿಂದ 3 ಲಕ್ಷ ರೂ. ಸಾಲ ಪಡೆದಿದ್ದರು. ಸಾಲ ಮರುಪಾವತಿಸುವಂತೆ ಬ್ಯಾಂಕ್‌ನವರು ಇತ್ತೀಚೆಗೆ ಅವರಿಗೆ ನೋಟಿಸ್ ಕಳಿಸಿದ್ದರು ಎನ್ನಲಾಗಿದೆ.

ಇದಲ್ಲದೆ ಟಿ.ರಾಜಪ್ಪ ಮೈಕ್ರೋ ಫೈನಾನ್ಸ್‌ನಲ್ಲಿ 7 ಲಕ್ಷ ರೂ. ಸಾಲ ಪಡೆದಿದ್ದರು. ಹಣ ಮರು ಪಾವತಿಸುವಂತೆ ಫೈನಾನ್ಸ್‌ನವರು ದೂರವಾಣಿ ಕರೆ ಮಾಡಿ ಪೀಡಿಸುತ್ತಿದ್ದರು. ಇದರಿಂದ ಮನನೊಂದ ರೈತ ಜಮೀನಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.  

ಈ ಕುರಿತು ಹಲುವಾಗಲು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News