×
Ad

ವಿಜಯನಗರ | ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಕಾರ್ಯದರ್ಶಿಯಾಗಿ ಕೆ.ರಾಜಶೇಖರ್ ನೇಮಕ

Update: 2025-10-13 20:04 IST

ವಿಜಯನಗರ (ಹೊಸಪೇಟೆ) : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಕಾರ್ಯದರ್ಶಿಯಾಗಿ ಶಿಕ್ಷಕರಾದ ಕೆ.ರಾಜಶೇಖರ್‌ರನ್ನು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಹಾಗೂ ಜಿಲ್ಲಾ ಮುಖ್ಯ ಆಯುಕ್ತರಾದ ವೆಂಕಟೇಶ್ ರಾಮಚಂದ್ರಪ್ಪ ಅವರು ನೇಮಕಗೊಳಿಸಿ ಅದೇಶ ಪತ್ರವನ್ನು ನೀಡಿದ್ದಾರೆ.

ಜಿಲ್ಲಾ ಘಟಕದ ಕಾರ್ಯದರ್ಶಿಗಳಾಗಿದ್ದ ಎಲ್.ಟಿ. ಮಂಜುನಾತಪ್ಪ ಅವರ ರಾಜೀನಾಮೆಯಿಂದ ತೆರವುಗೊಂಡಿದ್ದ ಸ್ಥಾನಕ್ಕೆ ಜಿಲ್ಲಾ ಕಾರ್ಯದರ್ಶಿಯನ್ನಾಗಿ ಕೆ.ರಾಜಶೇಖರ ಅವರಿಗೆ ಅವಕಾಶ ನೀಡಲಾಗಿದೆ. ಈ ವೇಳೆ ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ತಿಪ್ಪೇಸ್ವಾಮಿ, ಜಿಲ್ಲಾ ತರಬೇತಿ ಆಯುಕ್ತೆ ಎ.ರೇಣುಕಾ, ನಿಕಟಪೂರ್ವ ಕಾರ್ಯದರ್ಶಿ ಎಲ್.ಟಿ.ಮಂಜುನಾಥಪ್ಪ, ಜಿಲ್ಲಾ ಸಂಘಟಕರಾದ ಪಾಟೀಲ್.ಜಿ.ಬಿ.ಸಿ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News