×
Ad

ವಿಜಯನಗರ | ಅಲೆಮಾರಿ ಸಮುದಾಯಗಳಿಗೆ ಶೇ.1ರಷ್ಟು ಪ್ರತ್ಯೇಕ ಮೀಸಲಾತಿ ನೀಡುವಂತೆ ಆಗ್ರಹಿಸಿ ಪ್ರತಿಭಟನೆ

Update: 2025-08-28 22:20 IST

ವಿಜಯನಗರ (ಹೊಸಪೇಟೆ):  ʼಒಳಮೀಸಲಾತಿʼ ಜಾರಿ ಸಂಬಂಧ ಅಲೆಮಾರಿ ಸಮುದಾಯಗಳಿಗೆ ಶೇ.1ರಷ್ಟು ಪ್ರತ್ಯೇಕ ಮೀಸಲಾತಿ ನೀಡುವಂತೆ ಆಗ್ರಹಿಸಿ ಅಲೆಮಾರಿ ಹಾಗೂ ಅರೆ ಅಲೆಮಾರಿ ಸಮುದಾಯಗಳು ಹೊಸಪೇಟೆಯಲ್ಲಿ ಪ್ರತಿಭಟನೆ ನಡೆಸಿದವು

ನಗರದ ಗಾಂಧಿ ವೃತ್ತದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಆರಂಭಿಸಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಹೊಸಪೇಟೆ ತಹಶೀಲ್ದಾರ್‌ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ತಹಶೀಲ್ದಾರ್‌ ಕಚೇರಿ ಎದುರು ಘಂಟೆಗೂ ಹೆಚ್ಚು ಕಾಲ ಮಳೆಯನ್ನು ಲೆಕ್ಕಿಸದೇ ಸುರಿದ ಧಾರಾಕಾರ ಮಳೆಯಲ್ಲಿಯೇ ತಹಶೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.

ಪ್ರತಿಭಟನೆಯನ್ನುದ್ದೇಶಿಸಿ ವಿಜಯನಗರ ಜಿಲ್ಲಾ ಅಲೆಮಾರಿ ಒಕ್ಕೂಟದ ಅಧ್ಯಕ್ಷ ಸಣ್ಣ ಮಾರೆಪ್ಪ ಮಾತನಾಡಿದರು.

ಪ್ರತಿಭಟನೆಯಲ್ಲಿ ಮಂಜುನಾಥ ಶಾಸ್ತ್ರಿ, ಎಸ್.ಕೆ.ಚೌಡಪ್ಪ, ಜೆ.ರಮೇಶ, ಶೇಖರ್ ಡಿ., ಕಿನ್ನೂರಿ ಶಾಖಪ್ಪ, ಪಕ್ಕೀರಪ್ಪ ಬಾದಿಗಿ, ವೀರೇಶ, ಕರಿಬಸವರಾಜ ಅನೆಗಂಟಿ, ಸಿದ್ದು ಬೆಳಗಲ್, ಕೊಂಡ್ರಿ ರಾಜಪ್ಪ, ಹಂಪಯ್ಯ, ವಿ.ಮಲ್ಲೇಶಪ್ಪ, ಸಣ್ಣ ಅಜ್ಜಯ್ಯ, ಎಸ್.ಬಿ. ಮಂಜುನಾಥ ಸೇರಿದಂತೆ ಜಿಲ್ಲೆಯ ವಿವಿಧೆಡೆಯಿಂದ ಅಲೆಮಾರಿ ಸಮುದಾಯದ ನೂರಾರು ಜನರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News