×
Ad

ವಿಜಯನಗರ | ವ್ಯಕ್ತಿ ನಾಪತ್ತೆ : ಪ್ರಕರಣ ದಾಖಲು

Update: 2025-06-16 21:19 IST

ವಿಜಯನಗರ(ಹೊಸಪೇಟೆ) : ಹೊಸಪೇಟೆ ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯ ಸುಮಾರು 47 ವರ್ಷದ ಎಂ.ಸಿದ್ರಾಮೇಶ್ ಎಂಬ ವ್ಯಕ್ತಿಯು ಕಾಣೆಯಾಗಿರುವ ಕುರಿತು ಹೊಸಪೇಟೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಹೊಸಪೇಟೆ ಬಡಾವಣೆ ಪೊಲೀಸ್ ಉಪನಿರೀಕ್ಷಕರು ತಿಳಿಸಿದ್ದಾರೆ.

ಕಾಣೆಯಾದ ವ್ಯಕ್ತಿಯ ಚಹರೆ : ಎಂ.ಸಿದ್ರಾಮೇಶ್ ಮನೆಯಿಂದ ಹೋಗುವಾಗ ಒಂದು ಸ್ಕೈಬ್ಲೂ ಬಣ್ಣದ ಚೆಕ್ಸ್‌ ಹಾಫ್ ಶರ್ಟ್, ಗೋಧಿ ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ. ಎತ್ತರ ಸುಮಾರು 5.5 ಅಡಿ ಇದ್ದು, ದಪ್ಪನೆಯ ಮೈಕಟ್ಟು, ಎಣ್ಣೆಗೆಂಪು ಮೈ ಬಣ್ಣ ಇದ್ದು, ಕನ್ನಡ, ತೆಲುಗು, ಹಿಂದಿ, ಇಂಗ್ಲೀಷ್ ಭಾಷೆಗಳನ್ನು ಮಾತನಾಡುತ್ತಾನೆ. ತಲೆಯ ನೆತ್ತಿಯ ಮೇಲೆ ಹಳೆ ಗಾಯದ ಗುರುತು ಇದೆ. ಎರಡೂ ಕಾಲುಗಳ ಹೆಬ್ಬೆರಳಿನ ತಲಾ 2 ಬೆರಳುಗಳು, ಸಹಜ ಬೆರಳಿಗಿಂತ ಚಿಕ್ಕದಾಗಿವೆ. ಈ ವ್ಯಕ್ತಿಯ ಬಗ್ಗೆ ಮಾಹಿತಿ ಕಂಡುಬಂದಲ್ಲಿ ಪಿಎಸ್ ದೂ.08394 230233, 08394 224933, ಸಿಪಿಐ ಮೊ.9480805731, 9480805755, ಡಿಎಸ್‌ಪಿ ದೂ.08394 224204, ಮೊ.9480805720 ಹಾಗೂ ಹೊಸಪೇಟೆ ಕಂಟ್ರೋಲ್ ರೂಂ.08394 226100 ಕರೆ ಮಾಡಿ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News