×
Ad

ವಿಜಯನಗರ | ವ್ಯಕ್ತಿ ನಾಪತ್ತೆ : ಪ್ರಕರಣ ದಾಖಲು

Update: 2025-11-10 20:41 IST

ವಿಜಯನಗರ(ಹೊಸಪೇಟೆ): ನಗರದ ಚಿತ್ತವಾಡ್ಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗೃಹರಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಟಿ.ಮಂಜುನಾಥ್‌ ಎಂಬವರು ನಾಪತ್ತೆಯಾಗಿದ್ದು, ಈ ಕುರಿತು  ಚಿತ್ತವಾಡ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟಿ.ಮಂಜುನಾಥ್‌ ಅವರು ಸುಮಾರು 5.3 ಅಡಿ ಎತ್ತರ, ಧೃಡವಾದ ಮೈಕಟ್ಟು, ಗೋಧಿ ಮೈಬಣ್ಣ, ಕಾಣೆಯಾಗುವ ಮುಂಚೆ ಖಾಕಿ ಸಮವಸ್ತ್ರ ಧರಿಸಿರುತ್ತಾರೆ.  ಅವರು  ಕನ್ನಡ, ತೆಲಗು ಮತ್ತು ಹಿಂದಿ ಭಾಷೆಯನ್ನು ಮಾತನಾಡುತ್ತಾರೆ.

ಅವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಮೊ.9480803756 ಗೆ ಅಥವಾ ಚಿತ್ತವಾಡ್ಗಿ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ  ಪ್ರಕಟಣೆಯಲ್ಲಿ ತಿಳಿಸಲಾಗಿದೆ.  

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News