ವಿಜಯನಗರ | ಅಖಿಲ ಭಾರತೀಯ ರೈತ ಪಾರ್ಟಿ ಪಕ್ಷದ ಅಧ್ಯಕ್ಷರಿಗೆ ನೋಟಿಸ್ ಜಾರಿ
ವಿಜಯನಗರ(ಹೊಸಪೇಟೆ), ಆ.19: ಹಾಸನ ಜಿಲ್ಲೆಯಲ್ಲಿ ಪಕ್ಷ ನೋಂದಣಿ ಮಾಡಿದ ‘ಅಖಿಲ ಭಾರತೀಯ ರೈತ ಪಾರ್ಟಿ’ ಪ್ರಸ್ತುತ 88 ಹಡಗಲಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪಕ್ಷದ ಕಚೇರಿ ಪ್ರಾರಂಭಿಸಿದರಿಂದ ಪಕ್ಷದ ಅಧ್ಯಕ್ಷರಿಗೆ ಕಾರಣ ಕೇಳಿ ನೋಟಿಸು ಜಾರಿ ಮಾಡಲಾಗಿದೆ ಎಂದು ತಿಳಿದುಬಂದಿದೆ.
ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳು ಪ್ರಜಾಪ್ರತಿನಿಧಿ ಕಾಯ್ದೆ 1951 ರ ಆಯೋಗ ನಡೆಸುವ ಚುನಾವಣೆಯಲ್ಲಿ 2019 ರಿಂದ ಕಳೆದ 6 ವರ್ಷ ಯಾವುದೇ ಚುನಾವಣೆಯಲ್ಲಿ ಭಾಗವಹಿಸದೇ ಇರುವ ಪಕ್ಷಗಳು, ಲೇಖನ 324 ರ ಭಾರತ ಸಂವಿಧಾನ ಮತ್ತು ನಿಯಮ 294 ಪ್ರಜಾಪ್ರತಿನಿಧಿ ಕಾಯ್ದೆ 1951 ಮಾನ್ಯತೆ ಪಡೆಯದ ರಾಜಕೀಯ ಪಕ್ಷವನ್ನು ರಾಜಕೀಯ ಪಕ್ಷದ ಪಟ್ಟಿಯಿಂದ ತೆಗೆದು ಹಾಕಲು ಮಾನ್ಯ ಮುಖ್ಯ ಚುನಾವಣಾಧಿಕಾರಿ ನೋಟಿಸ್ ಜಾರಿ ಮಾಡಿದ್ದಾರೆ.
ಸೆ.1ರೊಳಗೆ ತಮ್ಮ ಲಿಖಿತ ಮನವಿಯನ್ನು ಹಾಗೂ ಸಂಬಂಧಿಸಿದ ದಾಖಲೆಗಳನ್ನು ಆಯೋಗಕ್ಕೆ ಸಲ್ಲಿಸತಕ್ಕದ್ದು. ಆಯೋಗ ನಿಗದಿಪಡಿಸಿದ ದಿನಾಂಕ ಒಳಗಾಗಿ ತಮ್ಮ ಮನವಿಯನ್ನು ಸಲ್ಲಿಸದೇ ಇದ್ದ ಪಕ್ಷದಲ್ಲಿ ಆಯೋಗವು ಪಕ್ಷವನ್ನು ಸಂಪರ್ಕಿಸದೇ ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಎಂ.ಎಸ್ .ದಿವಾಕರ್ ಪ್ರಕಟನೆೆಯಲ್ಲಿ ತಿಳಿಸಿದ್ದಾರೆ.