×
Ad

ವಿಜಯನಗರ | ಪೈಗಂಬರ್ ಮುಹಮ್ಮದ್ ಅವರ 1,500ನೇ ಜನ್ಮದಿನೋತ್ಸವದ ಪೂರ್ವಭಾವಿ ಸಭೆ

Update: 2025-10-10 23:11 IST

ವಿಜಯನಗರ (ಹೊಸಪೇಟೆ): ಪೈಗಂಬರ್ ಮುಹಮ್ಮದ್ ರವರ 1500ನೇ ಜನ್ಮದಿನೋತ್ಸವ ಪ್ರಯುಕ್ತ “ವಿಶ್ವಶಾಂತಿ ಸಂದೇಶ ಹಾಗೂ ಪೈಗಂಬರ್ ಮುಹಮ್ಮದ್ ರವರ ಜೀವನ – ಶಾಂತಿ ಸಂದೇಶದ ಸ್ವರೂಪ ಮತ್ತು ಇಸ್ಲಾಂ ಧರ್ಮ” ಎಂಬ ವಿಷಯದ ಕುರಿತ ಕಾರ್ಯಕ್ರಮವನ್ನು ಅ.18ರಂದು ಕೊಪ್ಪಳದಲ್ಲಿ ಆಯೋಜಿಸಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆ ಹೊಸಪೇಟೆಯ ಉಮರ್ ಫಂಕ್ಷನ್ ಹಾಲ್‌ನಲ್ಲಿ, ಹೊಸಪೇಟೆ ಮಿಲಾದ್ ಕಮಿಟಿಯ ನೇತೃತ್ವದಲ್ಲಿ ನಡೆಯಿತು.

ಸಭೆಯಲ್ಲಿ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸಲೀಂ ಅಹಮದ್ ಅವರು, “ಈ ಕಾರ್ಯಕ್ರಮದಲ್ಲಿ ಯಾವುದೇ ರಾಜಕೀಯ ಉದ್ದೇಶ ಇಲ್ಲ. ಎಲ್ಲರೂ ಕೊಪ್ಪಳಕ್ಕೆ ಆಗಮಿಸಿ ಸೂಫಿ ಸಂತರ ಆಶಯದ ವಿಶ್ವಶಾಂತಿ ಸಂದೇಶ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು” ಎಂದು ಮನವಿ ಮಾಡಿದರು.

ಸಭೆಯಲ್ಲಿ ಬಡವಲಿ, ಸೈಯದ್ ಖಾದರ್ ರಫಾಯಿ, ಗುರುದತ್, ಫಯಾಝ್‌ ಸಾಹೇಬ್, ಜಲೀಲ್, ಜೋಶಿ, ಟಿಂಕರ್ ರಫೀಕ್ ಹಾಗೂ ಮುಸ್ಲಿಂ ಸಮುದಾಯದ ಗಣ್ಯರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News