ವಿಜಯನಗರ| ಖಾಸಗಿ ಮಾಲಿಕತ್ವದಲ್ಲಿರುವ 22 ಸ್ಲಂಗಳನ್ನು ಸ್ಲಂ ಬೋರ್ಡ್ ಗೆ ಹಸ್ತಾಂತರಿಸುವಂತೆ ಮನವಿ
Update: 2025-11-28 21:38 IST
ವಿಜಯನಗರ : ಖಾಸಗಿ ಮಾಲಿಕತ್ವದಲ್ಲಿರುವ 22 ಸ್ಲಂಗಳನ್ನು ಸ್ಲಂ ಬೋರ್ಡ್ ಗೆ ಹಸ್ತಾಂತರಿಸುವಂತೆ ಆಗ್ರಹಿಸಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಪ್ರಸಾದ್ ಅಬ್ಬಯ್ಯರವರಿಗೆ ಮನವಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸ್ಲಂ ಬೋರ್ಡ್ ಆಯುಕ್ತರಾದ ರಾಘವೇಂದ್ರ ಟಿ., ಹೊಸಪೇಟೆ ನಗರಸಭೆ ಅಧ್ಯಕ್ಷರಾದ ಎನ್.ರೂಪೇಶ್ ಕುಮಾರ್, ಉಪಾಧ್ಯಕ್ಷರಾದ ಜೀವರತ್ನಂ, ಸ್ಲಂ ಜನರ ಸಂಘಟನೆ ಕರ್ನಾಟಕದ ರಾಜ್ಯಾಧ್ಯಕ್ಷರಾದ ಐಜಾಕ್ ಅಮೃತ್ ರಾಜ್, ವಿಜಯನಗರ ಜಿಲ್ಲಾ ಸಮಿತಿಯ ಅಧ್ಯಕ್ಷರಾದ ಹೆಚ್. ಶೇಷು ಹಾಗೂ ಪ್ರಧಾನ ಕಾರ್ಯದರ್ಶಿ ಎನ್.ವೆಂಕಟೇಶ್, ರಾಜ್ಯ ಮುಖಂಡರಾದ ಅನ್ಬು, ಮಣಿ ಉಪಸಿತರಿದ್ದರು.