×
Ad

ವಿಜಯನಗರ | ಸರಕಾರ ನೀಡುವ ಸೌಲಭ್ಯ ಸದುಪಯೋಗ ಪಡೆದುಕೊಂಡರೆ ಮಾತ್ರ ಸಮಾಜ ಅಭಿವೃದ್ಧಿಗೊಳ್ಳಲು ಸಾಧ್ಯ : ಡಾ.ನಾಯೀಮ್ ಪಾಷಾ

Update: 2025-08-09 19:47 IST

ವಿಜಯನಗರ ( ಹೊಸಪೇಟೆ ): ಕೇಂದ್ರ ಸರ್ಕಾರದ ಮತ್ತು ರಾಜ್ಯ ಸರ್ಕಾರಗಳು ರೈತರಿಗೆ ಕೃಷಿ ಇಲಾಖೆಯಲ್ಲಿ ನೀಡುವ ಎಲ್ಲಾ ಸೌಲಭ್ಯಗಳನ್ನು ಪಡೆಯುವುದರ ಜೊತೆಗೆ ಸೌಲಭ್ಯ ವಂಚಿತ, ಮತ್ತು ವಿಷಯಗಳು ತಿಳಿಯದ ರೈತರಿಗೆ ಮನವರಿಕೆ ಮಾಡುವ ಮೂಲಕ ಸೌಲಭ್ಯ ಪಡೆಯುವಲ್ಲಿ ಸಹಾಯ ಮಾಡಬೇಕು ಎಂದು ವಿಜಯನಗರ ಜಿಲ್ಲೆ ಕೃಷಿ ಇಲಾಖೆಯ ಉಪ ನಿರ್ದೇಶಕರಾದ ಡಾ.ಕೆ.ನಯೀಮ್ ಪಾಷಾ ಹೇಳಿದರು.

ಹೊಸಪೇಟೆಯ ಜಮಾತೆ ಇಸ್ಲಾಮಿಕ್ ಹಿಂದ್ ಸಂಘಟನೆಯ ನೇತೃತ್ವದಲ್ಲಿ ಕಲ್ಯಾಣ ಯೋಜನೆಗಳ ಮೂಲಕ ಸಮುದಾಯದ ಸಬಲೀಕರಣಕ್ಕಾಗಿ ವೇದಿಕೆ ಸಹಯೋಗದಲ್ಲಿ ಸರ್ಕಾರಿ ಕಲ್ಯಾಣ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ನಗರದ ಅಂಜುಮನ್ ಕಮಿಟಿಯ ಸಭಾಂಗಣದಲ್ಲಿ ಯೋಜನೆಗಳ ಕುರಿತು ಇಸ್ಲಾಂ ಸಮುದಾಯದವರಿಗೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಅಖಂಡ ಬಳ್ಳಾರಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಎನ್.ಎಮ್.ನೂರ್‌, ಹುಡ ಅಧ್ಯಕ್ಷರಾದ ಇಮಾಮ ನಿಯಾಜಿ, ಸೈಯದ್ ಇರ್ಫಾನ್ ಹೆಲ್ತ್ ಕೌನ್ಸಿಲರ್ ಬೆಂಗಳೂರು, ಕಲೀಮುಲ್ಲಾ ಖಾನ್ ಮನ್ಸೂರಿ, ರಿಯಾಝ್‌ ಅಹಮದ್, ಮೌಲಾನಾ ಅನ್ವರ್ ಭಾಷಾ, ಮುಹಮ್ಮದ್ ಅಜೀಜ್ ಮುಲ್ಲಾ, ಇತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News