×
Ad

ವಿಜಯನಗರ | ಮತಗಳ್ಳತನ ಆರೋಪ : ಚುನಾವಣೆ ಆಯೋಗದ ವಿರುದ್ಧ ಯುವ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ

Update: 2025-08-17 19:47 IST

ವಿಜಯನಗರ: ನಗರದ ಕೆಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ವಿಜಯನಗರ ಜಿಲ್ಲಾ ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರಾದ ಅಶೋಕ ನಾಯಕ್ ನೇತೃತ್ವದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ವಿರುದ್ಧ ಸ್ಟಾಪ್ ಮತ ಕಳ್ಳತನ ಎಂಬ ಬಿತ್ತಿ ಪತ್ರವನ್ನು (ಸ್ಟಿಕರ್) ಹಿಡಿದು ಪ್ರತಿ ಬಸ್‌ಗಳಿಗೆ ಅಂಟಿಸುವ ಮೂಲಕ ಪ್ರತಿಭಟನೆ ನಡೆಸಿದರು.

ವಿಜಯನಗರ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ನಾಯಕ್ ಮಾತನಾಡಿ,  ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನವನ್ನು ಕೊಟ್ಟಿದ್ದಾರೆ. ಇಂತಹ ನಮ್ಮ ಮಹಾನ್‌ ದೇಶದಲ್ಲಿ ಇತರಹದ ಪ್ರಕರಣಗಳು ಆಗಬಾರದು. ನಮ್ಮ ನಾಯಕರದಂತಹ ರಾಹುಲ್ ಗಾಂಧಿ ಸ್ಪಷ್ಟ ದಾಖಲೆ ಸಮೇತ ಮತದಾರರ ಮತವನ್ನು ಬಿಜೆಪಿಯ ಮುಖಂಡರು ಕಬಳಿಕೆ ಮಾಡಿರುವುದು ಎಂದು ಆರೋಪಿಸಿ ಚುನಾವಣೆ ಆಯೋಗಕ್ಕೆ ಸ್ಪಷ್ಟನೆ ನೀಡಿದ್ದಾರೆ. ನಮ್ಮ ರಾಜ್ಯದಲ್ಲಿ ಮಾತ್ರ ವೋಟು ಕಳ್ಳತನ ಆಗಿಲ್ಲ. ಇಡೀ ದೇಶಾದ್ಯಂತ ಬಿಜೆಪಿಯವರು ವೋಟ್ ಕಳೆವು ಮಾಡುವ ಮೂಲಕ ಅಧಿಕಾರಕ್ಕೆ ಬಂದಿದ್ದಾರೆ ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಅಲ್ತಾಫ್, ಹೊಸಪೇಟೆ ತಾಲೂಕ ಅಧ್ಯಕ್ಷರಾದ ಹಾರುನ್ ಶೇಖ್, ಪ್ರದೀಪ್, ವಕೀಲರಾದ ಗೌಸ್, ಪ್ರಶಾಂತ್, ಝಮೀರ್, ಆರ್ಭಜ್, ಅಬ್ದುಲ್, ಮೊಹೀನ್, ನಸೀರ್, ಮೈನು, ಮತ್ತು ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News