ವಿಜಯನಗರ | ‘ವಾರ್ತಾಭಾರತಿ’ ವರದಿ ಫಲಶ್ರುತಿ : ಎಂ.ಪಿ.ಪ್ರಕಾಶ ಕಲಾ ಮಂದಿರದ ಸ್ವಚ್ಛತೆಗೆ ಡಿಸಿ ಆದೇಶ
Update: 2026-01-13 21:03 IST
ವಿಜಯನಗರ : ಹೊಸಪೇಟೆ ನಗರಸಭೆ ಆವರಣದಲ್ಲಿರುವ ಎಂ.ಪಿ.ಪ್ರಕಾಶ ಕಲಾಮಂದಿರವನ್ನು ಗೋದಾಮಾಗಿ ಉಪಯೋಗಿಸುತ್ತಿದ್ದಲ್ಲಿ ಕೂಡಲೆ ಸ್ವಚ್ಛಗೊಳಿಸಿ ಕಲಾವಿದರಿಗೆ ಉಪಯೋಗಿಸಲು ಅನುಕೂಲ ಮಾಡಿಕೊಡುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಹಂಪಿ ಉತ್ಸವಕ್ಕೆ ಬರುವ ಕಲಾವಿದರು ಕಲಾಮಂದಿರದಲ್ಲಿ ವಾಸ್ತವ್ಯ ಹೂಡಿ ನಾಟಕ, ನೃತ್ಯ ಅಭ್ಯಾಸ ಮಾಡುತ್ತಿದ್ದರು. ಆದರೆ ಸೂಕ್ತ ನಿರ್ವಹಣೆಯ ಕೊರತೆ, ನಗರಸಭೆಯ ನಿರ್ಲಕ್ಷ್ಯದಿಂದ ಕಲಾಮಂದಿರ ಗೋದಾಮಾಗಿ ಪರಿವರ್ತನೆಗೊಂಡಿದೆ ಎಂದು ಡಿ.31ರಂದು ವಾರ್ತಾಭಾರತಿ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿತ್ತು. ಈ ವರದಿಯನ್ನು ಗಮನಿಸಿದ ಜಿಲ್ಲಾಧಿಕಾರಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.