Screengrab : X \ Facebook 

ಹೊಸದಿಲ್ಲಿ: ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿನ ಅಕ್ರಮಗಳನ್ನು ಖಂಡಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ದಿಲ್ಲಿಯಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಯುವತಿಯೊಬ್ಬಳ ಮೇಲೆ ಹಿಂದೂ ರಕ್ಷಾ ದಳದ ಸದಸ್ಯರು ಹಲ್ಲೆ ನಡೆಸಿದ್ದಾರೆ ಎನ್ನಲಾದ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇದೇ ವೇಳೆ, ಪ್ರತಿಭಟನಾಕಾರರನ್ನು ನಿಯಂತ್ರಿಸಲು ನಿರ್ಬಂಧ ವಿಧಿಸುತ್ತಿರುವ ದಿಲ್ಲಿ ಪೊಲೀಸರು, ಪ್ರತಿಭಟನಾಕಾರರಿಗೆ ಬೆದರಿಕೆ ಹಾಕುವ ಬಲಪಂಥೀಯ ಗುಂಪುಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪಗಳೂ ಕೇಳಿಬಂದಿವೆ.

ಹಿಂದೂ ರಕ್ಷಾ ದಳದ ಸದಸ್ಯ ರವೀಂದ್ರ ಗೋವಿಂದ ಮತ್ತು ಆತನ ಸಂಗಡಿಗರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಯುವತಿಯೊಬ್ಬಳ ಮೇಲೆ ಹಲ್ಲೆ ನಡೆಸಿ, ಎಳೆದಾಡುತ್ತಿರುವ ದೃಶ್ಯಗಳು ವೈರಲ್ ಆಗಿರುವ ವಿಡಿಯೊದಲ್ಲಿವೆ. ಹಲ್ಲೆ ನಡೆಸಿದವರಲ್ಲಿ ಓರ್ವನನ್ನು ರವೀಂದ್ರ ಗೋವಿಂದ ಎಂದು ಫ್ಯಾಕ್ಟ್‌ ಚೆಕ್ಕರ್ ಮಹಮ್ಮದ್ ಝುಬೈರ್ ಗುರುತಿಸಿದ್ದಾರೆ.

ಘಟನೆಯ ಸಂದರ್ಭದಲ್ಲಿ ಪೊಲೀಸರು ಸ್ಥಳದಲ್ಲಿದ್ದರೂ ಹಲ್ಲೆಕೋರರನ್ನು ತಕ್ಷಣ ತಡೆಯಲಿಲ್ಲ. ಮಾತ್ರವಲ್ಲದೆ, ಹಲ್ಲೆಕೋರರನ್ನು ವಶಕ್ಕೆ ಪಡೆಯುವ ಬದಲಾಗಿ ಹಲ್ಲೆಗೊಳಗಾದ ಸಂತ್ರಸ್ತೆಯನ್ನೇ ಪೊಲೀಸರು ಎಳೆದೊಯ್ಯಲು ಪ್ರಯತ್ನಿಸಿರುವುದು ವಿಡಿಯೊದಲ್ಲಿ ದಾಖಲಾಗಿದೆ.

ಸ್ವತಂತ್ರ ಪತ್ರಕರ್ತ ಪ್ರಣವ್ ಪ್ರಧಿ (@pranavpradhi1) ಅವರು, ದಿಲ್ಲಿಯಲ್ಲಿ ಸಾಮಾನ್ಯ ನಾಗರಿಕರು ಗುಂಪುಗೂಡಲು ಅಥವಾ ಪ್ರತಿಭಟನೆ ನಡೆಸಲು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್) ಸೆಕ್ಷನ್ 163ರ ಅಡಿಯಲ್ಲಿ ಪೊಲೀಸರು ನಿರ್ಬಂಧ ವಿಧಿಸುತ್ತಿದ್ದಾರೆ. ಆದರೆ, ಹಿಂದುತ್ವ ಸಂಘಟನೆಗಳ ಸದಸ್ಯರು ಬಹಿರಂಗವಾಗಿ ಗುಂಪುಗೂಡಿ ಪ್ರತಿಭಟನಾಕಾರರಿಗೆ ಬೆದರಿಕೆ ಹಾಕಲು ಹೇಗೆ ಅವಕಾಶ ನೀಡಲಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ.

ಪ್ರತಿಭಟನಾಕಾರರು ಭಾರತ ವಿರೋಧಿ ಘೋಷಣೆಗಳನ್ನು ಕೂಗುತ್ತಿದ್ದಾರೆ ಎಂದು ಈ ಗುಂಪುಗಳು ಆರೋಪಿಸುತ್ತಿವೆ. ಆದರೆ, ತಾವು ಪ್ರತಿಭಟನೆಗಳನ್ನು ವರದಿ ಮಾಡಿದ್ದು, ಅಂತಹ ಘೋಷಣೆಗಳನ್ನು ಕೇಳಿಲ್ಲ ಎಂದು ಪ್ರಣವ್ ಪ್ರಧಿ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಪ್ರತಿಭಟನಾಕಾರರನ್ನು ತಡೆಯುವ ಪೊಲೀಸರು, ಅವರನ್ನು ಬೆದರಿಸುವ ಗುಂಪುಗಳ ವಿರುದ್ಧ ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.

ಪತ್ರಕರ್ತರು ಮೊದಲೇ ಎಚ್ಚರಿಕೆ ನೀಡಿದ್ದರೂ ದಿಲ್ಲಿ ಪೊಲೀಸರು ಸಮಯಕ್ಕೆ ಸರಿಯಾಗಿ ಕ್ರಮ ಕೈಗೊಂಡು ಕರ್ತವ್ಯ ನಿರ್ವಹಿಸಿದ್ದರೆ ಯುವತಿಯ ಮೇಲಿನ ಹಲ್ಲೆಯನ್ನು ತಡೆಯಬಹುದಿತ್ತು ಎಂದು @Quixotic_fella ಎಂಬ ಎಕ್ಸ್ ಖಾತೆಯ ಬಳಕೆದಾರರು ಅಭಿಪ್ರಾಯಪಟ್ಟಿದ್ದಾರೆ. ಪೊಲೀಸರ ವರ್ತನೆಯ ಬಗ್ಗೆ ಪತ್ರಕರ್ತರು ಮುನ್ನೆಚ್ಚರಿಕೆ ನೀಡುತ್ತಿದ್ದರೂ ಸೂಕ್ತ ಕ್ರಮ ಕೈಗೊಳ್ಳಲಿಲ್ಲ ಎಂಬ ಆರೋಪವನ್ನೂ ಅವರು ಮಾಡಿದ್ದಾರೆ.

ಯುವತಿಯ ಬಟ್ಟೆ ಹಿಡಿದೆಳೆದು ಹೊಡೆಯುತ್ತಿರುವ ರವೀಂದ್ರ ಗೋವಿಂದ, ಗಾಜಿಯಾಬಾದ್‌ನ ರೌಡಿ ಶೀಟರ್ ಆಗಿದ್ದು, ಸ್ಥಳೀಯ ರಾಜಕೀಯ ಮುಖಂಡರೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂದು ಸಾಮಾಜಿಕ ಜಾಲತಾಣಗಳ ಕೆಲವು ಪೋಸ್ಟ್‌ಗಳಲ್ಲಿ ಹೇಳಲಾಗಿದೆ. ಹಲ್ಲೆಗೊಳಗಾದ ಯುವತಿ ಅಪ್ರಾಪ್ತ ವಯಸ್ಸಿನವಳು ಎಂದೂ ವರದಿಯಾಗಿದೆ.

The left white shirt guy is been identified as Ravindra Govinda from Gaziabad. He is a criminal historysheeter in Gaziabad.

He assaulted young teenage girl in capital of India, infront of Delhi Police.

Shame on @DelhiPolice https://t.co/uxqABm6QFs

— Prashant Kanojia (@KanojiaPJ) October 10, 2026

ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ 2,000ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಆದರೆ, ವೈರಲ್ ವಿಡಿಯೊದಲ್ಲಿನ ಹಲ್ಲೆ ಹಾಗೂ ಪೊಲೀಸರ ಕ್ರಮದ ಕುರಿತು ದಿಲ್ಲಿ ಪೊಲೀಸರು ಸ್ಪಷ್ಟನೆ ನೀಡಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

#Wanted: इन चेहरों को गौर से देखिए..

आज RSS BJP के इन गुंडों ने दिल्ली के Connaught Place पर युवाओं और बेटियों पर हमला किया था।

इनका "न्यायसंगत" इलाज सभी की साझी जिम्मेदारी है।

@IYC @IYCLegal @DelhiPolice को जरूर Tag करें। https://t.co/f6NUCbFV2T

— Indian Youth Congress (@IYC) October 10, 2026

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor