X ಬಳಕೆದಾರರೇ ಎಚ್ಚರ: 'Vote for Me' ಎಂದು ಬರುವ ಸಂದೇಶಗಳ ಹಿಂದಿದೆ ಸೈಬರ್ ವಂಚನೆ!

ಈ ವಂಚನೆ ಹೇಗೆ ಕೆಲಸ ಮಾಡುತ್ತದೆ? ಸಂದೇಶ ಬಂದಾಗ ಏನು ಮಾಡಬೇಕು?; ಇಲ್ಲಿದೆ ಮಾಹಿತಿ...

Update: 2026-07-23 18:31 IST

Photo Credit : X 

ಒಮ್ಮೆ ಹ್ಯಾಕರ್ ಗಳು ಸಂತ್ರಸ್ತರ ಪಾಸ್ವರ್ಡ್ ಬಹಿರಂಗಗೊಂಡ ಮೇಲೆ ಕ್ರಿಪ್ಟೋ ಸ್ಕ್ಯಾಮ್ ಅಥವಾ ಫಿಶಿಂಗ್ ದಾಳಿ ನಡೆಸಬಹುದು ಎಂದು ವರದಿಯಾಗಿದೆ.

ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಅನೇಕ ಬಳಕೆದಾರರು ತಮಗೆ ನೇರ ಸಂದೇಶಗಳಲ್ಲಿ (DM) ಮತ ಚಲಾಯಿಸುವಂತೆ ಕೇಳುವ ಸಂದೇಶಗಳು ಬರುತ್ತಿರುವುದಾಗಿ ಹೇಳುತ್ತಿದ್ದಾರೆ. ಕಳುಹಿಸುವವರಿಗೆ ಬಹುಮಾನ ಅವಕಾಶ ಅಥವಾ ಸ್ಪರ್ಧೆಯನ್ನು ಗೆಲ್ಲಲು ಸಹಾಯ ಮಾಡಲು ಇರುವ ಲಿಂಕ್ ಗಳನ್ನು ಜೊತೆಗೆ ಸೇರಿಸಿರಲಾಗುತ್ತಿದೆ. ಇಂತಹ ವಿನಂತಿಗಳನ್ನು ಈವರೆಗೂ ಭದ್ರತೆಯ ಬೆದರಿಕೆಯಾಗಿ ನೋಂದಾಯಿಸದೆ ಇದ್ದರೂ ಎಕ್ಸ್‌ ನಲ್ಲಿ ಹಲವರು ಇಂತಹ ಸಂದೇಶ ಸ್ವೀಕರಿಸಿರುವುದಾಗಿ ತಿಳಿಸುತ್ತಿದ್ದಾರೆ.

ಈ ವಂಚನೆ ಹೇಗೆ ಕೆಲಸ ಮಾಡುತ್ತದೆ?

“ವೋಟ್ ಫಾರ್ ಮಿ’ (ನನಗೆ ಮತ ಚಲಾಯಿಸಿ) ಒಂದು ಫಿಶಿಂಗ್ ದಾಳಿಯಾಗಿದ್ದು, ಇದರಲ್ಲಿ ವಂಚಕನು ವಿಶ್ವಾಸಾರ್ಹ, ಕಾನೂನುಬದ್ಧ ಮೂಲಗಳಿಂದ ಬಂದಿರುವಂತೆ ಕಂಡುಬರುವ ನೇರ ಸಂದೇಶಗಳನ್ನು ಕಳುಹಿಸುವ ಮೂಲಕ ಸಂತ್ರಸ್ತರ ಖಾಸಗಿ ಕ್ರೆಡೆನ್ಷಿಯಲ್ಗಳನ್ನು (ಐಡಿ, ಪಾಸ್ವರ್ಡ್) ಪಡೆಯಲು ಯತ್ನಿಸುತ್ತಿದ್ದಾರೆ.

ಒಂದು ಸಂದರ್ಭದಲ್ಲಿ, ಬಳಕೆದಾರರು ಪಾಡ್ಕಾಸ್ಟ್- ಸಂಬಂಧಿತ ಅವಕಾಶವನ್ನು ಗೆಲ್ಲಲು ಸಹಾಯ ಮಾಡಲು ಲಿಂಕ್ ಕ್ಲಿಕ್ ಮಾಡುವಂತೆ ಮತ್ತು ಕಳುಹಿಸುವವರಿಗೆ ಮತ ಹಾಕುವಂತೆ ಕೇಳುವ ಖಾತೆಗಳಿಂದ ಅನಿರೀಕ್ಷಿತ DM ಗಳನ್ನು ಸ್ವೀಕರಿಸುತ್ತಿದ್ದಾರೆ. ಇಂತಹ ಸಾರ್ವಜನಿಕ ಮತಗಳು ಅನೇಕ ಆನ್ಲೈನ್ ಸ್ಪರ್ಧೆಗಳಲ್ಲಿ ಸಾಮಾನ್ಯವಾಗಿದೆ. ಹೀಗಾಗಿ ತಮ್ಮ ಸ್ನೇಹಿತರು-ಸಂಬಂಧಿಕರಿಂದ ಇಂತಹ ಲಿಂಕ್ ಬಂದಾಗ ಕ್ಲಿಕ್ ಮಾಡಿ ಮತ ಚಲಾಯಿಸುತ್ತಾರೆ.

ಇದೀಗ ವಂಚಕರು ಅದೇ ಅಭ್ಯಾಸ ಬಳಸಿಕೊಂಡು ಬಳಕೆದಾರರನ್ನು ತಕ್ಷಣವೇ ಪ್ರತಿಕ್ರಿಯಿಸುವಂತೆ ಒತ್ತಾಯಿಸುತ್ತಿದ್ದಾರೆ. ಇದಕ್ಕಾಗಿ ‘ಗೂಗಲ್’ ಮತ್ತು ‘ಸ್ಪೋಟಿಫೈ’ಯಂತಹ ಕಂಪನಿಗಳ ಹೆಸರುಗಳನ್ನೂ ಬಳಸುತ್ತಿದ್ದಾರೆ.

ಲಿಂಕ್ ತೆರೆದ ನಂತರ ಬಳಕೆದಾರರನ್ನು ಸೈನ್ ಇನ್ ಪುಟಕ್ಕೆ ಕರೆದೊಯ್ಯಲಾಗುತ್ತದೆ. ಅಲ್ಲಿ ‘ಎಕ್ಸ್’ ಬಳಕೆದಾರನ ಹೆಸರು ಮತ್ತು ಪಾಸ್ವರ್ಡ್ ನಮೂದಿಸಲು ಕೇಳಲಾಗುತ್ತದೆ. ತಿಳಿಯದೆಯೇ ಅವರು ಬಳಕೆದಾರರ ಕ್ರೆಡೆನ್ಷಿಯಲ್ಗಳನ್ನು ಸಂಗ್ರಹಿಸಲು ಹೊಂದಿಸಲಾದ ನಕಲಿ ಪುಟವನ್ನು ತೆರೆಯುತ್ತಾರೆ. ಈ ‘ವೋಟ್ ಫಾರ್ ಮಿ’ ವಿನಂತಿಗಳು ಪರಿಶೀಲಿಸಿದ ಮತ್ತು ಪರಿಶೀಲಿಸದ ‘ಎಕ್ಸ್’ ಹ್ಯಾಂಡಲ್ಗಳಿಂದ ಬಂದಂತೆ ಕಾಣಿಸುತ್ತದೆ.

ಭಾರತದಲ್ಲಿ ಅನೇಕ ಮಂದಿ ಹ್ಯಾಕ್ ಮಾಡಲಾದ ಖಾತೆಗಳಿಂದ ಇಂತಹ ಸಂದೇಶಗಳನ್ನು ಸ್ವೀಕರಿಸಿವೆ. ಕಾಶ್ಮೀರದ ಪೊಲೀಸ್ ಅಧಿಕಾರಿಗಳು ಈ ವಿಷಯವನ್ನು ಗಮನಿಸಿ ಎಚ್ಚರಿಕೆಯನ್ನು (ಜನರಲ್ ವಾರ್ನಿಂಗ್) ನೋಡಿದ್ದಾರೆ. ಈ ಹಗರಣ ಅನೇಕ ತಿಂಗಳುಗಳಿಂದ ‘ಎಕ್ಸ್’ನಲ್ಲಿ ಪ್ರಸಾರವಾಗುತ್ತಿದೆ.

ಒಮ್ಮೆ ಹ್ಯಾಕರ್ಗಳು ಸಂತ್ರಸ್ತರ ಪಾಸ್ವರ್ಡ್ ಬಹಿರಂಗಗೊಂಡ ಮೇಲೆ ಕ್ರಿಪ್ಟೋ ಸ್ಕ್ಯಾಮ್ ಅಥವಾ ಫಿಶಿಂಗ್ ದಾಳಿ ನಡೆಸಬಹುದು ಎಂದು ವರದಿಯಾಗಿದೆ.

ಸಂದೇಶ ಬಂದಾಗ ಏನು ಮಾಡಬೇಕು?

ಬಳಕೆದಾರರು ಇಂತಹ ಸಂದೇಶವನ್ನು ನಿರ್ಲಕ್ಷಿಸಬೇಕು. ವಿಚಿತ್ರ ಲಿಂಕ್ಗಳ ಮೇಲೆ ಕ್ಲಿಕ್ ಮಾಡಬಾರದು. ಅಪರಿಚಿತ ಪುಟಗಳಲ್ಲಿ ಸೈನ್ ಇನ್ ಮಾಡಬಾರದು. ಬಳಕೆದಾರ ಹೆಸರು ಅಥವಾ ಪಾಸ್ವರ್ಡ್ ಅನ್ನು ವೆಬ್ತಾಣಕ್ಕೆ ಎಂದಿಗೂ ನಮೂದಿಸಬಾರದು. ಅಪರಿಚಿತರಿಂದ ‘ವೋಟ್ ಫಾರ್ ಮಿ’ ಸಂದೇಶ ಬಂದಾಗ ಖಾತೆಯನ್ನು ಬ್ಲಾಕ್ ಮಾಡಿ ಮತ್ತು ಕಳುಹಿಸುವವರ ಜೊತೆಗೆ ಸಂಪರ್ಕದಲ್ಲಿರಬೇಡಿ. ತಿಳಿದಿರುವವರಿಂದ ಸಂದೇಶ ಬಂದಲ್ಲಿ ಬೇರೆ ಮೂಲದ ಮೂಲಕ ಅವರನ್ನು ಸಂಪರ್ಕಿಸಿ ವಿಚಾರಿಸಿಕೊಳ್ಳಿ. ಖಾತೆ ಹ್ಯಾಕ್ ಆಗಿದೆಯೇ ಎಂದು ವಿಚಾರಿಸಿ.

ಈ ಬಗ್ಗೆ ‘ಎಕ್ಸ್’ ಕೂಡ ತನ್ನ ಬಳಕೆದಾರರಿಗೆ ಎಚ್ಚರಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News