ಹುಲಿ ಕಾರಿಡಾರ್ ಮೂಲಕ ಹಾದು ಹೋಗುವ ರೈಲು ಮಾರ್ಗಕ್ಕೆ ಪ್ರಾಥಮಿಕ ಅನುಮೋದನೆ
ಸಾಂದರ್ಭಿಕ ಚಿತ್ರ | Image by vladimircech on Magnific
ಅಧಿಕೃತ ದಾಖಲೆಗಳ ಪ್ರಕಾರ, ಪ್ರಸ್ತಾಪಿತ ರೈಲು ಮಾರ್ಗವು ಎರಡು ಅಧಿಸೂಚಿತ ಹುಲಿ ಕಾರಿಡಾರ್‌ಗಳಾಗಿರುವ ಸತ್ಪುರ–ಮೇಲ್ಘಾಟ್ ಪ್ರದೇಶದ ಪರಿಸರ ಸೂಕ್ಷ್ಮ ವಲಯದ ಮೂಲಕ ಹಾದು ಹೋಗುತ್ತದೆ. ಸತ್ಪುರ ಹುಲಿ ಮೀಸಲು ಪ್ರದೇಶವು ಮಧ್ಯಪ್ರದೇಶದಲ್ಲಿದ್ದು, ಮೇಲ್ಘಾಟ್ ಹುಲಿ ಮೀಸಲು ಪ್ರದೇಶವು ಮಹಾರಾಷ್ಟ್ರದಲ್ಲಿದೆ.
ಮಧ್ಯ ಭಾರತದ ಪ್ರಮುಖ ಹುಲಿ ಕಾರಿಡಾರ್ ಆಗಿರುವ ಸತ್ಪುರ ಮತ್ತು ಮೇಲ್ಘಾಟ್ ಹುಲಿ ಮೀಸಲು ಪ್ರದೇಶಗಳ ನಡುವೆ ಸಾಗುವ ಮಧ್ಯಪ್ರದೇಶದ ಜುಝಾರ್‌ಪುರ ಮತ್ತು ಚಿಚೋಂಡಾ ನಡುವಿನ ಮೂರನೇ ರೈಲು ಮಾರ್ಗಕ್ಕೆ ಅನುಮತಿ ನೀಡುವಂತೆ ರಾಷ್ಟ್ರೀಯ ವನ್ಯಜೀವಿ ಮಂಡಳಿಯ (NBWL) ಸ್ಥಾಯಿ ಸಮಿತಿ ಶಿಫಾರಸು ಮಾಡಿದೆ. ಹೀಗಾಗಿ ರೈಲು ಮಾರ್ಗಕ್ಕೆ ವನ್ಯಜೀವಿ ಸಂಬಂಧಿತ ಪ್ರಾಥಮಿಕ ಅನುಮೋದನೆ ದೊರೆತಿದ್ದು, ಹುಲಿ ಕಾರಿಡಾರ್ ವಿಭಜನೆಯಾಗುವ ಸಾಧ್ಯತೆ ಇದೆ.
ಜುಲೈ 9ರಂದು ನಡೆದ NBWL ಸಭೆಯ ವಿವರಗಳ ಪ್ರಕಾರ, ಕೇಂದ್ರ ರೈಲ್ವೆ ಸೂಚಿಸಿದ ರೈಲು ಮಾರ್ಗದುದ್ದಕ್ಕೂ ವನ್ಯಜೀವಿಗಳ ಸುರಕ್ಷಿತ ಸಂಚಾರಕ್ಕಾಗಿ ಮೇಲ್ಸೇತುವೆಗಳಂತಹ ತಗ್ಗಿಸುವಿಕೆ ರಚನೆಗಳನ್ನು ಸೂಕ್ತ ವೈಜ್ಞಾನಿಕ ಅಧ್ಯಯನ ಮತ್ತು ಎಂಜಿನಿಯರಿಂಗ್ ವಿನ್ಯಾಸಗಳ ಆಧಾರದ ಮೇಲೆ ಪರಿಶೀಲಿಸಿ ಅಂತಿಮಗೊಳಿಸಬೇಕು ಎಂಬ ಷರತ್ತಿನೊಂದಿಗೆ ಅನುಮತಿ ನೀಡಲಾಗಿದೆ.
ಅಧಿಕೃತ ದಾಖಲೆಗಳ ಪ್ರಕಾರ, ಪ್ರಸ್ತಾಪಿತ ರೈಲು ಮಾರ್ಗವು ಎರಡು ಅಧಿಸೂಚಿತ ಹುಲಿ ಕಾರಿಡಾರ್‌ಗಳಾದ ಸತ್ಪುರ–ಮೇಲ್ಘಾಟ್ ಪ್ರದೇಶದ ಪರಿಸರ ಸೂಕ್ಷ್ಮ ವಲಯದ ಮೂಲಕ ಹಾದು ಹೋಗುತ್ತದೆ. ಸತ್ಪುರ ಹುಲಿ ಮೀಸಲು ಪ್ರದೇಶವು ಮಧ್ಯಪ್ರದೇಶದಲ್ಲಿದ್ದು, ಮೇಲ್ಘಾಟ್ ಹುಲಿ ಮೀಸಲು ಪ್ರದೇಶವು ಮಹಾರಾಷ್ಟ್ರದಲ್ಲಿದೆ.
ಪ್ರಸ್ತಾಪಿತ ರೈಲು ಮಾರ್ಗವು ಎರಡು ಅಧಿಸೂಚಿತ ಹುಲಿ ಕಾರಿಡಾರ್‌ಗಳ ಮೂಲಕ ಹಾದು ಹೋಗುತ್ತದೆ. ಹುಲಿ ಕಾರಿಡಾರ್‌ಗಳು ಹುಲಿಗಳು, ಚಿರತೆಗಳು, ಸಸ್ಯಾಹಾರಿಗಳು, ಕರಡಿಗಳು ಸೇರಿದಂತೆ ಹಲವು ವನ್ಯಜೀವಿ ಪ್ರಭೇದಗಳು ಸಂಚರಿಸುವ ದಾರಿಗಳಾಗಿವೆ. ಇವು ಪ್ರಾಣಿಗಳು ಹೊಸ ಆವಾಸ ಪ್ರದೇಶಗಳಿಗೆ ಚದುರಲು ಸಹಾಯ ಮಾಡುತ್ತವೆ ಹಾಗೂ ವನ್ಯಜೀವಿಗಳ ಜೀನ್ ಹರಿವಿಗೆ ನೆರವಾಗುತ್ತವೆ.
ಸಾಲುಜೋಡಣೆಯ (alignment) ಸ್ಥಳಗಳನ್ನು ಪರಿಶೀಲಿಸಿದ ಸಮಿತಿಯು NBWLಗೆ ಸಲ್ಲಿಸಿದ ವರದಿಯಲ್ಲಿ, ಅರಣ್ಯ ಪ್ರದೇಶ ಮತ್ತು ಕಾರಿಡಾರ್‌ಗಳು ಸತ್ಪುರ–ಪೆಂಚ್–ಮೇಲ್ಘಾಟ್ ಭೂ ಪರಿಸರದ ಜೀವನಾಡಿಯಾಗಿವೆ. ಹೀಗಾಗಿ ಯೋಜನೆಯನ್ನು ಪ್ರಸ್ತುತ ಹಾಗೂ ಭವಿಷ್ಯದ ದೃಷ್ಟಿಕೋನಗಳಿಂದ ಪರಿಶೀಲಿಸಬೇಕು ಎಂದು ಹೇಳಿದೆ.
ಜುಝಾರ್‌ಪುರ (ಬೇತುಲ್ ಜಿಲ್ಲೆ) ಮತ್ತು ಚಿಚೋಂಡಾ (ನರ್ಮದಾಪುರಂ ಜಿಲ್ಲೆ) ನಡುವಿನ 160.6 ಕಿ.ಮೀ. ಉದ್ದದ ಈ ಭಾಗವು ಮುಂಬೈ ಕೇಂದ್ರ ಕಚೇರಿಯ ಮಧ್ಯ ರೈಲ್ವೆ ಪ್ರಸ್ತಾಪಿಸಿರುವ ಇಟಾರ್ಸಿ–ನಾಗ್ಪುರ ಮಾರ್ಗದಲ್ಲಿನ 290 ಕಿ.ಮೀ. ಉದ್ದದ ಮೂರನೇ ಮತ್ತು ನಾಲ್ಕನೇ ರೈಲು ಮಾರ್ಗ ಯೋಜನೆಯ ಭಾಗವಾಗಿದೆ. ಈ ಸಾಲುಜೋಡಣೆಯು ಅರಣ್ಯ ಪ್ರದೇಶ, ಎರಡು ಅಧಿಸೂಚಿತ ಹುಲಿ ಕಾರಿಡಾರ್‌ಗಳು ಹಾಗೂ ಪರಿಸರ ಸೂಕ್ಷ್ಮ ವಲಯದ ಮೂಲಕ ಹಾದು ಹೋಗುತ್ತದೆ.
ಈ ಯೋಜನೆಗೆ 206.09 ಹೆಕ್ಟೇರ್ ಭೂಮಿ ಅಗತ್ಯವಿದ್ದು, ಇದರಲ್ಲಿ 74.69 ಹೆಕ್ಟೇರ್ ಅರಣ್ಯ ಭೂಮಿ ಹಾಗೂ 131.4 ಹೆಕ್ಟೇರ್ ಅರಣ್ಯೇತರ ಭೂಮಿ ಅಧಿಸೂಚಿತ ಹುಲಿ ಕಾರಿಡಾರ್ ವ್ಯಾಪ್ತಿಯಲ್ಲಿ ಬರುತ್ತದೆ. ಈ ಪ್ರಸ್ತಾವನೆಯನ್ನು ಜನವರಿ 19ರಂದು ನಡೆದ 88ನೇ ಸಭೆಯಲ್ಲಿ NBWL ಪರಿಗಣಿಸಿತ್ತು. ಆದರೆ ಸ್ಥಳ ಪರಿಶೀಲನೆ ಅಗತ್ಯವೆಂದು ಪರಿಗಣಿಸಿದ್ದರಿಂದ ಅಂತಿಮ ನಿರ್ಧಾರವನ್ನು ಮುಂದೂಡಲಾಗಿತ್ತು.
ರೈಲ್ವೆ, ಕೇಂದ್ರ ಪರಿಸರ ಸಚಿವಾಲಯದ ಅಧಿಕಾರಿಗಳು, ಭಾರತೀಯ ವನ್ಯಜೀವಿ ಸಂಸ್ಥೆಯ ವಿಜ್ಞಾನಿ ಹಾಗೂ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಅಧಿಕಾರಿಯೊಬ್ಬರು ಸ್ಥಳ ಪರಿಶೀಲನೆ ನಡೆಸಿದ್ದರು. ಆದರೂ ಅದು ವಿವರವಾದ ವೈಜ್ಞಾನಿಕ ಅಧ್ಯಯನಕ್ಕಿಂತ ಹೆಚ್ಚಾಗಿ ಮುಂಚೂಣಿ ಅರಣ್ಯ ಸಿಬ್ಬಂದಿ ಹಾಗೂ ವನ್ಯಜೀವಿ ಮರಣದಾಖಲೆಗಳ ಮಾಹಿತಿಯನ್ನು ಆಧರಿಸಿ ನಡೆಸಿದ ಪರಿಶೀಲನೆಯಾಗಿತ್ತು.
ಈ ಯೋಜನೆಯ ವಿವರವಾದ ಎಂಜಿನಿಯರಿಂಗ್ ವಿನ್ಯಾಸಗಳನ್ನು ಇನ್ನೂ ಅಂತಿಮಗೊಳಿಸಬೇಕಾಗಿದೆ ಎಂದು NBWL ಜುಲೈ 9ರ ಸಭೆಯ ವಿವರಗಳು ತಿಳಿಸಿವೆ. “ಪರಿಶೀಲನೆಯ ಸಂದರ್ಭದಲ್ಲಿ ಯೋಜನೆಯ ಸಂಭವನೀಯ ಪರಿಣಾಮಗಳ ಸಮಗ್ರ ವೈಜ್ಞಾನಿಕ ಮೌಲ್ಯಮಾಪನ ಹಾಗೂ ಸೂಕ್ತ ಪರಿಸರ ತಗ್ಗಿಸುವಿಕೆ ಕ್ರಮಗಳು (landscape-level mitigation) ಪೂರ್ಣಗೊಂಡಿಲ್ಲ ಎಂಬುದು ಗಮನಕ್ಕೆ ಬಂದಿದೆ. ಜಬಲ್ಪುರದ ರಾಜ್ಯ ಅರಣ್ಯ ಸಂಶೋಧನಾ ಸಂಸ್ಥೆಗೆ ಅಧ್ಯಯನದ ಜವಾಬ್ದಾರಿ ವಹಿಸಲಾಗಿದ್ದು, ಅದರ ವರದಿ ಇನ್ನೂ ಸಿದ್ಧವಾಗಿಲ್ಲ” ಎಂದು ಸಭೆಯ ವಿವರಗಳಲ್ಲಿ ಹೇಳಲಾಗಿದೆ.