×
Ad

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ವಲಯ ಆಧರಿತ ಅಧಿಕಾರಿಗಳ ನೇಮಕಾತಿಗೆ ಅರ್ಜಿ ಆಹ್ವಾನ

Update: 2026-01-29 16:34 IST

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ | Photo Credit : sbi.bank.in

ಕರ್ನಾಟಕದಲ್ಲಿ ಬೆಂಗಳೂರು, ಹುಬ್ಬಳ್ಳಿ/ಧಾರವಾಡ, ಕಲಬುರಗಿ, ಮೈಸೂರು ಮತ್ತು ಮಂಗಳೂರು ವಲಯದ ಎಸ್ಬಿಐ ಸರ್ಕಲ್ ಆಧಾರಿತ ಅಧಿಕಾರಿಗಳ ಸಿಬಿಒ ಪರೀಕ್ಷೆ 2026ರಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಸ್ಬಿಐ ಸರ್ಕಲ್ ಆಧಾರಿತ ಅಧಿಕಾರಿಗಳ ಸಿಬಿಒ ನೇಮಕಾತಿ 2026 ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಕರ್ನಾಟಕದಲ್ಲಿ ಬೆಂಗಳೂರು, ಹುಬ್ಬಳ್ಳಿ/ಧಾರವಾಡ, ಕಲಬುರಗಿ, ಮೈಸೂರು ಮತ್ತು ಮಂಗಳೂರು ವಲಯದ ಎಸ್ಬಿಐ ಸರ್ಕಲ್ ಆಧಾರಿತ ಅಧಿಕಾರಿಗಳ ಸಿಬಿಒ ಪರೀಕ್ಷೆ 2026ರಕ್ಕೆ ಅರ್ಜಿ ಆಹ್ವಾನಿಸಿದೆ. ಆಸಕ್ತಿ ಹೊಂದಿರುವ ಅಭ್ಯರ್ಥಿಗಳು 2026 ಜನವರಿ 29ರಿಂದ 2026 ಫೆಬ್ರವರಿ 18ರ ನಡುವೆ ಅರ್ಜಿ ಸಲ್ಲಿಸಬಹುದು. ನೇಮಕಾತಿ ಅರ್ಹತೆ, ಹುದ್ದೆಯ ಮಾಹಿತಿ, ಆಯ್ಕೆ ವಿಧಾನ ಮತ್ತು ವಯಸ್ಸಿನ ಮಿತಿ, ವೇತನ ಶ್ರೇಣಿ ಕುರಿತ ಹೆಚ್ಚಿನ ಮಾಹಿತಿಯನ್ನು ಅಧಿಸೂಚನೆಯಲ್ಲಿ ನೋಡಬಹುದಾಗಿದೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಲಿಂಕ್ ಬಳಸಿ ಅರ್ಜಿ ಸಲ್ಲಿಸಬಹುದು:

https://ibpsreg.ibps.in/sbicbonov25/

ಪ್ರಮುಖ ದಿನಾಂಕಗಳು

• ಆನ್ಲೈನ್ ಅರ್ಜಿ ಆರಂಭ: 29 ಜನವರಿ 2026

• ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 18 ಫೆಬ್ರವರಿ 2026

• ಶುಲ್ಕ ಪಾವತಿಗೆ ಕೊನೆಯ ದಿನಾಂಕ: 18 ಫೆಬ್ರವರಿ 2026

• ಪರೀಕ್ಷೆ ದಿನಾಂಕ: 2026 ಮಾರ್ಚ್ (ತಾತ್ಕಾಲಿಕ)

• ಭರ್ತಿ ಕಾರ್ಡ್: ಪರೀಕ್ಷೆಗೆ ಮೊದಲು

• ಫಲಿತಾಂಶ ದಿನಾಂಕ: ಶೀಘ್ರವೇ ಅಪ್ಡೇಟ್ ಮಾಡಲಾಗುವುದು.

ಅರ್ಜಿ ಶುಲ್ಕ

• ಜನರಲ್/ಒಬಿಸಿ/ಇಡಬ್ಲ್ಯುಎಸ್: 750 ರೂ.

• ಎಸ್ಸಿ/ಎಸ್ಟಿ/ ಪಿಡಬ್ಲ್ಯುಡಿ: 0 ರೂ.

• ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, ಐಎಂಪಿಎಸ್, ಕ್ಯಾಶ್ ಕಾರ್ಡ್/ ಮೊಬೈಲ್ ವಾಲೆಟ್ ಮೂಲಕ ಪಾವತಿಸುವ ಅವಕಾಶವಿದೆ.

ವಯೋಮಿತಿ

• ಕನಿಷ್ಠ ವಯಸ್ಸು- 21 ವರ್ಷಗಳು

• ಗರಿಷ್ಠ ವಯಸ್ಸು 30 ವರ್ಷಗಳು

ಹೆಚ್ಚುವರಿ ವಯೋಮಿತಿ ಸಡಿಲಿಕೆಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಸ್ಬಿಐ ಸಿಬಿಒ 2026 ನೇಮಕಾತಿ ನಿಯಮಗಳಿಗೆ ತಕ್ಕಂತೆ ನೀಡಲಾಗುವುದು.

ಒಟ್ಟು ಹುದ್ದೆಗಳು

ಒಟ್ಟು ಹುದ್ದೆ 2050. ಕರ್ನಾಟಕದಲ್ಲಿ 200 ಹುದ್ದೆಗಳು ಲಭ್ಯವಿವೆ. ಕೇರಳ/ಲಕ್ಷದ್ವೀಪ- 50 ಹುದ್ದೆಗಳು (ಮಲಯಾಳಂ ಭಾಷಾ ಪ್ರಾವೀಣ್ಯತೆ ಅಗತ್ಯ)

ಹುದ್ದೆಯ ವಿವರಗಳು

• ಎಸ್ಬಿಐ ಸರ್ಕಲ್ ಬೇಸ್ಡ್ ಆಫೀಸರ್ ಸಿಬಿಒ

ವಿದ್ಯಾರ್ಹತೆ

ಯಾವುದೇ ರೀತಿಯ ಪದವಿ. ಸ್ಥಳೀಯ ಭಾಷೆಯಲ್ಲಿ ಬರೆಯುವುದು, ಓದುವುದು ಮತ್ತು ಅರ್ಥಮಾಡಿಕೊಳ್ಳಲು ತಿಳಿದಿರಬೇಕು. ಕಮರ್ಶಿಯಲ್ ಬ್ಯಾಂಕ್ ಅಥವಾ ಆರ್ಆರ್ಬಿಯಲ್ಲಿ ಕನಿಷ್ಠ 2 ವರ್ಷಗಳ ಅನುಭವ ಹೊಂದಿರುವುದು ಹೆಚ್ಚುವರಿ ಕೌಶಲ್ಯವಾಗಿ ಪರಿಗಣಿಸಲಾಗುವುದು. ಅಭ್ಯರ್ಥಿಗಳು ಒಂದು ಸರ್ಕಲ್ನಲ್ಲಿ ಮಾತ್ರವೇ ಅರ್ಜಿ ಸಲ್ಲಿಸಬಹುದಾಗಿದೆ. SMGS-IVಗೆ ಬಡ್ತಿ ನೀಡುವವರೆಗೆ ಅಥವಾ 12 ವರ್ಷ ಪೂರ್ಣಗೊಳ್ಳುವವರೆಗೂ ಅಂತರ್ ವಲಯ ವರ್ಗಾವಣೆ ಇರುವುದಿಲ್ಲ.

ಸರ್ಕಾರಿ ನಿಯಮಗಳಿಗೆ ಅನುಸಾರ ಮೀಸಲಾತಿ ಇರುತ್ತದೆ.

ಆಯ್ಕೆ ಪ್ರಕ್ರಿಯೆ

ಆನ್ಲೈನ್ ಪರೀಕ್ಷೆ

ಒಬ್ಜೆಕ್ಟಿವ್ ಪರೀಕ್ಷೆ (120 ಅಂಕಗಳು, 2 ಗಂಟೆಗಳು)

ಇಂಗ್ಲಿಷ್ (30 ಪ್ರಶ್ನೆಗಳು, 30 ಅಂಕಗಳು)

ಬ್ಯಾಂಕಿಂಗ್ ಜ್ಞಾನ (40 ಪ್ರಶ್ನೆಗಳು, 40 ಅಂಕಗಳು)

ಸಾಮಾನ್ಯ ಜ್ಞಾನ/ ಅರ್ಥವ್ಯವಸ್ಥೆ (30 ಪ್ರಶ್ನೆಗಳು, 30 ಅಂಕಗಳು)

ಕಂಪ್ಯೂಟರ್ ಜ್ಞಾನ (20 ಪ್ರಶ್ನೆಗಳು, 20 ಅಂಕಗಳು)

ವಿವರಣಾತ್ಮಕ ಪರೀಕ್ಷೆಗಳು (50 ಪ್ರಶ್ನೆಗಳು, 30 ನಿಮಿಷಗಳು) ಪತ್ರ ಬರೆಯುವುದು ಮತ್ತು ಪ್ರಬಂಧ

ನೆಗೆಟಿವ್ ಮಾರ್ಕಿಂಗ್ ಇರುವುದಿಲ್ಲ.

ಪರೀಕ್ಷೆಯಲ್ಲಿ ಪಾಸಾದವರಿಗೆ ಸಂದರ್ಶನ 50 ಅಂಕಗಳು (ಕನಿಷ್ಠ ಅರ್ಹತೆ)

ಅಂತಿಮ ಮೆರಿಟ್ ಪಟ್ಟಿ- ಸಾಮಾನ್ಯೀಕರಿಸಿದ ಅಂಕಗಳ ಮೇಲೆ ಆಧರಿಸಿದೆ

ಆನ್ಲೈನ್ ಪರೀಕ್ಷೆ (ಶೇ 75) + ಸಂದರ್ಶನ (ಶೇ 25)

ಸ್ಥಳೀಯ ಭಾಷಾ ಪ್ರಾವೀಣ್ಯತೆ ಪರೀಕ್ಷೆ- ಕಡ್ಡಾಯವಾಗಿ 10/12ನೇ ತರಗತಿಯ ಪ್ರಮಾಣಪತ್ರ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News