ಹರ್ಷ್ ಜೈಸ್ವಾಲ್, ಮೋಹನ್ ಪೆಧಪತಿ ಮತ್ತು ರಾಹುಲ್ ಮೈನಿ | Photo Credit : Facebook 

ಸಂಪೂರ್ಣ ಪ್ರಯೋಗದಲ್ಲಿ ದೌರ್ಬಲ್ಯ ಕಂಡುಹಿಡಿದು OpenAI ನ ಖಾಸಗಿ ರೆಪೊಸಿಟರಿ ಪ್ರವೇಶಿಸಲು 72 ಗಂಟೆಗಿಂತ ಕಡಿಮೆ ಸಮಯ ತೆಗೆದುಕೊಂಡಿದ್ದಾರೆ.

ಜುಲೈನಲ್ಲಿ ಮೂವರು ಭಾರತೀಯ ಮೂಲದ ಸೈಬರ್ ಭದ್ರತಾ ಸಂಶೋಧಕರಾದ ಹರ್ಷ್ ಜೈಸ್ವಾಲ್, ಮೋಹನ್ ಪೆಧಪತಿ ಮತ್ತು ರಾಹುಲ್ ಮೈನಿ ಆಥ್ರೋಪಿಕ್ಸ್ ಕಂಪನಿಯ ಕ್ಲೌಡ್ ಅನ್ನು ಬಳಸಿ OpenAI ನ ವ್ಯವಸ್ಥೆಗಳನ್ನು ಹ್ಯಾಕ್ ಮಾಡಿದರು. ಇದೊಂದು ಅಧಿಕೃತ ಭದ್ರತಾ ಪರೀಕ್ಷೆಯಾಗಿತ್ತು. ಈ ಪರೀಕ್ಷೆಯಲ್ಲಿ ಸಂಶೋಧಕರು ಸಾಫ್ಟ್ವೇರ್ ದೋಷವನ್ನು ಬಳಸಿಕೊಳ್ಳಲು ಮಾತ್ರ ಕ್ಲೌಡ್ ಬಳಸಿದರು. ಅಂತಿಮವಾಗಿ OpenAI ನ ಉದ್ಯೋಗಿ ಖಾತೆಗಳಿಗೆ ಪ್ರವೇಶ ಪಡೆದರು ಮತ್ತು ಕಂಪನಿಯ ಖಾಸಗಿ ಗಿಟ್ಹಬ್ ಪರಿಸರಕ್ಕೆ ಮಾರ್ಗವನ್ನು ಪಡೆದರು.

ಸರಳವಾಗಿ ಹೇಳುವುದಾದರೆ ಬಗ್-ಬೌಂಟಿ ಕಾರ್ಯಕ್ರಮದ ಭಾಗವಾಗಿ OpenAI ವ್ಯವಸ್ಥೆಗಳ ಭದ್ರತಾ ನ್ಯೂನತೆ ಹುಡುಕುತ್ತಿದ್ದರು ಮತ್ತು ಕಂಡುಕೊಂಡರು ಮತ್ತು ಕ್ಲೌಡ್ ಅನ್ನು ಬಳಸಿ ಅದನ್ನು ಉಪಯೋಗಿಸಿಕೊಂಡರು.

ಸಂಪೂರ್ಣ ಪ್ರಯೋಗದಲ್ಲಿ ದೌರ್ಬಲ್ಯ ಕಂಡುಹಿಡಿದು OpenAI ನ ಖಾಸಗಿ ರೆಪೊಸಿಟರಿ ಪ್ರವೇಶಿಸಲು 72 ಗಂಟೆಗಿಂತ ಕಡಿಮೆ ಸಮಯ ತೆಗೆದುಕೊಂಡಿದ್ದಾರೆ. ಈ ಸಂಶೋಧಕರು ಪರೀಕ್ಷೆಯ ಸಮಯದಲ್ಲಿ AI ಟೋಕನ್ಗಳಿಗಾಗಿ ಸುಮಾರು 2.5 ಲಕ್ಷ ರೂಗಿಂತ (ಸುಮಾರು 3000 ಡಾಲರ್) ಹೆಚ್ಚು ಖರ್ಚು ಮಾಡಿರುವುದಾಗಿ ವರದಿಯಾಗಿದೆ. OpenAI ನಂತರ ದೌರ್ಬಲ್ಯ ಸರಿಪಡಿಸಿತು ಮತ್ತು ತಂಡಕ್ಕೆ ಸುಮಾರು 5.5 ಲಕ್ಷ ರೂ. (6500 ಡಾಲರ್) ಬಹುಮಾನ ಪಾವತಿಸಿತು.

ಈ ಸಂಶೋಧಕರು ಯಾರು ಮತ್ತು ಭಾರತದ ಜೊತೆಗೆ ಅವರ ಸಂಬಂಧವೇನು?

ಸೈಬರ್ ಸೆಕ್ಯುರಿಟಿ ಸ್ಟಾರ್ಟಪ್ Hacktron AI ನಲ್ಲಿ ಕೆಲಸ ಮಾಡುವ ಮೂವರು ಸಂಶೋಧಕರಾದ ಮೋಹನ್ ಪೆಧಪತಿ, ಹರ್ಷ್ ಜೈಸ್ವಾಲ್ ಮತ್ತು ರಾಹುಲ್ ಮೈನಿ ಸಾಫ್ಟ್ವೇರ್ ದೌರ್ಬಲ್ಯ ಕಂಡುಹಿಡಿಯುವುದು, ವ್ಯವಸ್ಥೆ ಪರೀಕ್ಷಿಸುವುದು ಮತ್ತು ಬಗ್ಬೌಂಟಿ ಕಾರ್ಯಕ್ರಮಗಳಲ್ಲಿ ಬಾಗವಹಿಸುವ ಮೂಲಕ ವರ್ಷಗಳ ಕಾಲ ಕಳೆದಿದ್ದಾರೆ. Hacktron AI ಹೇಳಿರುವ ಪ್ರಕಾರ OpenAI ಸಂಶೋಧನೆಯ ನೇತೃತ್ವವನ್ನು ಹರ್ಷ್ ಜೈಸ್ವಾಲ್ ವಹಿಸಿದ್ದರು. ಮೋಹನ್ ಮತ್ತು ರಾಹುಲ್ ಅವರಿಗೆ ನೆರವಾಗಿದ್ದರು.

ಮೋಹನ್ ಪೆಧಪತಿ ಅವರು Hacktron AI ನ ಸಿಇಒ ಮತ್ತು ಸಹ ಸಂಸ್ಥಾಪಕರು. ಅವರು ವೆಬ್ ಎಕ್ಸ್ಪ್ಲಾಯ್ಟೇಶನ್, ಸೋರ್ಸ್ ಕೋಡ್ ರಿವ್ಯೂ ಮತ್ತು ಮೊಬೈಲ್ ಅಪ್ಲಿಕೇಶನ್ ಭದ್ರತೆಯಲ್ಲಿ ಪರಿಣತಿ ಹೊಂದಿರುವ ಭದ್ರತಾ ಸಂಶೋಧಕರಾಗಿದ್ದಾರೆ. Hacktron AI ಗೆ ಮೊದಲು ಅವರು Electrovolt Infosec ಸ್ಥಾಪಿಸಿದ್ದರು ಮತ್ತು Cure53 ನಲ್ಲಿ ಭದ್ರತಾ ಸಲಹೆಗಾರರಾಗಿ ಕೆಲಸ ಮಾಡಿದ್ದರು. Eigen Vectors ನಲ್ಲಿ ಡೇಟಾ ಸೈನ್ಸ್ ಇಂಟರ್ನ್ ಆಗಿಯೂ ಕೆಲಸ ಮಾಡಿದರು. ಅಲ್ಲಿ ಅವರು ಮಾತು ಗುರುತಿಸುವಿಕೆಗೆ ನ್ಯೂರಲ್ ನೆಟ್ವರ್ಕ್ಗಳನ್ನು ಅನ್ವೇಷಿಸಿದ್ದರು. ಪೆಧಪತಿ RGUKT Nuzvid ನಲ್ಲಿ ಕಂಪ್ಯೂಟರ್ ಸೈನ್ಸ್ ಅಧ್ಯಯನ ಮಾಡಿದ್ದರು. ಅದಕ್ಕೆ ಮೊದಲು 2015 ಮತ್ತು 2021 ರ ನಡುವೆ ಬಿಟೆಕ್ ಪೂರ್ಣಗೊಳಿಸಿದರು. 2013 ರಿಂದ 2015 ರವರೆಗೆ ಭಾರತದ ಆಂಧ್ರಪ್ರದೇಶದ ZPPHS ಸಂಪತ್‌ನಗರ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿದ್ದಾರೆ.

ಹರ್ಷ್ ಜೈಸ್ವಾಲ್ Hacktron AI ನ ಸಹ ಸಂಸ್ಥಾಪಕರು ಮತ್ತು ಸೆಕ್ಯುರಿಟಿ ದೋಷಗಳನ್ನು ಕಂಡುಹಿಡಿಯುವುದರಲ್ಲಿ 10 ವರ್ಷಗಳಿಗೂ ಮೀರಿದ ಅನುಭವ ಹೊಂದಿರುವವರು. Hacktron AI ಗೆ ಮೊದಲು ಅವರು ಪ್ರಾಜೆಕ್ಟ್ ಡಿಸ್ಕವರಿ, ಜೊಮಾಟೊ ಮತ್ತು ಕ್ಯೂರ್ 53 ನಲ್ಲಿ ಸೆಕ್ಯುರಿಟಿ ಎಂಜಿನಿಯರ್ ಮತ್ತು ಸಂಶೋಧಕರಾಗಿ ಕೆಲಸ ಮಾಡಿದರು. ಅದಕ್ಕೆ ಮೊದಲು Hacktron ಕಂಪನಿಯಲ್ಲಿ ಬಗ್-ಬೌಂಟಿ ಸಂಶೋಧಕರಾಗಿಯೂ ಕೆಲಸ ಮಾಡಿದ್ದರು. ಅವರ ಕೆಲಸದಲ್ಲಿ ಆಪಲ್, ಪೇಪಾಲ್ ಮತ್ತು ಗಿಟ್‌ಹಬ್‌ನಂತಹ ಕಂಪನಿಗಳಿಂದ ಉತ್ಪನ್ನಗಳು ಮತ್ತು ಪ್ಲಾಟ್ಫಾರ್ಮ್ ನ್ಯೂನತೆ ಕಂಡು ಹಿಡಿಯುವ ಅನುಭವವಿದೆ. ಅವರು ರಾಹುಲ್ ಮೈನಿ ಜೊತೆಗೂ ಭದ್ರತಾ ಸಂಶೋಧನೆಯಲ್ಲಿ ಕೆಲಸ ಮಾಡಿದ್ದಾರೆ.

ರಾಹುಲ್ ಮೈನಿ Hacktron AI ನಲ್ಲಿ ದೌರ್ಬಲ್ಯ ಕಂಡುಹಿಡಿಯುವ ಸಂಶೋಧಕರು ಮತ್ತು ಬಗ್-ಬೌಂಟಿ ಸಮುದಾಯದಲ್ಲಿ ದೀರ್ಘ ಇತಿಹಾಸ ಹೊಂದಿದ್ದಾರೆ. ಅವರ ಹಿಂದಿನ ಅನುಭವದಲ್ಲಿ ಕೋಬಾಲ್ಟ್, ಸಿನಾಕ್ ರೆಡ್ ಟೀಮ್, ಹ್ಯಾಕರ್‌ಒನ್ ಮತ್ತು ಬಗ್‌ಕ್ರೌಡ್ ಮೊದಲಾದೆಡಡೆ ಕೆಲಸ ಮಾಡಿದ್ದಾರೆ. ಅಲ್ಲಿ ಅವರು ಕೋರ್ ಪೆಂಟೆಸ್ಟರ್ ಅಥವಾ ಬಗ್ ಹಂಟರ್ ಆಗಿ ಕೆಲಸ ಮಾಡಿದ್ದಾರೆ. ಭದ್ರತಾ ಸಮುದಾಯದಿಂದ ಮನ್ನಣೆಯನ್ನೂ ಪಡೆದಿದ್ದಾರೆ. ಅದರಲ್ಲಿ AT&T ಹಾಲ್ ಆಫ್ ಫೇಮ್ ಉಲ್ಲೇಖ, ಬಗ್ ಕ್ರೌಡ್ ಕಮ್ಯುನಿಟಿ ಪ್ರಶಸ್ತಿ ಮತ್ತು TCS HackQuest 3.0 ನಲ್ಲಿ ಮೊದಲ ರನ್ನರ್ ಆಪ್ ಸ್ಥಾನವೂ ಸೇರಿವೆ. ರಾಹುಲ್ 2015 ರಿಂದ 2019ರ ನಡುವೆ ಭಾರತದ ದೆಹಲಿಯ ಭಾರತಿ ವಿದ್ಯಾಪೀಠದಲ್ಲಿ ಕಂಪ್ಯೂಟರ್ ಸೈನ್ಸ್ ಅಧ್ಯಯನ ಮಾಡಿದ್ದಾರೆ.

OpenAI ಹ್ಯಾಕ್ ಮಾಡಿದ್ದು ಹೇಗೆ?

ಮೂವರು ಸಂಶೋಧಕರು ಕಂಪನಿಯ ಸಾರ್ವಜನಿಕ ಸಮುದಾಯ ವೇದಿಕೆಯಲ್ಲಿ ಬಗ್-ಬೌಂಟಿ ಭಾಗವಾಗಿ OpenAI ನ ವ್ಯವಸ್ಥೆಗಳಲ್ಲಿ ಭದ್ರತಾ ದೋಷ ಪರೀಕ್ಷಿಸುತ್ತಿದ್ದಾಗ ನ್ಯೂನತೆ ಕಂಡುಕೊಂಡರು. ಈ ದೋಷವು ಫೋರಂ ಕೆಲವು ಇಮೇಜ್ ಫೈಲ್ಗಳನ್ನು ನಿರ್ವಹಿಸುವ ವಿಧಾನಕ್ಕೆ ಸಂಬಂಧಿಸಿದೆ. ಯಾರಾದರೂ ಫೋರಂ ಸರ್ವರ್ನಲ್ಲಿ ಕೋಡ್ ಚಲಾಯಿಸಲು ಅನುಮತಿಸಬಹುದು.ನಂತರ ಸಂಶೋಧಕರು ಆಂಥ್ರೋಪಿಕ್ ಸಂಸ್ಥೆಯ AI ಚಾಟ್ಬೋಟ್ ಕ್ಲೌಡ್ ಬಳಸಿಕೊಂಡು ದೌರ್ಬಲ್ಯವನ್ನು ಬಳಸಿಕೊಂಡಿದೆ. ಬರೆಯುವುದು, ಡಿಬಗ್ಗಿಂಗ್ ಮತ್ತು ಎಕ್ಸ್ಪ್ಲಾಯ್ಟ್ ಬಳಸಿಕೊಳ್ಳಲು ಕ್ಲೌಡ್ ಸಹಾಯ ಮಾಡಿದೆ.

OpenAI ಉದ್ಯೋಗಿ ಖಾತೆ ಪ್ರವೇಶಿಸಲು ಲಾಗಿನ್ ಟೋಕನ್ ಬಳಸಲು ಅವರಿಗೆ ಅವಕಾಶ ನೀಡುವ ಮತ್ತೊಂದು ನ್ಯೂನತೆಯನ್ನೂ ಸಹ ಸಂಶೋಧಕರು ಕಂಡುಕೊಂಡರು. ಅಂತಿಮವಾಗಿ ಇದು ಉದ್ಯೋಗಿಯ ಕೋಡೆಕ್ಸ್ ಖಾತೆಯ ಮೂಲಕ ಕಂಪನಿಯ ಖಾಸಗಿ ಗಿಟ್ ಹಬ್ ಪರಿಸರಕ್ಕೆ ಮಾರ್ಗ ನೀಡಿದೆ. ಕ್ಲೌಡ್ ಬದಲಿಗೆ ಸಂಶೋಧಕರೇ ವಿಭಿನ್ನ ನ್ಯೂನತೆಗಳನ್ನು ಪತ್ತೆ ಹಚ್ಚಿದ್ದಾರೆ. ಸರಳವಾಗಿ ಹೇಳುವುದಾದರೆ ಸಂಶೋಧಕರು ಭದ್ರತಾ ದೋಷ ಕಂಡುಕೊಂಡ ನಂತರ ವ್ಯವಸ್ಥೆ ಪ್ರವೇಶಿಸುವ ಮಾರ್ಗವಾಗಿ ಪರಿವರ್ತಿಸಲು ಮಾತ್ರ ಕ್ಲೌಡ್ ಅನ್ನು ಬಳಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor