×
Ad

ಹಳೆ ವಾಣಿಜ್ಯ ವಾಹನಗಳನ್ನು ಬದಲಿಸಲು ದಿಲ್ಲಿ 9,585 ಕೋಟಿ ರೂ. ವೆಚ್ಚ ಮಾಡುತ್ತಿರುವುದೇಕೆ?

Update: 2026-07-15 18:56 IST

ಸಾಂದರ್ಭಿಕ ಚಿತ್ರ Photo Credit: AI

ದಿಲ್ಲಿಯ ನಯಾ ಸಫರ್ ಯೋಜನೆಯಲ್ಲಿ ಹಳೆಯ ಟ್ರಕ್ಗಳು ಮತ್ತು ಬಸ್ಗಳನ್ನು ಬದಲಿಸಲಾಗುತ್ತಿದೆ. ಈ ಯೋಜನೆ ಏಕೆ ಮುಖ್ಯವಾಗುತ್ತದೆ?

ದೆಹಲಿಯ ಗಾಳಿಯ ಗುಣಮಟ್ಟವನ್ನು ಸುಧಾರಿಸಲು ಅನೇಕ ಕ್ರಮಗಳನ್ನು ತೆಗೆದುಕೊಂಡಿದ್ದರೂ ಇಂದಿಗೂ ಮಾಲಿನ್ಯದ ತಾಣವಾಗಿಯೇ ಉಳಿದಿದೆ. ಇತ್ತೀಚೆಗಿನ ಕ್ರಮವು ಅತಿ ದೊಡ್ಡ ಮಾಲಿನ್ಯ ಮೂಲಗಳಾದ ಹಳೆಯ ವಾಣಿಜ್ಯ ವಾಹನಗಳನ್ನು ತೆಗೆದು ಹಾಕುವುದಾಗಿದೆ. ಕೇಂದ್ರ ಸರ್ಕಾರ ದಿಲ್ಲಿ-ಎನ್ಸಿಆರ್ನಾದ್ಯಂತ ಹಳೆಯ ಟ್ರಕ್ಗಳು ಮತ್ತು ಬಸ್ಗಳನ್ನು ಶುದ್ಧ ವಾಹನಗಳಿಂದ ಬದಲಿಸುವ ಗುರಿ ಹೊಂದಿರುವ ಎರಡು ವರ್ಷಗಳ ಯೋಜನೆಗೆ 9,585 ರೂ. ಮಂಜೂರು ಮಾಡಿದೆ. ನಯಾ ಸಫರ್ ಯೋಜನಾ ಎನ್ನುವ ಹೊಸ ಯೋಜನೆಯಲ್ಲಿ ಹಳೆಯ ಟ್ರಕ್ಗಳು ಮತ್ತು ಬಸ್ಗಳನ್ನು ಬದಲಿಸಲಾಗುತ್ತಿದೆ. ಈ ಯೋಜನೆಯಡಿ 2.07 ವಾಣಿಜ್ಯ ವಾಹನಗಳು ಅಂದರೆ, 1.91 ಲಕ್ಷ ಟ್ರಕ್ಗಳು ಮತ್ತು 16,329 ಬಸ್ಗಳು ಬರುತ್ತವೆ.

ಈ ಯೋಜನೆಯಲ್ಲಿ ಹಳೆಯ ವಾಣಿಜ್ಯ ವಾಹನಗಳ ಮಾಲಕರಿಗೆ ಹಣಕಾಸಿನ ಪ್ರೋತ್ಸಾಹದ ಪ್ಯಾಕೇಜ್ ಮೂಲಕ BS-VI ಅಥವಾ ಎಲೆಕ್ಟ್ರಿಕಲ್ ವಾಹನಗಳಿಗೆ ಬದಲಿಸಲು ಪ್ರೋತ್ಸಾಹಿಸುತ್ತದೆ. ಮಾಲೀಕರು ಐದು ವರ್ಷಗಳ ಕಾಲ ವಾಹನದ ಸಾಲಗಳಲ್ಲಿ ಶೇ 5ರಷ್ಟು ಬಡ್ಡಿಯ ಸಬ್ಸಿಡಿ ಮೂಲಕ ವಾಹನ ಖರೀದಿಸಬಹುದು. 4,800 ರೂ. ವರೆಗಿನ ಮಾಸಿಕ ಇಂಧನ ವೋಚರ್ಗಳು, ನೋಂದಣಿ ಶುಲ್ಕ ವಿನಾಯಿತಿಗಳು ಮತ್ತು ಮೋಟಾರು ವಾಹನ ತೆರಿಗೆ ರಿಯಾಯಿತಿಗಳನ್ನೂ ಪಡೆಯಬಹುದು. ರಾಜ್ಯ ಸರ್ಕಾರಗಳು ಹೊಸ ವಾಹನಗಳ ಮೇಲೆ ಶೇ 100ರಷ್ಟು ತೆರಿಗೆ ರಿಯಾಯಿತಿಗಳನ್ನೂ ಮತ್ತು ಬಳಸಿದ ವಾಹನಗಳ ಮೇಲೆ ಶೇ 50ರಷ್ಟು ತೆರಿಗೆ ರಿಯಾಯಿತಿಗಳನ್ನು 10 ವರ್ಷಗಳವರೆಗೆ ನೀಡಲಾಗುತ್ತದೆ. ಜೊತೆಗೆ ಹಳೇ ವಾಹನಗಳ ಬಾಕಿಯನ್ನೂ ಮನ್ನಾ ಮಾಡಲಾಗುತ್ತದೆ.

ಈ ಯೋಜನೆಯಲ್ಲಿ ಸ್ಪಷ್ಟ ಬದಲಿ ನಿಯಮಗಳನ್ನು ಸಹ ನಿಗದಿಪಡಿಸಲಾಗಿದೆ. BS-III ಮತ್ತು ಹಳೆಯ ವಾಹನಗಳನ್ನು ಸ್ಕ್ರ್ಯಾಪ್ ಮಾಡಬೇಕಾಗುತ್ತದೆ. ಆದರೆ BS-IV ವಾಹನಗಳನ್ನು ಸ್ಕ್ರ್ಯಾಪ್ ಮಾಡಬಹುದು ಅಥವಾ ದೆಹಲಿ NCR ಮತ್ತು NCAP ಯೇತರ ನಗರಗಳ ಹೊರಗೆ ಮಾರಾಟ ಮಾಡಬಹುದು. ದೆಹಲಿಯಲ್ಲಿ ಯೋಜನೆಯಡಿಯಲ್ಲಿ ಖರೀದಿಸಿದ ಹೊಸ ಬಸ್ಗಳು BS-VI CNG ಅಥವಾ ಎಲೆಕ್ಟ್ರಿಕ್ ಆಗಿರಬೇಕು. ಆದರೆ ಹೊಸ ಲಘು ಸರಕು ವಾಹನಗಳು ಎಲೆಕ್ಟ್ರಿಕ್ ಆಗಿರಬೇಕು.

ಈ ಯೋಜನೆ ಏಕೆ ಮುಖ್ಯ?

ವಾಣಿಜ್ಯ ವಾಹನಗಳು ಹೆಚ್ಚು ಮಾಲಿನ್ಯ ಉಂಟು ಮಾಡುವುದರ ಕಾರಣದಿಂದ ಸರ್ಕಾರ ಅವುಗಳ ಮೇಲೆ ಗಮನ ಕೇಂದ್ರೀಕರಿಸಿದೆ. ದಿಲ್ಲಿ-ಎನ್ಸಿಆರ್ನಾದ್ಯಂತ ವಾಹನ ಸಮೂಹದಲ್ಲಿ ಟ್ರಕ್ಗಳು ಮತ್ತು ಬಸ್ಗಳು ಕೇವಲ ಶೇ 3ರಷ್ಟು ಇವೆ. ಆದರೆ ಸಾಗಾಟ ಕ್ಷೇತ್ರದ PM2.5 ಹೊರಸೂಸುವಿಕೆಯ ಶೇ 36ರಷ್ಟು ಮಾಲಿನ್ಯಕ್ಕೆ ಕಾರಣವಾಗಿವೆ. ಹೀಗಾಗಿ ಹಳೆ ವಾಣಿಜ್ಯ ವಾಹನಗಳನ್ನು ಬದಲಿಸುವುದರಿಂದ ಹೊರಸೂಸುವಿಕೆಯಲ್ಲಿ ಹೆಚ್ಚಿನ ಕಡಿತವನ್ನು ನಿರೀಕ್ಷಿಸಲಾಗಿದೆ.

ದೆಹಲಿಗೆ ಬರುವ ಟ್ರಕ್ಗಳ ಸ್ಥಿತಿಯೇನು?

ವಾಯುಮಾಲಿನ್ಯ ಕ್ರಿಯಾ ಗುಂಪು ಆಗಿರುವ AirPACT, ಐಐಟಿ ದೆಹಲಿ ಮತ್ತು TERI ಜೊತೆಗೂಡಿ ನಡೆಸಿದ ಇತ್ತೀಚೆಗಿನ ಅಧ್ಯಯನ ದಿಲ್ಲಿಗೆ ಹೊರಗಿನಿಂದ ಬರುವ ಟ್ರಕ್ಗಳ ಸ್ಪಷ್ಟ ವಿವರ ನೀಡಿದೆ. ಅಧ್ಯಯನದ ಅಂದಾಜಿನ ಪ್ರಕಾರ ಪ್ರತಿದಿನ 16,900 ಹೆವಿ ಡ್ಯೂಟಿ ಟ್ರಕ್ಗಳು ದಿಲ್ಲಿಯನ್ನು ಪ್ರವೇಶಿಸುತ್ತವೆ. ಈ ಟ್ರಕ್ಗಳಲ್ಲಿ ಸುಮಾರು ಶೇ 92ರಷ್ಟು ದಿಲ್ಲಿಗೇ ಬರುತ್ತವೆ. ಶೇ 8ರಷ್ಟು ಮಾತ್ರ ದಿಲ್ಲಿ ಮೂಲಕ ಹಾದು ಹೋಗುತ್ತವೆ. ಅವುಗಳು ಅದಾಗಲೇ ಮಾಲಿನ್ಯ ನಿಯಮಗಳನ್ನು ಅನುಸರಿಸುತ್ತಿವೆ. ಶೇ 62ರಷ್ಟು BS-VI ವಾಹನಗಳು, ಶೇ 28ರಷ್ಟು BS-IV ಮತ್ತು ಶೇ 10 ರಷ್ಟು BS-III ಅಥವಾ ಹಳೆಯವು.

ಆದರೆ ಸಂಖ್ಯೆ ಶೇ 10ರಷ್ಟಿದ್ದರೂ ಮಾಲಿನ್ಯಕ್ಕೆ ಹೆಚ್ಚು ಕೊಡುಗೆ ನೀಡುತ್ತಿದ್ದು, ನಿತ್ಯವೂ ಅಂದಾಜು 52.18 kg ಯಷ್ಟು PM2.5 ಮಾಲಿನ್ಯಕ್ಕೆ ಕಾರಣವಾಗಿವೆ. ಅವುಗಳಲ್ಲಿ BS-III ಟ್ರಕ್ಗಳು 17.9 kg, BS-IV ಟ್ರಕ್ಗಳು14.47 kg ಹೊರಸೂಸುತ್ತವೆ. ಜೊತೆಗೂಡಿ BS-III ಮತ್ತು BS-IV ಟ್ರಕ್ಗಳು ಸುಮಾರು ಶೇ 62 ರಷ್ಟು PM2.5 ಹೊರಸೂಸುತ್ತವೆ. ಅಂದರೆ ಶೇ 38ರಷ್ಟು ಸಾಗಾಟ ವಾಹನಗಳಾಗಿದ್ದರೂ, ಅತ್ಯಧಿಕ ಹೊರಸೂಸುವಿಕೆಗೆ ಕಾರಣವಾಗಿವೆ.

ಇದಕ್ಕೆ ಹೋಲಿಸಿದರೆ ದಿಲ್ಲಿಗೆ ಪ್ರವೇಶಿಸುವ ಶೇ 62ರಷ್ಟು BS-VI ಟ್ರಕ್ಗಳು 19.81 kg, ಅಥವಾ ಶೇ 38 ರಷ್ಟು PM2.5 ಹೊರಸೂಸುತ್ತವೆ. ದಿಲ್ಲಿಗೆ ಪ್ರವೇಶಿಸುವ ಹೆಚ್ಚಿನ ಹೆವಿ ಡ್ಯೂಟಿ ಟ್ರಕ್ಗಳು ಈಗಾಗಲೇ BS-VI ಮಾನದಂಡವನ್ನು ಅನುಸರಿಸುತ್ತಿದ್ದರೂ ಹಳೆಯ BS-III ಮತ್ತು BS-IV ವಾಹನಗಳ ತುಲನಾತ್ಮಕವಾಗಿ ಕಡಿಮೆ ಮಾಲಿನ್ಯ ಹೊರಸೂಸುತ್ತವೆ.

ಕೃಪೆ: ndtv.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News