ಭಾರತದಲ್ಲಿ Redmi Note 17 Pro Max ಮತ್ತು Redmi Note 17 Pro ಬಿಡುಗಡೆ ಮಾಡಿದ ಶಿಯೋಮಿ
Photo Credit ; mi.com
Redmi Note 17 Pro Max ತನ್ನೊಳಗೆ 10,000 mAh ಸಾಮರ್ಥ್ಯದ ಸಿಲಿಕಾನ್-ಕಾರ್ಬನ್ ಬ್ಯಾಟರಿ ಹೊಂದಿದೆ ಮತ್ತು Note 17 Pro ತನ್ನೊಳಗೆ 9,000 mAh ಬ್ಯಾಟರಿಯನ್ನು ಬಳಸುತ್ತದೆ
ಶಿಯೋಮಿ ಮಂಗಳವಾರ ಭಾರತದಲ್ಲಿ Redmi Note 17 Pro Max ಮತ್ತು Redmi Note 17 Pro ಎಂಬ ಎರಡು Pro ಆವೃತ್ತಿಗಳನ್ನು ಬಿಡುಗಡೆ ಮಾಡುವ ಮೂಲಕ Note 17 ಸರಣಿಯನ್ನು ವಿಸ್ತರಿಸಿದೆ. ಈ ಫೋನ್ಗಳು ಪ್ರೀಮಿಯಂ ವಿಭಾಗಕ್ಕೆ ಸೇರಿವೆ. Redmi Note 17 Pro Max ಮತ್ತು Redmi Note 17 Pro ಮಾಡೆಲ್ಗಳು 120 Hz ರಿಫ್ರೆಶ್ ದರ ಮತ್ತು 3,500 ನಿಟ್ಸ್ ಗರಿಷ್ಠ ಬ್ರೈಟ್ನೆಸ್ ಸಾಮರ್ಥ್ಯದ ಜೊತೆಗೆ 6.83 ಇಂಚಿನ 1.5K ಫ್ಲ್ಯಾಟ್ AMOLED ಡಿಸ್ ಪ್ಲೇ ಹೊಂದಿವೆ. Note 17 Pro Max ಮಾಡೆಲ್ HDR10+ ಮತ್ತು ಡೋಲ್ಬಿ ವಿಷನ್ ತಂತ್ರಜ್ಞಾನದ ಬೆಂಬಲ ಪಡೆದಿದೆ.
ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ರಕ್ಷಣೆಯನ್ನು ಹೊಂದಿದ್ದು, ಡ್ಯುಯಲ್ ಸ್ಟೀರಿಯೋ ಸ್ಪೀಕರ್ಗಳನ್ನು ಒಳಗೊಂಡಿವೆ. IP66, IP68, IP69 ಮತ್ತು IP69K ರೇಟಿಂಗ್ಗಳನ್ನು ಪಡೆದಿವೆ. Redmi Note 17 Pro Max ಮಾಡೆಲ್ನಲ್ಲಿ 10,000 mAh ಸಿಲಿಕಾನ್- ಕಾರ್ಬನ್ ಬ್ಯಾಟರಿ ಇದೆ. ಇದರೊಂದಿಗೆ ಬಾಕ್ಸ್ನಲ್ಲಿ 100W ಚಾರ್ಜರ್ ನೀಡಲಾಗುತ್ತದೆ. ಈ ಚಾರ್ಜರ್ 27W ರಿವರ್ಸ್ ವೈರ್ಡ್ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ. Note 17 Pro ಮಾಡೆಲ್ನಲ್ಲಿ 9,000 mAh ಬ್ಯಾಟರಿ ಇದೆ. ಜೊತೆಗೆ 67W ಚಾರ್ಜರ್ ಮತ್ತು 22.5W ವೈರ್ಡ್ ಚಾರ್ಜಿಂಗ್ ಬೆಂಬಲವಿದೆ.
Redmi Note 17 Pro Max ಮಾಡೆಲ್ Snapdragon 6 Gen 5 ಪ್ರೊಸೆಸರ್, 12 GB ವರೆಗಿನ LPDDR5X RAM ಮತ್ತು 256 GB ಸ್ಟೋರೇಜ್ ಅನ್ನು ಒಳಗೊಂಡಿದೆ. ಇವು Android 16 ಆಧಾರಿತ HyperOS 3 ನಲ್ಲಿ ಕಾರ್ಯನಿರ್ವಹಿಸುತ್ತವೆ ಮತ್ತು 4 ವರ್ಷಗಳ OS ಮತ್ತು 6 ವರ್ಷಗಳ ಭದ್ರತಾ ಅಪ್ಡೇಟ್ಗಳನ್ನು ಪಡೆಯಲಿವೆ.
Redmi Note 17 Pro Max ಮಾದರಿಯು OIS (Optical Image Stabilization) ಸೌಲಭ್ಯವಿರುವ 50 MP ಮುಖ್ಯ ಕ್ಯಾಂರಾ ಮತ್ತು 8 MP ಅಲ್ಟ್ರಾ-ವೈಡ್ ಲೆನ್ಸ್ ಅನ್ನು ಹೊಂದಿದೆ. ಸೆಲ್ಫಿಗಳಿಗಾಗಿ ಇದರಲ್ಲಿ 32 MP ಮುಂಭಾಗದ ಕ್ಯಾಮರಾ ನೀಡಲಾಗಿದೆ. Redmi Note 17 Pro ಮಾದರಿಯು ಸಹ 50 MP ಮುಖ್ಯ ಕ್ಯಾಮರಾ ಮತ್ತು 8 MP ಅಲ್ಟ್ರಾ ವೈಡ್ ಸೆನ್ಸರ್ ಜೊತೆಗೆ 16 MP ಮುಂಭಾಗದ ಕ್ಯಾಮರಾ ಹೊಂದಿದೆ.
Redmi Note 17 Pro Max ನ 8 GB/256 GB ಆವೃತ್ತಿಯ ಆರಂಭಿಕ ಬೆಲೆ ಆಗಿದ್ದರೆ, ₹49,999 ಆಗಿದ್ದರೆ, 12 GB/256 GB ಮಾಡೆಲ್ ವೆಚ್ಚ ₹55,999 ಆಗಿದೆ. Redmi Note 17 Pro ನ 8 GB/128 GB ಮಾಡೆಲ್ ಬೆಲೆ ₹36,999 ರಿಂದ ಮತ್ತು 8 GB/256 G ಮಾಡೆಲ್ ಬೆಲೆ ₹39,999 ರಿಂದ ಪ್ರಾರಂಭವಾಗುತ್ತದೆ.
Redmi Note 17 Pro ಸೆಪ್ಟೆಂಬರ್ 17ರಿಂದ ಮತ್ತು Redmi Note 17 Pro Max ಸೆಪ್ಟೆಂಬರ್ 23ರಿಂದ ಮಾರುಕಟ್ಟೆಗೆ ಬರಲಿವೆ. ಇವು Mi, Amazon ಮತ್ತು Xiaomi ಹಾಗೂ ಇತರ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಲಭ್ಯವಿರುತ್ತವೆ.