ಮಹಿಳಾ ಏಕದಿನ ಕ್ರಿಕೆಟ್: 11 ಓವರ್ ಬೌಲಿಂಗ್ ಮಾಡಿ ಅಚ್ಚರಿಗೊಳಿಸಿದ ನ್ಯೂಝಿಲ್ಯಾಂಡ್ ಬೌಲರ್
ಕೊಲಂಬೊ: ಗಾಲೆಯಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಎರಡನೇ ಮಹಿಳಾ ಏಕದಿನ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ಆಫ್ ಸ್ಪಿನ್ನರ್ ಈಡನ್ ಕಾರ್ಸನ್ ಶುಕ್ರವಾರ ಅಪರೂಪದ ದಾಖಲೆಯನ್ನು ನಿರ್ಮಿಸಿದ್ದಾರೆ.
ಪಂದ್ಯದ ವೇಳೆ ಕಾರ್ಸನ್ 11 ಓವರ್ ಬೌಲಿಂಗ್ ಮಾಡಿ ಎಲ್ಲರ ಅಚ್ಚರಿಗೆ ಕಾರಣರಾದರು. ಕಾರ್ಸನ್ ತನ್ನ 11 ಓವರ್ಗಳಲ್ಲಿ 41 ರನ್ ನೀಡಿ ಎರಡು ಪ್ರಮುಖ ವಿಕೆಟ್ ಗಳನ್ನು ಕಬಳಿಸಿದರು. ಮೈದಾನದ ಅಂಪೈರ್ ಗಳು ಮತ್ತು ಪಂದ್ಯದ ಅಧಿಕಾರಿಗಳು ಈ ದೋಷವನ್ನು ಗಮನಿಸಲಿಲ್ಲ.
45ನೇ ಓವರ್ ನ ಮುಕ್ತಾಯದ ನಂತರ ಕಾರ್ಸನ್ ತನ್ನ 10 ಓವರ್ ಕೋಟಾವನ್ನು ಪೂರ್ಣಗೊಳಿಸಿದ್ದರು. ಆದಾಗ್ಯೂ, ಒಂದು ದೊಡ್ಡ ಪ್ರಮಾದದಿಂದಾಗಿ ಕಾರ್ಸನ್ 47 ನೇ ಓವರ್ ನಲ್ಲಿ ಮತ್ತೆ ಬೌಲಿಂಗ್ ಮಾಡಲು ಆಗಮಿಸಿದರು.
ನ್ಯೂಝಿಲ್ಯಾಂಡ್ 116 ರನ್ ಗೆಲುವಿನೊಂದಿಗೆ ಸರಣಿಯನ್ನು ಸಮಬಲಗೊಳಿಸಿತು. ಸರಣಿ ನಿರ್ಣಾಯಕ ಪಂದ್ಯವು ಜುಲೈ 3ರಂದು ನಡೆಯಲಿದೆ.
ಬ್ಯಾಟಿಂಗ್ ಆಯ್ಕೆ ಮಾಡಿದ ನಂತರ, ನಾಯಕ ಸೋಫಿ ಡಿವೈನ್ ಹಾಗೂ ಅಮೆಲಿಯಾ ಕೆರ್ ಅವರ ಶತಕಗಳ ನೆರವಿನಿಂದ ನ್ಯೂಝಿಲ್ಯಾಂಡ್ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 329 ಬೃಹತ್ ಮೊತ್ತವನ್ನು ದಾಖಲಿಸಿತು.
ಕೆರ್ ಮತ್ತು ಡಿವೈನ್ ಮೂರನೇ ವಿಕೆಟ್ಗೆ 229 ರನ್ ಸೇರಿಸಿದರು, ನ್ಯೂಝಿಲ್ಯಾಂಡ್ ಪರ ಮೂರನೇ ಅತಿ ಹೆಚ್ಚು ಹಾಗೂ ಶ್ರೀಲಂಕಾದಲ್ಲಿ ಮಹಿಳಾ ಏಕದಿನ ಕ್ರಿಕೆಟಿ ನ ಲ್ಲಿ ಅತ್ಯಂತ ದೊಡ್ಡ ಮೊತ್ತ ಗಳಿಸಿದೆದೆ.
ಕೆರ್ 106 ಎಸೆತಗಳಲ್ಲಿ 108 ರನ್ ಗಳಿಸಿದರೆ, ಡಿವೈನ್ ಕೇವಲ 121 ಎಸೆತಗಳಲ್ಲಿ 17 ಬೌಂಡರಿಗಳ ನೆರವಿನಿಂದ 137 ರನ್ ಗಳಿಸಿದರು.
ಶ್ರೀಲಂಕಾ ಪರ ಒಶಾದಿ ರಣಸಿಂಘೆ ಮೂರು ವಿಕೆಟುಗಳನ್ನು ಕಬಳಿಸಿದರೆ ಉದೇಶಿಕಾ ಪ್ರಬೋಧನಿ ಕೂಡ ಎರಡು ವಿಕೆಟ್ಗಳನ್ನು ಕಬಳಿಸಿದರು.
329 ರನ್ನಿಗೆ ಉತ್ತರವಾಗಿ ಕವಿಶಾ ದಿಲ್ಹಾರಿ 84 ರನ್ ಗಳಿಸಿದರು, ಆದರೆ ಇತರ ಬ್ಯಾಟರ್ಗಳಿಂದ ಯಾವುದೇ ಸಹಾಯ ಸಿಗಲಿಲ್ಲ.
ಶ್ರೀಲಂಕಾ ಇನ್ನೂ ಎಂಟು ಎಸೆತಗಳು ಬಾಕಿ ಇರುವಂತೆಯೇ 213 ರನ್ಗಳಿಗೆ ಆಲೌಟ್ ಆಗುತ್ತಿದ್ದಂತೆ ಲಿಯಾ ತಹುಹು ನಾಲ್ಕು ವಿಕೆಟ್ ಪಡೆದರು.