×
Ad

ಗೋವಾ ನೈಟ್ ಕ್ಲಬ್‌ನಲ್ಲಿ ಅಗ್ನಿ ಅವಘಡ ಪ್ರಕರಣ: ಕ್ಲಬ್ ಸಹ ಮಾಲಕನ ಬಂಧನ

Update: 2025-12-10 10:20 IST

Credit: PTI,Goa Police

 

ಪಣಜಿ: 25 ಜನರ ಪ್ರಾಣಹಾನಿಗೆ ಕಾರಣವಾದ ಅಗ್ನಿ ಅವಘಡದ ಬಳಿಕ ಗೋವಾದ 'ಬರ್ಚ್ ಬೈ ರೋಮಿಯೊ ಲೇನ್ʼ ನೈಟ್ ಕ್ಲಬ್ ನ ನಾಲ್ವರು ಮಾಲಕರಲ್ಲಿ ಒಬ್ಬನನ್ನು ಗೋವಾ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಅಜಯ್ ಗುಪ್ತಾ ಅವರನ್ನು ದಿಲ್ಲಿಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗೋವಾದ 'ಬರ್ಚ್ ಬೈ ರೋಮಿಯೊ ಲೇನ್ ನೈಟ್ ಕ್ಲಬ್'ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ 25 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದರು.

ಅಜಯ್ ಗುಪ್ತಾ ಮತ್ತು ಮತ್ತೊಬ್ಬ ಮಾಲಕ ಸುರಿಂದರ್ ಕುಮಾರ್ ಖೋಸ್ಲಾ ವಿರುದ್ಧ ಪೊಲೀಸರು ಈ ಹಿಂದೆ ಲುಕ್ ಔಟ್ ಸರ್ಕ್ಯುಲರ್ (LOC) ಹೊರಡಿಸಿದ್ದರು.

“ನಾವು ನೈಟ್‌ ಕ್ಲಬ್‌ ಮಾಲಕರಲ್ಲಿ ಒಬ್ಬರಾದ ಅಜಯ್ ಗುಪ್ತಾ ಅವರನ್ನು ಬಂಧಿಸಿದ್ದೇವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ ಆರನೇ ವ್ಯಕ್ತಿ ಇವರಾಗಿದ್ದಾರೆ” ಎಂದು ಗೋವಾ ಪೊಲೀಸರು ತಿಳಿಸಿದ್ದಾರೆ.

ಈ ಮೊದಲು ನೈಟ್‌ ಕ್ಲಬ್‌ ಪ್ರಧಾನ ವ್ಯವಸ್ಥಾಪಕ ರಾಜೀವ್ ಮೋದಕ್, ವ್ಯವಸ್ಥಾಪಕ ವಿವೇಕ್ ಸಿಂಗ್, ಬಾರ್ ಮ್ಯಾನೇಜರ್ ರಾಜೀವ್ ಸಿಂಘಾನಿಯಾ, ಗೇಟ್ ಮ್ಯಾನೇಜರ್ ರಿಯಾನ್ಶು ಠಾಕೂರ್ ಮತ್ತು ಕ್ಲಬ್ ಉದ್ಯೋಗಿ ಭರತ್ ಕೊಹ್ಲಿ ಎಂಬವರನ್ನು ಬಂಧಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News