×
Ad

ಮತಗಳ್ಳತನಕ್ಕಿಂತ ದೊಡ್ಡ ದೇಶ ವಿರೋಧಿ ಕೃತ್ಯ ಬೇರೆ ಇಲ್ಲ: ರಾಹುಲ್ ಗಾಂಧಿ

Update: 2025-12-09 23:56 IST

credit: PTI

ಹೊಸದಿಲ್ಲಿ, ಡಿ. 9: ಮತಗಳ್ಳತನಕ್ಕಿಂತ ದೊಡ್ಡ ದೇಶ ವಿರೋಧಿ ಕೃತ್ಯ ಬೇರೆ ಇಲ್ಲ; ನೀವು ಮತವನ್ನು ನಾಶಮಾಡಿದರೆ, ಭಾರತದ ಕಲ್ಪನೆಯನ್ನು ನಾಶ ಮಾಡಿದಂತೆ ಎಂದು ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಮಂಗಳವಾರ ನಡೆದ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಸದನದಲ್ಲಿ ಚುನಾವಣಾ ಸುಧಾರಣೆ ಕುರಿತ ಚರ್ಚೆಯ ಸಂದರ್ಭ ಅವರು ಈ ಹೇಳಿಕೆ ನೀಡಿದರು.

ನಮ್ಮ ದೇಶದಲ್ಲಿ 1.5 ಶತಕೋಟಿ ಜನರಿದ್ದಾರೆ. ಮತದಾನವು ನಮ್ಮನ್ನು ಒಗ್ಗೂಡಿಸುತ್ತದೆ ಅವರು ಹೇಳಿದರು.

‘‘ಭಾರತದಲ್ಲಿರುವ ಎಲ್ಲರೂ ಸಮಾನರು ಎಂಬ ಕಲ್ಪನೆ ನಮ್ಮ RSS ಗಳೆಯರನ್ನು ಕಂಗೆಡಿಸಿದೆ. RSS ಗೆ ಮೂಲಭೂತವಾಗಿ ಸಮಾನತೆಯಲ್ಲಿ ನಂಬಿಕೆ ಇಲ್ಲ. ಅದು ಶ್ರೇಣೀಕರಣವನ್ನು ಬಯಸುತ್ತದೆ. ಮಹಾತ್ಮಾ ಗಾಂಧಿ ಅವರ ಹತ್ಯೆಯ ನಂತರ ದೇಶದ ಪ್ರಮುಖ ಸಂಸ್ಥೆಗಳ ಮೇಲೆ ಹಿಡಿತ ಸಾಧಿಸುವ ಗುರಿಯನ್ನು RSS ಹೊಂದಿತ್ತು’’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News