2 ವರ್ಷಗಳಲ್ಲಿ ಕ್ಷೇತ್ರಕ್ಕೆ ಸಮರ್ಪಕ ಅನುದಾನ ಬಂದಿದೆ : ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು
ಯಾದಗಿರಿ : ಕ್ಷೇತ್ರದಲ್ಲಿ ಕೆಕೆಆರ್‌ಡಿಬಿ ಸೇರಿದಂತೆ ವಿವಿಧ ಮೂಲಗಳಿಂದ ಸಮರ್ಪಕ ಅನುದಾನ ಬಂದಿದ್ದು, ಎರಡು ವರ್ಷಗಳಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಎರಡು ವರ್ಷಗಳ ಅಭಿವೃದ್ಧಿ ಕೆಲಸ ತಮಗೆ ತೃಪ್ತಿ ತಂದಿವೆ ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಹೇಳಿದರು.
ತಮ್ಮ ಜನಸಂಪರ್ಕ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು ವರ್ಷಗಳಲ್ಲಿ ಒಟ್ಟು 25,247 ಲಕ್ಷ ರೂ. ಅನುದಾನ ಬಂದಿದ್ದು, ಇದರಲ್ಲಿ 804 ಕಾಮಗಾರಿಗಳು ಕೈಗೆತ್ತಿಕೊಳ್ಳಲಾಗಿದೆ. ಇವುಗಳ ಪೈಕಿ 331 ಕಾಮಗಾರಿಗಳು ಪೂರ್ಣಗೊಂಡಿವೆ. ಇದಕ್ಕಾಗಿ 5,468.24 ಲಕ್ಷ ರೂ. ವ್ಯಯಿಸಲಾಗಿದೆ. ಇನ್ನು 473 ಕಾಮಗಾರಿಗಳು ಪ್ರಗತಿಯಲ್ಲಿದ್ದು, ಇದಕ್ಕಾಗಿ 17,779.08 ಲಕ್ಷ ರೂ.ಗಳು ಅನುದಾನ ಲಭ್ಯವಿದೆ ಎಂದು ಹೇಳಿದರು.
ಕೆಆರ್‌ಐಡಿಎಲ್ ಅಡಿ 139 ಕಾಮಗಾರಿಗಳಿಗೆ ಅನುಮೋದನೆಗೊಂಡು ಕೆಲಸ ನಡೆಯುತ್ತಿದೆ. ಇದರಲ್ಲಿ ಈಗಾಗಲೇ 36 ಕಾಮಗಾರಿ ಪೂರ್ಣಗೊಂಡಿವೆ. 2,922ಲಕ್ಷರೂ. ವ್ಯಯಿಸಲಾಗಿದೆ. ಇನ್ನು 103 ಕಾಮಗಾರಿಗಳು ನಡೆಯುತ್ತಿವೆ 2,350 ಲಕ್ಷ ರೂ. ಅನುದಾನ ಲಭ್ಯವಿದೆ. ಪಿಆರ್‌ಇಡಿ ವಿಭಾಗದಲ್ಲಿಯೂ 66ಕಾಮಗಾರಿಗಳು 179.99 ಲಕ್ಷ ರೂ. ವ್ಯಯಿಸಿ ಪೂರ್ಣಗೊಳಿಸಲಾಗಿದೆ. ಇನ್ನು ಇಷ್ಟೇ ಪ್ರಮಾಣದ ಕಾಮಗಾರಿಗಳು ಪ್ರಗತಿಯಲ್ಲಿವೆ. ಕೆಕೆಆರ್‌ಡಿಬಿಯಿಂದ ಒಟ್ಟು 429 ಕಾಮಗಾರಿಗಳು ಕೈಗೆತ್ತಿಕೊಳ್ಳಲಾಗಿದೆ ಇವುಗಳ ಪೈಕಿ 250ಕಾಮಗಾರಿಗಳಿಗೆ 7,217.64 ಲಕ್ಷ ರೂ. ವ್ಯಯಿಸಿ ಪೂರ್ಣಗೊಳಿಸಲಾಗಿದೆ. ಇನ್ನು 179 ಕಾಮಗಾರಿಗಳಿಗೆ 3,754.31 ಲಕ್ಷ ರೂ. ಅನುದಾನ ಇದ್ದು ಕಾಮಗಾರಿ ಪ್ರಗತಿಯಲ್ಲಿವೆ.
ಪ್ರಸಕ್ತ ಸಾಲಿನಲ್ಲಿ ಪಿಎಂ ಗ್ರಾಮೀಣ ರಸ್ತೆ ಯೋಜನೆಯಡಿ 17 ಕಾಮಗಾರಿಗಳು ಕೈಗೆತ್ತಿಕೊಳ್ಳಾಗಿದೆ. ಇವುಗಳ ಪೈಕಿ 40 ಲಕ್ಷ ವೆಚ್ಚದಲ್ಲಿ 1ಕಾಮಗಾರಿ ಪೂರ್ಣಗೊಂಡಿದೆ. ಇನ್ನು 16 ಕಾಮಗಾರಿಗಳು ನಡೆಯುತ್ತಿದ್ದು ಇದಕ್ಕಾಗಿ 5,968 ಲಕ್ಷ ರೂ. ಅನುದಾನ ಲಭ್ಯವಿದೆ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದರು.
ಲೋಕೋಪಯೋಗಿ ಇಲಾಖೆಯಲ್ಲಿ1,750 ಲಕ್ಷ ರೂ. ಮಂಜೂರಾಗಿದ್ದು, ಇವುಗಳ ಪೈಕಿ 1 ಕಾಮಗಾರಿ 300 ಲಕ್ಷ ರೂ. ವೆಚ್ಚದಲ್ಲಿ ಪೂರ್ಣಗೊಂಡಿದ್ದು ಬಾಕಿ 1,450 ಲಕ್ಷ ರೂ. ವೆಚ್ಚದ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದರು.
ಪ್ರಸಕ್ತ ಸಾಲಿನಲ್ಲಿ ಪಿಆರ್‌ಇಡಿಯಲ್ಲಿ44 ಕಾಮಗಾರಿಗಳು 133 ಲಕ್ಷ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಎಲ್ಲ ಕಾಮಗಾರಿಗಳು ಪ್ರಗತಿಯಲ್ಲಿವೆ. ಒಟ್ಟಾರೆ ಅನುದಾನದ ಕೊರತೆ ಇಲ್ಲ ಕೆಕೆಆರ್‌ಡಿಬಿಯಿಂದ ಸಮರ್ಪಕವಾಗಿ ಅನುದಾನ ಲಭ್ಯವಿದ್ದು, ಒಟ್ಟಾರೆ ಎರಡು ವರ್ಷಗಳ ಕೆಲಸ ತೃಪ್ತಿತಂದಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ನಗರಾಭಿವೃದ್ದಿ ಪ್ರಾದಿಕಾರದ ಆಧ್ಯಕ್ಷ ವಿನಾಯಕ ಮಾಲಿ ಪಾಟೀಲ್, ಜಿಲ್ಲಾಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಸ್ಸುಗೌಡ ಬಿಳ್ಹಾರ,ಪ್ರಚಾರ ಸಮಿತಿ ಅಧ್ಯಕ್ಷ ಮರೆಪ್ಪ ಬಿಳ್ಹಾರ, ವಕ್ತಾರ ಸಾಮಸನ್ ಮಾಳಿಕೇರಿ,ಸಾಬಣ್ಣ ಕೆಂಗುರಿ, ಸುರೇಶ ಮಡ್ಡಿ, ಸೇರಿದಂತೆ ಅನೇಕರು ಇದ್ದರು.