ದೇವದುರ್ಗ | ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪ : ನಾಲ್ವರು ಆರೋಪಿಗಳ ಬಂಧನ
Update: 2025-09-25 16:32 IST
ದೇವದುರ್ಗ : ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಘಟನೆ ನಡೆದಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಪುಟ್ಟಮಾದಯ್ಯ ಅವರ ನಿರ್ದೇಶನದ ಮೇರೆಗೆ ದೇವದುರ್ಗ ಪೊಲೀಸ್ ಠಾಣೆಯ ಪಿ.ಐ ಎಸ್. ಮಂಜುನಾಥ ನೇತೃತ್ವದಲ್ಲಿ ಸೆ.24 ರಂದು ರಾತ್ರಿ 7.20 ಗಂಟೆಗೆ ಕೊಪ್ಪರ ರಸ್ತೆಯಲ್ಲಿರುವ ಮನೆಯಲ್ಲಿ ದಾಳಿ ನಡೆಸಲಾಯಿತು.
ಈ ಸಂದರ್ಭದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಸುಮಂಗಲಾ (55), ರಾಜವರ್ಧನ (21), ದ್ಯಾವಪ್ಪ (40) ಮತ್ತು ರವಿ (30) ಎಂಬ ನಾಲ್ವರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದಾರೆ.
ದಾಳಿ ವೇಳೆ ಪೊಲೀಸರು ನಾಲ್ಕು ಆಂಡ್ರಾಯ್ಡ್ ಮೊಬೈಲ್‌ಗಳು ಹಾಗೂ 6,460 ರೂ. ನಗದು ಹಣವನ್ನು ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣವನ್ನು ಅಪರಾಧ ಸಂಖ್ಯೆ 247/2025 ಅಡಿಯಲ್ಲಿ ದಾಖಲಿಸಿ ತನಿಖೆಯನ್ನು ಮುಂದುವರಿಸಲಾಗಿದೆ ಎಂದು ದೇವದುರ್ಗ ಪೊಲೀಸರು ತಿಳಿಸಿದ್ದಾರೆ.