ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ‘ದುಡ್ಡಿನ ರೇಟ್’ ಬೋರ್ಡ್ : ಶಾಸಕ ಕಂದಕೂರ ಆರೋಪ
Update: 2025-12-18 23:02 IST
ಯಾದಗಿರಿ, ಡಿ.18: ನನ್ನ ಗುರುಮಠಕಲ್ ಮತಕ್ಷೇತ್ರದಲ್ಲಿ ನಡೆಯುತ್ತಿರುವ ಅವ್ಯವಹಾರಗಳಿಗೆ ನಾನು ಹೊಣೆಗಾರನಲ್ಲ. ಅದೇನೇ ಇದ್ದರೂ ಗುರುಮಠಕಲ್ ಪೊಲೀಸ್ ಠಾಣೆಯ ಸರ್ಕಲ್ ಇನ್‌ಸ್ಪೆಕ್ಟರ್ ಮತ್ತು ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಪೋಲಿಸ್ ಅಧಿಕಾರಿಗಳೇ ನೇರ ಹೊಣೆ ಎಂದು ಶಾಸಕ ಶರಣಗೌಡ ಕಂದಕೂರ ಆರೋಪಿಸಿದ್ದಾರೆ.
ಬುಧವಾರ ಸದನದಲ್ಲಿ ಮಾತನಾಡಿದ ಅವರು, ಗೃಹ ಸಚಿವರಿಗೆ ಮತ್ತು ನನ್ನ ಮತಕ್ಷೇತ್ರದ ಜನತೆಗೆ ಈ ಸ್ಪಷ್ಟಣೆೆ ನೀಡುವುದಾದರೆ, ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ದುಡ್ಡಿನ ರೇಟ್ ಬೋರ್ಡ್ ಇಟ್ಟುಕೊಂಡು ವ್ಯವಹಾರ ಮಾಡುತ್ತಿದ್ದಾರೆ. ಈ ಬಗ್ಗೆ ಯಾದಗಿರಿ ಎಸ್ಪಿ ಅವರಿಗೆ ಹೇಳಿದರೂ ಅವರು ಅಸಹಾಯಕರಾಗಿದ್ದಾರೆ ಎಂದು ಹೇಳಿದರು.
ಆರಂಭದ ಆರು ತಿಂಗಳು ಎಲ್ಲವೂ ಸರಿಯಾಗಿತ್ತು. ಕಟ್ಟುನಿಟ್ಟಾಗಿತ್ತು. ಎಲ್ಲಿ ವರ್ಗವಾಗುತ್ತದೆ ಎಂಬ ಕಾರಣಕ್ಕೆ ಎಸ್ಪಿಯವರಿಂದಲೂ ಏನು ಮಾಡಲು ಆಗುತ್ತಿಲ್ಲ. ಅದಕ್ಕೆ ನೇರವಾಗಿ ಈ ಸದನ ಮೂಲಕ ಸರಕಾರ, ಗೃಹ ಸಚಿವರ ಗಮನಕ್ಕೆ ತರುತ್ತಿದ್ದೆನೆಂದು ಕಂದಕೂರ ಹೇಳಿದರು.