ಶಹಾಪುರ | ಪ್ರಜಾಸೌಧ ನಿರ್ಮಾಣ ವಿರೋಧಿಸಿ ಮುಂದುವರೆದ ಧರಣಿ
ಶಹಾಪುರ: ಶೈಕ್ಷಣಿಕ ಉದ್ದೇಶಕ್ಕಾಗಿ ಮೀಸಲಿಟ್ಟ ಜಾಗದಲ್ಲಿ ಪ್ರಜಾಸೌಧ ನಿರ್ಮಾಣ ಮಾಡುವುದು ತಕ್ಷಣ ನಿಲ್ಲಿಸಬೇಕು ಎಂದು ಆಗ್ರಹಿಸಿ ಮಂಗಳವಾರದಿಂದ ಎಬಿವಿಪಿ, ಸಾಮೂಹಿಕ ಸಂಘಟನೆಗಳ ಒಕ್ಕೂಟ, ರಾಜ್ಯ ರೈತ ಸಂಘ ಹಸಿರು ಸೇನೆ ಮುಖಂಡರು ನಗರದ ಪ್ರಥಮ ದರ್ಜೆ ಕಾಲೇಜಿನ ಎದುರುಡೆ ಅನಿರ್ದಿಷ್ಟಾವಧಿ ಧರಣಿ ಮುಂದುವರೆಸಿದ್ದಾರೆ.
ಇಲ್ಲಿನ ಕಾಲೇಜಿಗೆ ವಿದ್ಯಾಭ್ಯಾಸ ಮಾಡಲು ವಿವಿಧ ತಾಲ್ಲೂಕಿನಿಂದ ವಿದ್ಯಾರ್ಥಿಗಳು ಆಗಮಿಸುತ್ತಾರೆ. ಈಗಾಗಲೇ ಕಾಲೇಜು ಜಾಗವನ್ನು ನಗರಸಭೆ 1 ಎಕರೆ ಷರತ್ತಿನ ಮೇರೆಗೆ ತೆಗೆದುಕೊಂಡು ಟೌನ ಹಾಲ್ ನಿರ್ಮಿಸಿದ್ದಾರೆ, ಮುಂದಿನ ಶೈಕ್ಷಣಿಕ ಅಭ್ಯುದ್ಯಯಕ್ಕೆ ಶಿಕ್ಷಣದ ಜಮೀನು ಅಗತ್ಯವಿದೆ, ಕೂಡಲೇ ಪ್ರಜಾಸೌಧ ಹಳೆ ತಹಶೀಲ್ದಾರ್ ಕಚೇರಿ ಆವರಣದಲ್ಲಿ ನಿರ್ಮಾಣ ಮಾಡಬೇಕು' ಎಂದು ಧರಣಿ ನಿರತರು ಆಗ್ರಹಿಸಿದರು.
ರೈತ ಮುಖಂಡ ಮಲ್ಲಣಗೌಡ ಪರಿವಾಣ, ಮಹೇಶಗೌಡ ಸುಬೇದಾರ, ಶಾಂತಪ್ಪ ಸಾಲಿಮನಿ, ಮರೆಪ್ಪ ಜಾಲಿಬೆಂಚಿ, ಅನೀಲ ಸಾಕರೆ, ಮಹಾಂತಗೌಡ ಪಾಟೀಲ, ಆಂಜನೆಯ್ಯ ಗಾಂಜಿ, ಶಿವಲಿಂಗ ಮದ್ರಿಕಿ, ಸಂತೋಷ ಸಾಹುಕಾರ, ಶಿವುಕುಮಾರ ಮಲ್ಲೇದ, ಶಂಕರ ಪಡಶೆಟ್ಟಿ, ರಮೇಶ ಗಾಂಜಿ, ಮಹಮ್ಮದ ಇಸ್ಮಾಯಿಲ್ ಧರಣಿಯಲ್ಲಿ ಭಾಗವಹಿಸಿದ್ದರು.