ಪ್ರಾಮಾಣಿಕ ಕಾರ್ಯಕರ್ತರೇ ಪಕ್ಷದ ಜೀವಾಳ: ಶರಣಪ್ಪ ಡಿ ಮಾನೇಗಾರ ಯರಗೋಳ
ಸೈದಾಪೂರ: ಪಕ್ಷಕ್ಕಾಗಿ ದುಡಿಯುತ್ತಿರುವ ಪ್ರಾಮಾಣಿಕ ಕಾರ್ಯಕರ್ತರೇ ಪಕ್ಷದ ಜೀವಾಳವಾಗಿದ್ದು, ಅವರ ಸಮಸ್ಯೆಗಳಿಗೆ ಸ್ಪಂದಿಸಿ ಪ್ರತಿಯೊಬ್ಬರ ಹಿತ ಕಾಯುವುದು ನಮ್ಮ ಕರ್ತವ್ಯ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ಕೆಪಿಸಿಸಿ ಸದಸ್ಯ ಹಾಗೂ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಶರಣಪ್ಪ ಡಿ ಮಾನೇಗಾರ ಅವರು ಅಭಿಪ್ರಾಯ ಪಟ್ಟರು.
ಗುರುಮಠಕಲ್ ಮತಕ್ಷೇತ್ರದ ಸೈದಾಪೂರ ಬ್ಲಾಕ್ ವ್ಯಾಪ್ತಿಯಲ್ಲಿ ಬರುವ ವಿವಿಧ ಹಳ್ಳಿಗಳ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಮನೆಗಳಿಗೆ ಭೇಟಿ ನೀಡಿ ಮಾತನಾಡಿದ ಶರಣಪ್ಪ ಡಿ ಮಾನೇಗಾರ, ನಿಷ್ಠಾವಂತ ಕಾರ್ಯಕರ್ತರ ದುಃಖದಲ್ಲಿ ಭಾಗಿಯಾಗಿ ಅವರಿಗೆ ಮಾನಸಿಕ ಬೆಂಬಲ ನೀಡಿ ಧೈರ್ಯ ತುಂಬುವುದು ನಮ್ಮ ಆದ್ಯ ಕರ್ತವ್ಯ ಆಗಿದೆ ಎಂದರು.
ನೀಲಹಳ್ಳಿ ಗ್ರಾಮದ ಸಿದ್ರಾಮಪ್ಪ ಬಾಗ್ಲಿ, ಮಲ್ಲೇಶ ಪಾಪಣ್ಣೋರ್ , ಬೆಳಗುಂದಿ ಗ್ರಾಮದ ಮಾಜಿ ತಾಲೂಕು ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷ ಹಂಪಣ್ಣಗೌಡ ಪೊಲೀಸ್ ಪಾಟೀಲ್, ತೋರಣತಿಪ್ಪ ಗ್ರಾಮದ ಶ್ರೀನಿವಾಸ್ ಗೂಡೆಬಳ್ಳೂರು, ಬದ್ದೆಪಲ್ಲಿ ಗ್ರಾಮದ ಸೌರಪ್ಪ , ಅಜಲಾಪುರ ಗ್ರಾಮದ ಹುಸೇನಪ್ಪ ಕಾರ್ಯಕರ್ತರ ಮನೆಗಳಿಗೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.
ನೀಲಹಳ್ಳಿ ಗ್ರಾಮದ ಮಲ್ಲಯ್ಯನ ದೇವಸ್ಥಾನ, ನರಸಪ್ಪನ ಗುಡಿ, ದೊಡ್ಡಸಂಭ್ರ ಗ್ರಾಮದ ರೇಣುಕಾ ಯಲ್ಲಮ್ಮ ದೇವಸ್ಥಾನ, ಅಜಲಾಪೂರ ಗ್ರಾಮದ ಭೀಮರಾಯ ದೇವಸ್ಥಾನ, ಬದ್ದೆಪಲ್ಲಿ ಗ್ರಾಮದ ಮಹಿಬೂಬ್ ಸುಭಾನಿ ದರ್ಗಾಕ್ಕೆ ಭೇಟಿ ನೀಡಿ ಅವರು ದರ್ಶನ ಪಡೆದರು.
ಈ ಸಂದರ್ಭದಲ್ಲಿ ಯಾದಗಿರಿ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಚಮರೆಡ್ಡಿ ಬೆನಕನಹಳ್ಳಿ, ಮಾಜಿ ಪಿಎಲ್‌ಡಿ ಬ್ಯಾಂಕ್ ಅದ್ಯಕ್ಷ ಸುದರ್ಶನ ಪಾಟೀಲ್ ಜೈಗ್ರಾಮ, ಹಣಮಂತ ದೊಡ್ಡಮನಿ, ಜಗದೀಶ್ ಸಜ್ಜನ್, ದೇವಪ್ಪ ಗೌಡ ರಾಚನಳ್ಳಿ, ಬನ್ನಪ್ಪ ಹುಲಿಬೆಟ್ಟ, ಸಾಹೇಬ್ ಹುಸೇನಿ ನೀಲಹಳ್ಳಿ, ಡಾ. ಮೈಮುದ್ ಬಡಿಗೇರ್ ಬದ್ದೇಪಲ್ಲಿ, ರಘುಪತಿ ಗೌಡಗೇರಿ, ಮಲ್ಲು ಮಾಳಿಕೇರಿ, ಮಲ್ಲಯ್ಯ ಮೈಲಾಪುರ,ಬಸಲಿಂಗಪ್ಪ ನಾಯಕ ನೀಲಹಳ್ಳಿ, ಬಸವಂತ ಬೆಳಗುಂದಿ, ಶಿವಶಂಕರ ಬಾಗ್ಲಿ ನೀಲಹಳ್ಳಿ , ಸೈದಾಪುರ ಬ್ಲಾಕ್ ಯುವ ಕಾಂಗ್ರೆಸ್ ಅದ್ಯಕ್ಷ ಅಂಜನೇಯ ಕಟ್ಟಿಮನಿ, ಬ್ಲಾಕ್ ಪ್ರಚಾರ ಸಮಿತಿ ಅಧ್ಯಕ್ಷ ವಿಜಯ ಕಂದಳ್ಳಿ, ವೀರೇಶ್ ಸಜ್ಜನ ಕಡೇಚೂರ, ಮಣಿ ಕ್ಯಾತನಾಳ, ಸಚಿನ್ ಸೈದಾಪುರ, ವೆಂಕಟೇಶ್ ನಾಯಕ್ ಕೂಡ್ಲೂರ, ಪುಂಡಲಿಕ ಗೊಂದೆಡಗಿ, ತಿಮ್ಮಣ್ಣರೆಡ್ಡಿ ಬೆಳಗುಂದಿ, ಭೀಮರಾಯ ಉಜ್ಜೆಲಿ, ಮಂಜುನಾಥ ಮೇತ್ರಿ ಮಲ್ಹಾರ, ಸಾಬು ಪೂಜಾರಿ ರಾಂಪುರ, ಸಿದ್ದು ನಾಯಕ, ಸತೀಶ್ ಕಣೇಕಲ್ ಇನ್ನೂ ಮುಂತಾದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಶರಣಪ್ಪ ಮಾನೇಗಾರ ಅಭಿಮಾನಿಗಳು ಉಪಸ್ಥಿತರಿದ್ದರು.