ʼಕಸ ಕಂಡರೇ ಫೊಟೋ ಕಳ್ಸಿʼ ಯಾದಗಿರಿ ನಗರಸಭೆಯಿಂದ ವಿನೂತನ ಯೋಜನೆ : ಅನಪೂರ
ಯಾದಗಿರಿ: ರಾಜ್ಯದ ಕೆಲವೇ ಜಿಲ್ಲಾ ಕೇಂದ್ರಗಳಲ್ಲಿ ಜಾರಿge ತರಲಾಗಿದೆ ಎಂದು ಹೇಳಲಾದ ಪ್ರಯೋಗವೊಂದು ಇಲ್ಲಿನ ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ನೇತೃತ್ವದ ತಂಡ ಸೋಮವಾರ ಜಾರಿಗೊಳಿಸಿದೆ.
ನಗರದ ಎಲ್ಲ 31 ವಾರ್ಡ್‌ಗಳಲ್ಲಿ " ಕಸ ಕಂಡರೇ ಫೊಟೋ ಕಳ್ಸಿ" ಎಂಬ ನೂತನ ಪ್ರಯೋಗಕ್ಕೆ ಮುಂದಾಗಿದ್ದಾರೆ. ಈ ಕುರಿತು ಸೋಮವಾರ ಸಂಜೆ ನಗರಸಭೆ ಸಭಾಂಗಣದಲ್ಲಿ ನಡೆದ ಸರ್ವ ಸಿಬ್ಬಂದಿಗಳ ಸಭೆಯಲ್ಲಿ ಈ ಬಗ್ಗೆ ನೀಲನಕ್ಷೆ ಸಿದ್ದಗೊಳಿಸಿ ನಾಳೆಯಿಂದಲೇ ಈ ಕೆಲಸ ಶುರು ಮಾಡಲು ನಿರ್ಣಯ ತೆಗೆದುಕೊಳ್ಳಲಾಗಿದೆ.
ಈ ವೇಳೆ ಮಾತನಾಡಿದ ಅಧ್ಯಕ್ಷೆ ಲಲಿತಾ ಅನಪುರ, ರಾಜ್ಯದ ಬೇರೆ ಬೇರೆ ನಗರಗಳಂತೆಯೇ ಜಿಲ್ಲಾ ಕೇಂದ್ರದ ಸ್ಥಾನವಾಗಿರುವ ಯಾದಗಿರಿಯು ಸ್ಚಚ್ಛ ಮತ್ತು ಸುಂದರಿಕರಣಗೊಳಿಸಲು ಈ ಒಂದು ಹೊಸ ಯೋಜನೆ ಜಾರಿಗೆ ತರಲಾಗಿದೆ ಎಂದರು.
ಇದಕ್ಕೊಂದು ಟಾಸ್ಕ್ ಪೋರ್ಸ ಅಧಿಕಾರಿಗಳ ತಂಡ ರಚನೆ ಮಾಡಲಾಗಿದೆ. ಇದರಲ್ಲಿ ಮೂವರು ನೋಡೆಲ್ ಅಧಿಕಾರಿ ಮತ್ತು ಇಬ್ಬರು ಮೇಲ್ವಿಚಾರಕರು ಹಾಗೂ ಇಬ್ಬರು ಪೌರ ಕಾರ್ಮಿಕರು ಸೇರಿದಂತೆಯೇ ಅಗತ್ಯ ಸಿಬ್ಬಂದಿ ಈ ಕೆಲಸ ದಿನದಲ್ಲಿ 12 ಗಂಟೆ ಮಾಡುತ್ತದೆ ಅನಪುರ ವಿವರಿಸಿದರು.
ಸಭೆಯಲ್ಲಿ ಉಪಾಧ್ಯಕ್ಷೆ ರೂಕಿಯಾ ಬೇಗಂ, ಪೌರಾಯುಕ್ತ ಉಮೇಶ ಚವ್ಹಾಣ,ಎಇಇ ರಜನಿಕಾಂತ ಶೃಂಗೇರಿ, ನಗರಸಭೆ ಸದಸ್ಯರು, ಎಸ್ಐಗಳು ಸೇರಿದಂತೆಯೇ ಇತರರಿದ್ದರು.
ದೂರವಾಣಿ ಸಂಖ್ಯೆಗಳಾದ 9591584885 7411741576, 9743124199 ಗೇ ಕಸ ಕಂಡರೇ ಫೊಟೋ ತೆಗೆದು ಕಳಿಸಿದರೇ ದಿನದ 24 ಗಂಟೆಗಳಲ್ಲಿ ಅಲ್ಲಿಂದ ರವಾನೆ ಮಾಡಲಾಗುವುದೆಂದು ಪೌರಾಯುಕ್ತ ಉಮೇಶ ಚವ್ಹಾಣ ತಿಳಿಸಿದ್ದಾರೆ