ಯಾದಗಿರಿ | ಸರಕಾರದ ಬೆಂಬಲ ಬೆಲೆ ಯೋಜನೆಯಡಿ ತೊಗರಿ ಕಾಳು ಖರೀದಿ ಕೇಂದ್ರ ಸ್ಥಾಪನೆ : ಡಿಸಿ ಹರ್ಷಲ್ ಭೋಯರ್
ಯಾದಗಿರಿ: ಜಿಲ್ಲೆಯ ರೈತ ಭಾಂಧವರು ಸರಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಎಫ್.ಎ.ಕ್ಯೂ ಗುಣಮಟ್ಟದ ತೊಗರಿ ಕಾಳು, ಪ್ರತಿ ಕ್ವಿಂಟಾಲ್‌ಗೆ 8,000 ರೂ. ನಂತೆ ಪ್ರತಿ ಎಕರೆಗೆ 4 ಕ್ವಿಂಟಲ್ ಗರಿಷ್ಠ ತೊಗರಿ ಕಾಳು ಹಾಗೂ ಪ್ರತಿ ರೈತರಿಂದ ಫ್ರೂಟ್ಸ್ ತಂತ್ರಾಂಶದಲ್ಲಿ ನಮೂದಿಸಿರುವ ಜಮೀನಿನ ಪ್ರಮಾಣದಂತೆ ರೈತರ ನೋಂದಣಿ ಕಾಲಾವಧಿಯನ್ನು 80 ದಿನಗಳವರೆಗೆ ಹಾಗೂ ಖರೀದಿ ಅವಧಿಯನ್ನು 90 ದಿನಗಳ ವರೆಗೆ ನಿಗಧಿಪಡಿಸಿದೆ ಎಂದು ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಅವರು ತಿಳಿಸಿದ್ದಾರೆ.
ರೈತರು POS ಯಂತ್ರಗಳ ಮೂಲಕ ರೈತರ ನೊಂದಣಿ ಹಾಗೂ ಖರೀದಿ ಪ್ರಕ್ರಿಯೆಯಲ್ಲಿ UIDAI ಬಯೋಮೆಟ್ರಿಕ್ ಮೂಲಕ ಸಂಬಂಧಿಸಿದ ಖರೀದಿ ಕೇಂದ್ರಗಳಲ್ಲಿ ನೊಂದಾಯಿಸುವುದು ಕಡ್ಡಾಯವಾಗಿರುತ್ತದೆ. ಹುಟ್ಟುವಳಿ ಮಾರಾಟ ಮಾಡಿದ ರೈತರಿಗೆ DBT ಮೂಲಕ ಹಣ ಪಾವತಿಸಲಾಗುವುದು. ಈ ಕೆಳಕಾಣಿಸಿದ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಕೇಂದ್ರಗಳಿಗೆ ಸಂಪರ್ಕಿಸಿ, ಸದರಿ ಯೋಜನೆಯ ಲಾಭ ಪಡೆಯಲು ಅವರು ಕೋರಿದ್ದಾರೆ.
ಯಾದಗಿರಿ ತಾಲೂಕಿನ ಪಿಎಸಿಎಸ್ ಹತ್ತಿ ಕುಣಿ 7892741116, ಯಾದಗಿರಿ ಟಿಎಪಿಸಿಎಮ್‌ಎಸ್ - 7019524908 ಹಾಗೂ ಪಿಎಸಿಎಸ್ ರಾಮಸಮುದ್ರ -9945405710 ಗೆ ಸಂಪರ್ಕಿಸಬಹುದು.
ಶಹಾಪುರ ತಾಲೂಕಿನ ಶಹಾಪುರ ಟಿಎಪಿಸಿಎಮ್‌ಎಸ್ -9448577858, ಪಿಎಸಿಎಸ್ ಚಾಮನಾಳ- 80882886797, ಹೊಸಕೇರಾ ಪಿಎಸಿಎಸ್ -9741138687, ಎಫ್ ಪಿ ಓ ಗಂಗನಾಳ -9902623346, ಪಿಎಸಿಎಸ್ ದೋರನಹಳ್ಳಿ -9902124640 , ಪಿಎಸಿಎಸ್ ಮದ್ರಕಿ 9980944446 ಗೆ ಸಂಪರ್ಕಿಸಬೇಕು.
ಸುರಪುರ ತಾಲೂಕಿನ ಟಿಎಪಿಸಿಎಮ್‌ಎಸ್ 7259688231, ಕೆಂಭಾವಿ ಪಿಎಸಿಎಸ್-(1) ,8970100234, ಕೆಂಭಾವಿ ಪಿಎಸಿಎಸ್ (2)-9741854971 , ಪಿಎಸಿಎಸ್ ಮಾಲಗತ್ತಿ-9108636156, ಪಿಎಸಿಎಸ್ ಮುನಿರ್ ಬೊಮ್ಮನಹಳ್ಳಿ 9663157756, ಪಿಎಸಿಎಸ್ ನಗನೂರ್ 9880456797 ಹಾಗೂ ಪಿಎಸಿಎಸ್ ಯಾಳಗಿ - 9945767305 ಗೆ ಸಂಪರ್ಕಿಸಬಹುದು.
ಹುಣಸಗಿ ತಾಲೂಕಿನ ಟಿ ಎಪಿಸಿಎಂಎಸ್ ಹುಣಸಗಿ- 9535220396, ಪಿಎಸಿಎಸ್ ಕೊಡೆಕಲ್ 7349666155, ಪಿಎಸಿಎಸ್ ರಾಜನ್ ಕೊಳೂರು- 9741764178, ಪಿಎಸಿಎಸ್ ಹಗರಟಗಿ 9361935156 ಸಂಪರ್ಕಿಸಬೇಕು.
ವಡಗೇರಾ ತಾಲೂಕಿನ ಪಿಎಸಿಎಸ್ ಬೆಂಡೆಗಂಬಳಿ 9902813005, ಪಿಎಸಿಎಸ್ ಹೈಯಾಳ ಬಿ 9110603122, ಪಿಎಸಿಎಸ್ ನಾಯ್ಕಲ್ - 974161655 , ಗುರುಮಠಕಲ್ ತಾಲೂಕಿನ ಪಿಎಸಿಎಸ್ ಚಪೇಟ್ಲ 7259543708, ಎಫ್‌ಪಿಓ ಗುರುಮಠಕಲ್ 7259543708, ಸೈದಾಪುರ ಎಫ್‌ಪಿಓ 7022192270, ಎಫ್‌ಪಿಓ ಕೊಂಕಲ್- 7204922282 ಸಂಪರ್ಕಿಸಲು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.