ಬಣಜಿಗ ಸಮಾಜದ ಹುಣಸಗಿ ತಾಲೂಕು ಘಟಕದ ಅಧ್ಯಕ್ಷರಾಗಿ ನೀಲಕಂಠ ಅವಿರೋಧ ಆಯ್ಕೆ

Update: 2026-08-09 18:59 IST

ಹುಣಸಗಿ: ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಹುಣಸಗಿ ತಾಲೂಕು ಘಟಕದ ಗೌರವ ಅಧ್ಯಕ್ಷರಾಗಿ ನಾಗಣ್ಣ ಸಾಹು ದಂಡಿನ ಹಾಗೂ ತಾಲೂಕು ಅಧ್ಯಕ್ಷರಾಗಿ ನೀಲಕಂಠ ಚಿಂಚೋಳಿ ಅವಿರೋಧವಾಗಿ ಆಯ್ಕೆಯಾದರು.

ಪಟ್ಟಣದ ಯುಕೆಪಿ ಕ್ಯಾಂಪ್‌ನ ನೀಲಕಂಠೇಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ಆಯ್ಕೆ ಸಭೆಯಲ್ಲಿ ಸಮಾಜದ ಮುಖಂಡರ ಸರ್ವಾನುಮತದೊಂದಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವ ಅಧ್ಯಕ್ಷ ನಾಗಣ್ಣ ಸಾಹು ದಂಡಿನ ಮಾತನಾಡಿ, ಸಮಾಜದ ಏಳಿಗೆ ಹಾಗೂ ಸಮಸ್ಯೆಗಳ ಪರಿಹಾರಕ್ಕಾಗಿ ಎಲ್ಲರನ್ನು ಒಗ್ಗೂಡಿಸಿ, ಸಮಾಜದ ಕಷ್ಟ-ಸುಖಗಳಲ್ಲಿ ಭಾಗಿಯಾಗುವ ಮೂಲಕ ನೀಲಕಂಠೇಶ್ವರನ ಆಶೀರ್ವಾದದಿಂದ ಉತ್ತಮ ಕಾರ್ಯಗಳನ್ನು ಮಾಡಬೇಕಿದೆ ಎಂದರು.  

ಅಧ್ಯಕ್ಷ ನೀಲಕಂಠ ಚಿಂಚೋಳಿ ಮಾತನಾಡಿ, ಸಮಾಜದ ಹಿರಿಯರ ಮಾರ್ಗದರ್ಶನದಲ್ಲಿ ಯುವಶಕ್ತಿಯನ್ನು ಸಂಘಟಿಸಿ ಸಮಾಜದ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.

ಬಸವರಾಜ ಮೇಲಿನಮನಿ ಪ್ರಾಸ್ತಾವಿಕವಾಗಿ ಮಾತನಾಡಿ, ಬಣಜಿಗ ಸಮಾಜದ ಇತಿಹಾಸ, ಪ್ರಸ್ತುತ ಸ್ಥಿತಿ ಹಾಗೂ ಮುಂದಿನ ಬೆಳವಣಿಗೆ ಕುರಿತು ವಿವರಿಸಿದರು.

ಈ ಸಂದರ್ಭ ಬಣಜಿಗ ಸಮಾಜದ ರಾಚಪ್ಪ ಪಟ್ಟಣಶೆಟ್ಟಿ, ಬಸವರಾಜ್ ಬಳಿ, ತಿಪ್ಪಣ್ಣ ಚಂದಾ, ಮಲ್ಲಣ್ಣ ಬ್ಯಾಕೋಡ, ಆರ್. ಸಿ.ಪಾಟೀಲ್‌, ಗುರಣ್ಣ ಚಿಂಚೋಳಿ, ತಿಪ್ಪಣ್ಣ ಚಂದಾ, ಸುರಪುರ ತಾಲೂಕಾ ಅಧ್ಯಕ್ಷ ಸುರೇಶ ತಂಬಾಕಿ, ಪ್ರಧಾನ ಕಾರ್ಯದರ್ಶಿ ಮಹಾದೇವಪ್ಪಗೌಡ, ಶಿವನಗೌಡ ಬಿರಾದಾರ, ವಿಜಯಪುರ ಜಿಲ್ಲಾ ಬಣಜಿಗ ಸಮಾಜದ ಉಪಾಧ್ಯಕ್ಷ ಶಿವಲಿಂಗ ಪಾಲ್ಕಿ, ತಾಳಿಕೋಟಿ, ಮಹೇಶ್ ಆನೆಗುಂದಿ, ಮಹಾಲಿಂಗೇಶ ಪಟ್ಟಣಶೆಟ್ಟಿ, ವಿರೇಶ್ ಚಿಂಚೋಳಿ, ಚಂದ್ರಶೇಖರ್ ದಂಡಿನ, ಸಿದ್ರಾಮಪ್ಪ ಮುದಗಲ್, ಮಹಾದೇವ ಚಂದಾ, ಶರಣು ದಂಡಿನ, ಅನಿಲ ಬಳಿ, ನೀಲಕಂಠ ಹೊನಕಲ್, ಶರಣು ವೈಲಿ, ಬಸವರಾಜ ವೈಲಿ, ಶಿವು ಪಡಶೆಟ್ಟಿ, ಶಿವಲಿಂಗ ಪಟ್ಟಣಶೆಟ್ಟಿ, ಗುಂಡು ಅಂಗಡಿ, ರಮೇಶ್ ವಾಲಿ, ಸುಗೂರೇಶ್ ಮುದನೂರ, ಮಂಜುನಾಥ್ ಬಳಿ, ಮಂಜುನಾಥ್ ನುಲಿನ, ಶಿವು ಶೇವಟಿ, ಚನ್ನಕುಮಾರ ಬ್ಯಾಕೋಡ, ಪ್ರಭು ನುಲಿನ ಸೇರಿದಂತೆ ಸಮಾಜದ ಇತರರಿದ್ದರು.

ಶಿಕ್ಷಕ ಶಿವಕುಮಾರ್ ಬಂಡೋಳಿ ಸ್ವಾಗತಿಸಿ ನಿರೂಪಿಸಿದರು. ವಿರೇಶ್ ಬ್ಯಾಕೋಡ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News