×
Ad

ಕೋಟೆಗಾರವಾಡ ನಗರಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ನಗರಸಭೆ ಅಧ್ಯಕ್ಷರಿಗೆ ಮನವಿ

Update: 2025-03-03 18:14 IST

ಯಾದಗಿರಿ : ನಗರದ ಕೋಟೆಗಾರವಾಡಾದಲ್ಲಿ ಸುಮಾರು 40 ಆಶ್ರಯ ಮನೆಗಳಿದ್ದು, ಇಲ್ಲಿ ಇರುವ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಇದ್ದು, ಈ ಓಣಿಗೆ ಪೈಪ್ ಲೈನ್ ಸಂಪರ್ಕ ನೀಡಿ, ನಳಿಗಳು ಕೂಡಿಸಬೇಕು ಎಂದು ನಗರಸಭೆ ಅಧ್ಯಕ್ಷರಿಗೆ ಗ್ರಾಮಸ್ಥರು ಮನವಿ ಪತ್ರ ಸಲ್ಲಿಸಿದರು.

ನಗರದಲ್ಲಿ ಚರಂಡಿ ಇಲ್ಲದೇ ಇದ್ದರಿಂದ ಬಚ್ಚಲು ನೀರು ಸಾರ್ವಜನಿಕರು ಓಡಾಡುವ ರಸ್ತೆ ಮೇಲೆ ನಿಲ್ಲುತ್ತಿದೆ. ಸ್ವಚ್ಛತೆ ಇಲ್ಲದೇ ಜನರು ಪರದಾಡುತ್ತಿದ್ದಾರೆ. ರಸ್ತೆಗಳು ಇಲ್ಲದೇ ಜನರಿಗೆ ಓಡಾಡಲು ಕಷ್ಟವಾಗಿದೆ. ಜನರಿಗೆ ಬೆಳಕಿನ ವ್ಯವಸ್ಥೆ ಇಲ್ಲ. ಈ ಮೇಲ್ಕಂಡ ಎಲ್ಲಾ ಸೌಲಭ್ಯಗಳನ್ನು ಈ ಕೂಡಲೇ ಅಳವಡಿಸಬೇಕು ಹಾಗೂ ಸ್ಮಶಾನದ ಹತ್ತಿರ ಬೋರವೆಲ್ ಕೆಟ್ಟು ಹೋಗಿದ್ದು, ರಿಪೇರಿ ಮಾಡಿಸಿ, ಇಲ್ಲಿ ಕುಡಿಯುವ ನೀರಿನ ಟ್ಯಾಂಕ್ ನಿರ್ಮಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ರಾಹುಲ್ ಕೊಲ್ಲೂರಕರ್ ಜಿಲ್ಲಾಧ್ಯಕ ಆಂಜನೇಯ ಭಂಡಾರಿ, ಹಸನ್ ನಾಧಫ್, ರಮೇಶ್ ಗಣಪುರ, ರಾಧಾಕೃಷ್ಣ ಕೌಳೂರಕರ್ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News