×
Ad

ಯಾದಗಿರಿ ನಗರಸಭೆಯಲ್ಲಿ ಯಶಸ್ವಿಯಾಗಿ ನಡೆದ 4ನೇ ಜನಸ್ಪಂದನ ಕಾರ್ಯಕ್ರಮ

Update: 2025-05-27 17:42 IST

ಯಾದಗಿರಿ : ನಗರದ ಸಾರ್ವಜನಿಕರ ಆಸ್ತಿಗಳ ಎ- ಖಾತಾ, ಬಿ- ಖಾತಾ ಡಿಜಟಿಲೀಕರಣ ಕಾರ್ಯಕ್ಕೆ ವೇಗ ನೀಡುವ ನಿಟ್ಟಿನಲ್ಲಿ ಮತ್ತು ಇತರೆ ಅಹವಾಲು ಸ್ವೀಕರಿಸಲು ನಗರಸಭೆ ಸಭಾಂಗಣದಲ್ಲಿ ಸೋಮವಾರ ಈಡೀ ದಿನ ನಡೆದ ಜನಸ್ಪಂಧನ ಸಭೆ ಅತ್ಯಂತ ಯಶಸ್ಸಿಯಾಗುವ ಮೂಲಕ ಅಧ್ಯಕ್ಷೆ ಲಲಿತಾ ಅನಪುರ ಮತ್ತು ಪೌರಾಯುಕ್ತರ ಕಾರ್ಯ ಜನ ಮೆಚ್ಚುಗೆ ಗಳಿಸಿತು.

ಬೆಳಗ್ಗೆ 10ಕ್ಕೆ ಆರಂಭವಾದ ಸಭೆಯಲ್ಲಿ ನಗರದ ಹಲವಾರು ಜನರು ತಮ್ಮ ಆಸ್ತಿ ಖಾತೆಗಳ ಹಾಗೂ ಇತರೆ ಸಮಸ್ಯೆಗಳ ಅಹವಾಲು ಅಧ್ಯಕ್ಷರಿಗೆ ಸಲ್ಲಿಸಿದರು.

ಸ್ವೀಕರಿಸಿದ ಪ್ರತಿ ಅರ್ಜಿಗಳನ್ನು ಅಧ್ಯಕ್ಷೆ ಅನಪುರ ಕುಲಂಕೂಷವಾಗಿ ಪರಿಶೀಲಿಸಿ, ಯಾವ ಸಿಬ್ಬಂದಿ ಹತ್ತಿರ ಫೈಲ್ ಇದೆ, ಯಾಕೇ ಬಾಕಿಯಾಗಿದೆ, ಮುಂದೇ ಏನು ಮಾಡಬೇಕೆಂಬ ಬಗ್ಗೆ ಸ್ಥಳದಲ್ಲಿಯೇ ಅರ್ಜಿ ನೀಡಿದವರ ಎದುರಿಗೆ ಸಂಬಂಧಪಟ್ಟವರನ್ನು ಕರೆದು ವಿವರಣೆ ಪಡೆದು, ಎಲ್ಲವೂ ನಿಯಮದ ಪ್ರಕಾರ ಇದ್ದರೇ ಕೂಡಲೇ ಮಾಡಿಕೊಡಲು ಸೂಚಿಸಿ, ಅನೇಕರ ಕೆಲಸ ಮಾಡಿಕೊಡುವ‌ ಮೂಲಕ ಜನಮೆಚ್ಚಿಗೆ ಪಡೆದರು. ಇದಕ್ಕೆ ಪೌರಾಯುಕ್ತ ಉಮೇಶ ಚವ್ಹಾಣ ಸಾಥ್‌ ನೀಡಿದರು.

ಇಂದಿನ ಜನಸ್ಪಂದನ ಸಭೆಯಲ್ಲಿ ಖಾತಾಗಳ ಡಿಜಟಿಲೀಕರಣಕ್ಕೆ ಸಂಬಂಧಿಸಿಂತೆಯೇ ಹೆಚ್ಚು ಒತ್ತು ನೀಡಿ ಸುಮಾರು 25ಕ್ಕೂ ಹೆಚ್ಚು ಜನರಿಗೆ ಜನರಿಗೆ ಸ್ಥಳದಲ್ಲಿಯೇ ದಾಖಲೆಗಳನ್ನು ವಿತರಿಸಿದರು.

ಇನ್ನು ಅನೇಕರು ತಮ್ಮ ಬಡಾವಣೆಗಳ ಸಮಸ್ಯೆಗಳ ಬಗ್ಗೆ ನೀಡಿದ ಮನವಿಗೆ ಸ್ಪಂದಿಸಿದ ಅವರು, ಅವುಗಳ ವಿಲೇವಾರಿಗೆ ಮತ್ತು ಸಮಸ್ಯೆ ತಿಳಿದು ಬಗೆಹರಿಸುವಂತೆ ಅಲ್ಲಿಯೇ ಇದ್ದ ವಿವಿಧ ವಿಭಾಗಗಳ ಅಧಿಕಾರಿ ಸಿಬ್ಬಂದಿಗಳಿಗೆ ಸೂಚಿಸಿದರು.

ಈ ಹಿಂದೇ ನಡೆದ ಮೂರು ಜನಸ್ಪಂದನ ಸಭೆಯಲ್ಲಿ ಜನರು ಸಲ್ಲಿಸಿದ ಅರ್ಜಿಗಳ ಬಗ್ಗೆ ಪರಿಶೀಲಿಸಿ, ಅನೇಕ ಮೂಲಭೂತ ಸೌಲಭ್ಯಗಳ ಚರ್ಚಿಸಿ ಕೂಡಲೇ ಸಂಬಂಧಪಟ್ಟ ವಾರ್ಡ್‌ಗಳ ಸದಸ್ಯರುಗಳಿಂದ ಮಾಹಿತಿ ಪಡೆದು ಕೆಲಸ ಮಾಡುವಂತೆಯೇ ಅಧ್ಯಕ್ಷೆ ಅನಪುರ ಸೂಚಿಸಿದರು.

ಸಮಗ್ರ ಮಾಹಿತಿಯೊಂದಿಗೆ ಸಿಬ್ಬಂದಿ ಹಾಜರ್ :

ಇದು ನಾಲ್ಕನೇ ಜನಸ್ಪಂದನ ಕಾರ್ಯಕ್ರಮವಾಗಿತ್ತು. ನಗರಸಭೆ ಸರ್ವ ಸಿಬ್ಬಂದಿ, ಕೆಲವು ಸದಸ್ಯರು ಭಾಗವಹಿಸಿದ್ದರು. ನಗರದ 31 ವಾರ್ಡ್‌ಗಳ ಸಮಗ್ರ ಮಾಹಿತಿಯೊಂದಿಗೆ ಅಧಿಕಾರಿ, ಸಿಬ್ಬಂದಿ ಸಭೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಕೆಲಸ ವಿಳಂಬಕ್ಕೆ ಮತ್ತು ಸಮಸ್ಯೆಯಾಗಿದ್ದರೇ ಎಲ್ಲಿಂದ ,ಯಾರಿಂದ ಎಂಬ ಮಾಹಿತಿ ಸ್ಥಳದಲ್ಲಿಯೇ ಪಡೆದ ಅಧ್ಯಕ್ಷರು, ಬಂದ ಜನರಿಗೆ ಕೂಡಿಸಿ ಒಂದೆರಡು ತಾಸುಗಳಲ್ಲಿಯೇ ಅವುಗಳನ್ನು ಬಗೆಹರಿಸುವ ಮೂಲಕ ಕೆಲಸದಲ್ಲಿ ಕ್ರೀಯಾಶೀಲತೆ ಕಂಡು ಬಂತು. ಬೆಳಗ್ಗೆಯಿಂದ ರಾತ್ರಿ 7.30 ರತನಕ ನಡೆಯಿತು.


ಇಂದಿನ‌ ಸಭೆಯಲ್ಲಿ ಮುಖ್ಯವಾಗಿ ಎ ಖಾತಾ,ಬಿ ಖಾತಾಗಳ ಡಿಜಿಕರಣ ಮಾಡಲು ಒತ್ತು ನೀಡಲಾಗಿತ್ತು. ಇಂದು ರಾತ್ರಿ 12 ಗಂಟೆಯಾದರೂ ಬಂದ ಅರ್ಜಿಗಳನ್ನು ಪರಿಶೀಲಿಸಿ ಇತ್ಯರ್ಥಗೊಳಿಸಲು ಸಭೆ ಆರಂಭಗೊಂಡಿತ್ತು.

ಸಚಿವರ ಜನಸ್ಪಂದನ ಸಭೆಯಲ್ಲಿ ಸಲ್ಲಿಸಿದ್ದ ಸಿಸಿ ರಸ್ತೆ ನಿರ್ಮಾಣದ ಮನವಿಗೆ ನಗರಸಭೆಯಿಂದ ಐದು ಲಕ್ಷ ರೂ. ಒಳಗಡೆ ಕಾಮಗಾರಿ ಇದ್ದರೇ ಮಾಡಿಕೊಡುವ ಭರವಸೆ ಅಧ್ಯಕ್ಷರು ನೀಡಿದರು. ನಗರಸಭೆ ಎಲ್ಲ ಸಿಬ್ಬಂದಿ ಕಾರ್ಯದಲ್ಲಿ‌ ನಿರತರಾಗಿದ್ದರು.

ನಗರಸಭೆ ಸದಸ್ಯ‌ ಮಂಜುನಾಥ್ ದಾಸನಕೇರಿ, ಹಣಮಂತ ನಾಯಕ, ಮಾಶಪ್ಪ ನಾಯಕ, ಅಬ್ದುಲ್ಲಾ, ನಗರಸಭೆ ಮ್ಯಾನೇಜರ್ ಅಶ್ವಿನಿ, ರಮೇಶ, ಅಂಬಿಕೆಶ್ವರ್, ನಾಗರಾಜ, ಜಗದೇವಿ ಸೇರಿದಂತೆಯೇ ಇತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News