×
Ad

ಯಾದಗಿರಿ | ಐಕೂರ ಪಂಚಾಯತ್‌ನಲ್ಲಿ ಅವ್ಯವಹಾರ ಆರೋಪ : ತನಿಖೆಗೆ ಮನವಿ

Update: 2024-11-27 16:42 IST

ಯಾದಗಿರಿ : ಇಲ್ಲಿನ ವಡಗೇರಾ ತಾಲ್ಲೂಕಿನ ಐಕೂರು ಗ್ರಾಮ ಪಂಚಾಯತ್‌ನಲ್ಲಿ ಉದ್ಯೋಗ ಖಾತ್ರಿ ಮತ್ತು 15ನೇ ಹಣಕಾಸು ಯೋಜನೆಯಡಿ ಅಧಿಕಾರ ದುರ್ಬಳಕೆ ಆಗಿದೆ ಎಂದು ಆರೋಪಿಸಿ, ಪಿಡಿಓ ಮತ್ತು ಅಧ್ಯಕ್ಷರ ವಿರುದ್ಧ ತನಿಖೆ ನಡೆಸಬೇಕೆಂದು ಕರ್ನಾಟಕ ನಾಯಕರ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಮಾನುಷಯ್ಯ ಪರೇಟಿ ನೇತೃತ್ವದಲ್ಲಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಉದ್ಯೋಗ ಖಾತ್ರಿ ಯೋಜನೆಯಡಿ ಕಳಪೆ ಕಾಮಗಾರಿ ಮಾಡಿದ್ದು, ಪಿಡಿಓ ಮತ್ತು ಅಧ್ಯಕ್ಷರು ಗ್ರಾ.ಪಂ. ಸದಸ್ಯರ ಗಮನಕ್ಕೆ ತರದೇ ಅವರೇ ಕ್ರಿಯಾ ಯೋಜನೆ ಮಾಡಿ ಕಾಮಗಾರಿ ನಡೆಸಿ ಬೋಗಸ್ ಮಾಡಿತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಘನ ತ್ಯಾಜ್ಯ ವಿಲೇವಾರಿ ವಾಹನ ಇಲ್ಲಿಯವರೆಗೆ ಉಪಯೋಗ ಮಾಡಿಲ್ಲ, ಕಸ ವಿಲೇವಾರಿ ಕೆಲಸ ಮಾಡುತ್ತಿಲ್ಲ. ಎಲ್ಲಾ ವಾಡ್೯ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಸಮಸ್ಯೆಗಳನ್ನು PDO ಗಮನಕ್ಕೆ ತಂದರು ಕ್ಯಾರೇ ಅನ್ನುತಿಲ್ಲ. ಮುಂದಿನ ದಿನಗಳಲ್ಲಿ ಯಾದಗಿರಿ ಜಿಲ್ಲಾ ಪಂಚಾಯತ್ ಮುಂದೆ ಊರಿನ ಗ್ರಾಮಸ್ಥರ ಸೇರಿ ಹೋರಾಟ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಶರಣು ದೊರೆ ಶರಣಪ್ಪ ಮೆದರಗೋಳ, ಗಂಗಾಧರ್, ಮತ್ತು ಗ್ರಾಮಸ್ತರು ಸೇರಿದಂತೆ ಅನೇಕರು ಇದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News